ಗೌರಿ ಹತ್ಯೆ: ನವೀನ್ ವಿರುದ್ಧ ಚಾರ್ಜ್‌ಶೀಟ್ ಸಿದ್ಧಪಡಿಸಿದ ಎಸ್ಐಟಿ

ಬೆಂಗಳೂರು, ಏಪ್ರಿಲ್ 26: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ವಿರುದ್ಧ ಎಸ್ಐಟಿ ಜಾರ್ಜ್‌ಶೀಟ್‌ ಸಿದ್ಧಪಡಿಸಿದೆ.

ಗೌರಿ ಲಂಕೇಸ್ ಹತ್ಯೆಯಲ್ಲಿ ನವೀನ್‌ ಮತ್ತು ಆತನ ಇಬ್ಬರು ಸಹಚರರು, ಜೊತೆಗೆ ಮತ್ತಿಬ್ಬರು ಶಾರ್ಪ್‌ಶೂಟರ್‌ಗಳು ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಕಲೆ ಹಾಕಿರುವ ಎಸ್ಐಟಿ ಈ ಸಂಬಂಧ 15 ದಿನಗಳೊಳಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಚಿಂತನೆ ನಡೆಸಿದೆ.

ಗೌರಿ ಕೊಲೆಗೆ ಸಂಚು ರೂಪಿಸಿ, ಕಾರ್ಯಗತಗೊಳಿಸುವ ಸಂಬಂಧ ನವೀನ್ ಆನೆಕಲ್ ನ ವ್ಯಕ್ತಿಯೊಬ್ಬರ ಜೊತೆ ನಡೆಸಿರುವ ಸಂಭಾಷಣೆ ಎಸ್ಐಟಿಗೆ ಸಿಕ್ಕಿದೆ ಎನ್ನಲಾಗಿದೆ.

Gauri Lankesh murder case: SIT prepares charge sheet against Naveen

ಇದಲ್ಲದೆ ನವೀನ್ ಕೊಳ್ಳೆಗಾಲ ಹಾಗೂ ಸತ್ಯಮಂಗಲ ಅರಣ್ಯ ಪ್ರದೇಶಗಳಲ್ಲಿ ಸಹಚರರೊಂದಿಗೆ ಸಂಚಿನ ಬಗ್ಗೆ ಚರ್ಚೆ ನಡೆಸಿದ್ದ. ವಿಚಾರಣೆ ವೇಳೆ ಇದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಎಸ್‌ಐಟಿ ಮೂಲಗಳು ಹೇಳಿದ್ದಾಗಿ ವರದಿಯಾಗಿದೆ.

ನವೀನ್ ಮತ್ತು ಆತನ ಸಹಚರರು ಕೃತ್ಯಕ್ಕೆ ಬಳಸಿದ್ದ ಪಿಸ್ತೂಲನ್ನು ಕೊಳ್ಳೆಗಾಲ ಅಥವಾ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾರೆ ಎನ್ನುವ ಮಾಹಿತಿಗಳು ಎಸ್ಐಟಿಗೆ ಸಿಕ್ಕಿದ್ದು, ಈ ಪ್ರದೇಶದಲ್ಲಿ ಹುಟುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿಯೂ ಎಸ್ಐಟಿ ಉಲ್ಲೇಖ ಮಾಡಲಿದೆ ಎಂದು ತಿಳಿದು ಬಂದಿದೆ.

2017ರ ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಮುಂಭಾಗ ಗೌರಿ ಲಂಕೇಶ್ ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+