ಸುಂದರಕಾಂಡ ಕಥಾಶ್ರವಣದಿಂದ ಎಲ್ಲ ಸಂಕಷ್ಟ ಪರಿಹಾರ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಗದಗ, ಜೂನ್, 11: ಮಹರ್ಷಿ ವಾಲ್ಮೀಕಿ ಋಷಿಗಳು ರಚಿಸಿದ ಸುಂದರ ಕಾಂಡವನ್ನು ಜನತೆ ಶ್ರವಣ ಮಾಡುವುದರಿಂದ ಮನುಕುಲದ ಸಂಕಷ್ಟ ಪರಿಹಾರವಾಗಿ ಲೋಕೋದ್ಧಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಮಲ್ಲಸಮುದ್ರ ಗಿರಿಯ ಓಂಕಾರೇಶ್ವರ ಮಠದ ಸೊರಟೂರ ಹಿರೇಮಠದ ಫಕ್ಕೀರೇಶ್ವರ ಸ್ವಾಮಿಗಳು ಹೇಳಿದರು.

ವೇ. ಮೂ. ಶಿವಲಿಂಗ ಶಾಸ್ತ್ರಿ ಸಿದ್ದಾಪೂರ, ವೆಂಕಟೇಶ ದಾಸರ, ಬಸವಣ್ಣೆಯ್ಯ ಹಿರೇಮಠ, ಚನ್ನಪ್ಪ ಕಾಳಗಿ ಇವರು ಕಳಸಾಬಂಡೂರಿ ಸಾಕಾರಕ್ಕಾಗಿ ಸರ್ವರ ಬದುಕು ಸಮೃದ್ಧವಾಗಿಲಿ ಎಂಬ ಸಂಕಲ್ಪವನ್ನಿಟ್ಟುಕೊಂಡು ಹನುಮ ಮಾಲೆ ಧರಿಸಿ ಹನುಮ ವೃತ ಕೈಕೊಂಡ ನಾಲ್ಕನೇ ದಿನದ(ಶುಕ್ರವಾರ) ಆಚರಣೆಯಲ್ಲಿ ಸುಂದರಕಾಂಡ ಕೀರ್ತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

karnataka

ಸುಂದರಕಾಂಡ ವಿಶೇಷವಾಗಿ ಸರ್ವರ ಪೀಡೆ ಕಳೆಯುವುದಕ್ಕಾಗಿ ಶನೇಶ್ವರನ ಕೃಪೆಗಾಗಿ ಜನ್ಮೋದ್ಧಾರಕ್ಕಾಗಿ ರಚಿಸಿದ ಕಥಾ ಹಂದರವಾಗಿದೆ. ಗದಗ ಪರಿಸರದ ಹೋರಾಟಗಾರರ ಬಹುವರ್ಷಗಳ ಬೇಡಿಕೆಯಾದ ಕಳಸಾ ಬಂಡೂರಿ ಯೋಜನೆ ಸಂಪೂರ್ಣವಾಗಲಿ ವೃತಧಾರಿಗಳ ಸಂಕಲ್ಪ ಈಡೇರಲಿ ಎಂದರು.

ವೃತಧಾರಿಯಾದ ಶಿವಲಿಂಗಶಾಸ್ತ್ರೀ ಸಿದ್ದಾಪೂರ ಮಾತನಾಡಿ, ವೃತಾಚಾರಣೆಗಳನ್ನು ಆಚರಿಸುವುದರಿಂದ ಮಾನವನ ಆತ್ಮವಿಕಾಸವಾಗಬಲ್ಲದು. ಪ್ರತಿಯೊಬ್ಬರು ತಮ್ಮ ಹೊರಗಿನ ದೇಹ ಶುಚಿಗೊಳಿಸುವುದಕ್ಕಿಂತ ತಮ್ಮ ಒಳಮನಸ್ಸನ್ನು ಪುರಾಣ ಪ್ರವಚನ ಕೀರ್ತನೆಗಳಿಂದ ಶುಚಿತ್ವಗೊಳಿಸಬೇಕು. ರಾಮ ಬಂಟ ಹನುಮ ತ್ರಿಲೋಕ ಮೆಚ್ಚಿದವನಾಗಿದ್ದಾನೆ. ಧೈರ್ಯ, ಸಾಹಸ, ಭಕ್ತಿ ನಮಗೆ ಅನುದಿನವು ದಾರಿದೀಪವಾಗಬಲ್ಲದು ಎಂದರು. [ಬೆಳಗಾವಿ ಸಂಸದರ ಮನೆ ಮುಂದೆ ಪ್ರಾಣ ಬಿಟ್ಟ ಗದಗದ ರೈತ]

karnataka

ಹರಿಕಥಾ ವಿದ್ವಾನ್ ಆರ್. ಶರಣಬಸವಶಾಸ್ತ್ರೀ ಇಳಕಲ್ಲರವರು ಅಷ್ಟಮ ಶನಿಶ್ವೇರನ ಕೃಪೆಗಾಗಿ ಆಂಜನೇಯ ಆರಾಧನೆ ಮಾಡುವುದು ಅವಶ್ಯವಿದೆ ಎಂದರು. ಹನುಮಂತ ನಮ್ಮ ನಾಡಿನಲ್ಲಿ ಜನಿಸಿ ದೇಶವೇ ಆರಾಧನೆ ಮಾಡುವ ದೇವತಾ ಪುರುಷನಾಗಿದ್ದಾನೆ. ಇವತ್ತಿಗೂ ದೇಶ ವಿದೇಶಗಳಿಂದ ಅಂಜನಾದ್ರಿಗೆ ಭಕ್ತರು ಆಗಮಿಸುತ್ತಿದ್ದಾರೆ. ನಮ್ಮ ದೇಶದ ಪ್ರತಿಗ್ರಾಮಗಳಲ್ಲಿ ಹನುಮದೇವರ ದೇವಸ್ಥಾನಗಳು ಇರುವುದಕ್ಕೆ ಸಾಕ್ಷಿಯಾಗಿವೆ. ಸುಂದರಕಾಂಡ ಸರ್ವರ ಮನೆಯಲ್ಲಿ ಮೊಳಗಲಿ ಈ ಗ್ರಂಥ ಪೂಜಿತವಾಗಲಿ ಎಂದರು. [ಚಿತ್ರಗಳು : ರಾಜಧಾನಿಯಲ್ಲಿ ಕಳಸಾ-ಬಂಡೂರಿ ಕಿಚ್ಚು]

ಇದೇ ಸಂದರ್ಭದಲ್ಲಿ ಕಳಸಾ ಬಂಡೂರಿ ಯೋಜನೆಗೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ನೂರೊಂದು ಚಳವಳಿಯ ಅಂಗವಾಗಿ ದಿನನಿತ್ಯ ಪತ್ರ ಬರೆಯಲು ಕಳಸಾ ಬಂಡೂರಿ ಹೋರಾಟಗಾರ ಬಸವಣ್ಣೆಯ್ಯ ಹಿರೇಮಠ ಪತ್ರವೃತ ಕೈಕೊಂಡ ಹಿನ್ನಲೆಯಲ್ಲಿ ಫಕ್ಕೀರೇಶ್ವರ ಶ್ರೀಗಳು ಶ್ರೀಕಾರ ಹಾಕಿ ಪತ್ರಗಳನ್ನು ನೀಡಿದರು. [ಏನಿದು ಕಳಸಾ-ಬಂಡೂರಿ ಯೋಜನೆ?]

ಎಸ್.ಎಚ್. ಶಿವನಗೌಡರ, ಕಿರಣ ಭುಮಾ, ಕಳಸಾ ಬಂಡೂರಿ ಹೋರಾಟ ಸಮಿತಿಯ ವಿಜಯ ಕುಲಕರ್ಣಿ, ಗಿರೀಶ ಮಟ್ಟಣ್ಣವರ, ಪ್ರಭುರಾಜಗೌಡ ಪಾಟೀಲ, ವಡ್ಡಿನ, ವೇ. ಮೂ. ಶಂಭುಲಿಂಗಯ್ಯ ಕಲ್ಮಠ, ಇಟಗಿ ಗ್ರಾಮ ಪಂಚಾಯತಿ ಸದಸ್ಯ ಮಹೇಶ ದಾಸರ, ಬಸನಗೌಡ ಪಾಡಿಲ್ ನವಕರ್ನಾಟಕ ಜನಪರ ಅಭಿವೃದ್ದಿ ವೇದಿಕೆಯ ಶಿವಕುಮಾರ ರಾಮನಕೊಪ್ಪ, ಎಸ್.ಎಸ್.ರಡ್ಡೇರ, ಶಿವಾನಂದ ಹಿರೇಮಠ, ಭೂಸನೂರಮಠ, ಈರಪ್ಪ ಬೆಟಗೇರಿ, ಆನಂದ ಅಸುಂಡಿ, ಈಶ್ವರಪ್ಪ ಹಡಗಲಿ, ಮಲ್ಲಯ್ಯ ಅಂಗಡಿ, ಶಿವಯೋಗಿ ಹಿರೇಮಠ, ಅಂದಾನಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.[ಕಳಸಾ ಬಂಡೂರಿ ಹೋರಾಟಕ್ಕೆ ಜತೆಯಾಗಿ ನಿಂತ ಚಂದನವನ]

ಶರಣ ಬಸವ ಶಾಸ್ತ್ರಿಗಳ ಸುಂದರ ಕಾಂಡ ಕೀರ್ತನಕ್ಕೆ ವಿಠ್ಠಲಕುಮಾರ ಹೂಗಾರ, ಬಸವರಾಜ ಹಿರೇಮಠ, ಪರಶುರಾಮ ಮಂಗಳಗುಡ್ಡ ವಾದ್ಯ ನುಡಿಸಿದರು. ಜಗಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಓಂಕಾರೇಶ್ವರ ಸನ್ನಿಧಿಯಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಲಸಮುದ್ರ ಕಳಸಾಪೂರ, ಬೆಳಧಡಿ, ನಾಗಾವಿ ಗ್ರಾಮಗಳ ಮಹಿಳೆಯರು ಭಕ್ತ ಜನತೆ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gadag: People must know Ramayana and Sundarkanda. Sundarakanda learning process is the solution for all human problems, said by Mallasamudra Phakkireshwar Swamiji, at Gadag.
Please Wait while comments are loading...