• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೌರಿ ಲಂಕೇಶ್‌ರನ್ನು ಕೊಲ್ಲಲು ಕೊಟ್ಟಿದ್ದು ಕೇವಲ 13000 ರೂಪಾಯಿ

By Manjunatha
|

ಬೆಂಗಳೂರು, ಜೂನ್ 18: ಗೌರಿ ಲಂಕೇಶ್‌ಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿರುವ ಸಿಂಧಗಿಯ ಪರಶುರಾಮ್ ವಾಘ್ಮೋರೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗಿನಿಂದಲೂ ದಿನಕ್ಕೊಂದು ಕುತೂಹಲಕಾರಿ ಮಾಹಿತಿ ಹೊರ ಬೀಳುತ್ತಲೇ ಇವೆ.

ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ್ದಕ್ಕೆ ಪರಶುರಾಮ್‌ಗೆ ಸಿಕ್ಕಿದ್ದು ಕೇವಲ 13000 ರೂಪಾಯಿ ಮಾತ್ರವೇ ಅಂತೆ. ಹೀಗೆಂದು ವಿಚಾರಣೆ ವೇಳೆ ಪರಶುರಾಮ್ ಹೇಳಿದ್ದಾನೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಸಚಿವರ ಹತ್ಯೆಗೂ ಸ್ಕೆಚ್ ಹಾಕಿದ್ರು ಗೌರಿ ಹತ್ಯೆ ಆರೋಪಿಗಳು

ಗೌರಿಯನ್ನು ಕೊಲ್ಲಲು ಬೆಂಗಳೂರಿಗೆ ಬರುವಾಗ 3000 ಸಾವಿರ ರೂಪಾಯಿ ಕೊಟ್ಟಿದ್ದರಂತೆ ಆ ನಂತರ ಗೌರಿಯನ್ನು ಕೊಂದ ದಿನವೇ ವ್ಯಕ್ತಿಯೊಬ್ಬ ಬಂದು 10000 ಸಾವಿರ ಪರಶುರಾಮ್‌ಗೆ ಕೊಟ್ಟು ಹೊರಟುಹೋದನಂತೆ. ಹಣ ಕೊಟ್ಟವರ ಮಾಹಿತಿ ಸಹ ಪರಶುರಾಮ್‌ಗೆ ಗೊತ್ತಿಲ್ಲ. ಆದರೆ ಮುಖ ನೋಡಿದರೆ ಗುರುತು ಹಿಡಿಯುತ್ತೇನೆ ಎಂದಿದ್ದಾನೆ ಪರಶುರಾಮ್‌.

ಹಣಕ್ಕಾಗಿ ಮಾಡಿಲ್ಲ ಕೊಲೆ

ಹಣಕ್ಕಾಗಿ ಮಾಡಿಲ್ಲ ಕೊಲೆ

ಆದರೆ ಹಣಕ್ಕಾಗಿ ನಾನು ಕೊಲೆ ಮಾಡಿಲ್ಲ, ಗೌರಿ ಅವರ ಹಿಂದೂ ವಿರೋಧಿ ಭಾಷಣಗಳಿಂದ ಕೋಪೋಧ್ರಿಕ್ತನಾಗಿ ಧರ್ಮದ ಕಾರಣಕ್ಕಾಗಿ ಅವರನ್ನು ಕೊಂದೆ ನಾನು ಅವರಲ್ಲಿ ಹಣದ ಬೇಡಿಕೆ ಇಟ್ಟಿರಲಿಲ್ಲ ಎಂದು ಪರಶುರಾಮ್ ಎಸ್‌ಐಟಿ ಬಳಿ ಹೇಳಿದ್ದಾನೆ.

ಕೈ ಮುಗೀತೀನಿ ಮಗನ ಬಗ್ಗೆ ಕೇಳ್ಬೇಡಿ: ಅಂಗಲಾಚಿದ ಪರಶುರಾಮ್ ತಂದೆ

ಕೊಲೆ ಮಾಡಿದ ದಿನ 10000 ನೀಡಿದ್ದರು

ಕೊಲೆ ಮಾಡಿದ ದಿನ 10000 ನೀಡಿದ್ದರು

10000 ಸಾವಿರ ಹಣ ಕೊಟ್ಟಾತ, 'ಈಗ ಇಷ್ಟು ಇಟ್ಟುಕೊ, ನಿಮ್ಮ ಕುಟುಂಬದವರಿಗೆ ನಾವು ಹಣ ತಲುಪಿಸುತ್ತೇವೆ, ನಮ್ಮನ್ನು ಭೇಟಿಯಾಗುವ ಪ್ರಯತ್ನ ಮಾಡಬೇಡ, ನಾವೇ ಭೇಟಿ ಮಾಡುತ್ತೇವೆ' ಎಂದು ಮಾತ್ರವೇ ಹೇಳಿ ಹೊರಟು ಹೋಗಿದ್ದನಂತೆ.

ಕೊಲೆಯ ಬಗ್ಗೆ ಎಲ್ಲಿಯೂ ಚರ್ಚೆಯೇ ಮಾಡಿಲ್ಲ

ಕೊಲೆಯ ಬಗ್ಗೆ ಎಲ್ಲಿಯೂ ಚರ್ಚೆಯೇ ಮಾಡಿಲ್ಲ

ಕೊಲೆ ಮಾಡಿದ ನಂತರ ಪರಶುರಾಮ್ ಆ ಬಗ್ಗೆ ಯಾರ ಬಳಿಯೂ ಮಾತನಾಡಿರಲೇ ಇಲ್ಲವಂತೆ. ಮನೆಯವರಿಗೂ ಸಹ ಅನುಮಾನ ಬಾರದ ಹಾಗೆ ನಡೆದುಕೊಂಡಿದ್ದನಂತೆ. ಆದರೆ ಕುಟುಂಬವನ್ನು ಬಹಳವಾಗಿ ಪ್ರೀತಿಸುವ ಪರಶುರಾಮ್ ಈಗ ಸಂಪೂರ್ಣ ಕುಗ್ಗಿಹೋಗಿದ್ದು, ಕುಟುಂಬಕ್ಕೆ ದ್ರೋಹ ಮಾಡಿದೆನೆಂದು ಕೊರಗುತ್ತಿದ್ದಾನಂತೆ.

ತಾನೇ ಮಾಹಿತಿ ನೀಡುತ್ತಿದ್ದಾನೆ ಪರಶುರಾಮ್‌

ತಾನೇ ಮಾಹಿತಿ ನೀಡುತ್ತಿದ್ದಾನೆ ಪರಶುರಾಮ್‌

ಎಸ್‌ಐಟಿ ಪೊಲೀಸರ ಯಾವ ಒತ್ತಾಯವೂ ಇಲ್ಲದೆ ಪರಶುರಾಮ್‌ನೇ ತನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನೂ ಎಸ್‌ಐಟಿ ತಂಡಕ್ಕೆ ನೀಡುತ್ತಿದ್ದಾನೆ ಎನ್ನಲಾಗಿದೆ. ಏನೇ ಆಗಲಿ ಕುಟುಂಬದ ಕಷ್ಟಗಳಿಗೆ ಹೆಗಲು ಕೊಡಬೇಕಿದ್ದ ಮಗ ಧರ್ಮದ ಅಮಲು ಏರಿಸಿಕೊಂಡು ತಾನೂ ಶಿಕ್ಷೆ ಅನುಭವಿಸುತ್ತಾ ತನ್ನ ನಂಬಿದವರಿಗೂ ಶಿಕ್ಷೆ ನೀಡುತ್ತಿದ್ದಾನೆ.

ಪಿಸ್ತೂಲ್ ಕೊಟ್ಟವರಿಗೆ ಹುಡುಕಾಟ

ಪಿಸ್ತೂಲ್ ಕೊಟ್ಟವರಿಗೆ ಹುಡುಕಾಟ

ಗೌರಿ ಲಂಕೇಶ್ ಹತ್ಯೆ ಹಿಂದಿರುವ ಪ್ರಮುಖ ಆರೋಪಿಗಾಗಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಅಲ್ಲದೆ ಪರಶುರಾಮ್‌ಗೆ ಬಂದೂಕು ನೀಡಿದವನ ಪತ್ತೆಗಾಗಿಯೂ ಎಸ್‌ಐಟಿ ಬಲೆ ಬೀಸಿದೆ. ಕೊಲೆ ನಡೆದ ದಿನದಂದು ಪರಶುರಾಮ್ ಜೊತೆಗಿದ್ದವನ ಬಗ್ಗೆಯೂ ಎಸ್‌ಐಟಿ ಹುಡುಕಾಟ ನಡೆಸುತ್ತಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Garui Lankesh murder accused Parashuram said to SIT police that he gets only rs 13000 rupees from them who told to kill Gauri. But he clarifies that he won't kill her for money. He did not demand for money from them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more