ಇದು ನನಗೆ ಅಗ್ನಿ ಪರೀಕ್ಷೆ; ಬನ್ರೋ..ಯಾರ್ ಬರ್ತಿರೋ ಬನ್ನಿ, ಯಾವ ಮೀಸೆನೂ ಇಲ್ಲ: ಪರಮೇಶ್ವರ್ ಸವಾಲು ಹಾಕಿದ್ದು ಯಾರಿಗೆ?
ಈ ಬಾರಿಯ ಚುನಾವಣೆ ನನಗೆ ಅಗ್ನಿ ಪರೀಕ್ಷೆ. ಬನ್ರೋ ....ಯಾರ್ ಬರ್ತೀರೊ ಬನ್ನಿ ಎಂದು ಪರಮೇಶ್ವರ್ ಸವಾಲು ಹಾಕಿದ್ದಾರೆ.
ತುಮಕೂರು,ಮಾರ್ಚ್14: ರಾಜ್ಯ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದ ನಡುವೆ ಸಾಲು ಸಾಲು ಸವಾಲುಗಳನ್ನ ಹಾಕುತ್ತಿದ್ದಾರೆ. ಇತ್ತ ರಾಜಕೀಯ ಎದುರಾಳಿಗಳ ಮುಂದೆ ಪ್ರತಿಷ್ಠೆಯ ಕಣವಾಗಿದ್ರೆ, ಇನ್ನೂ ಕೆಲವರಿಗೆ ಈ ಬಾರಿಯ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.
ಇತ್ತ ರಾಜಕೀಯ ಪಕ್ಷಗಳ ನಾಯಕರು ರಾಜ್ಯಾದ್ಯಂತ ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಕಾಂಗ್ರೆಸ್ ನಾಯಕರು ಪ್ರತ್ಯೇಕವಾಗಿ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ದಾರೆ. ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ತುಮಕೂರು ಜಿಲ್ಲೆಯ ಕೊರಟಿಗೆರೆಯಲ್ಲಿ ಸೋಮವಾರ ಏರ್ಪಡಿಸಿದ್ದ ಒಕ್ಕಲಿಗರ ಮುಖಂಡರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಎದುರಾಳಿಗಳಿಗೆ ನೇರವಾಗಿ ಸವಾಲು ಹಾಕಿದ್ದಾರೆ.

ಈ ಹಿಂದೆ ನನಗೆ ಸಾವರ ಜನ ಹೇಳಿದ್ರು ಬೆಂಗಳೂರಿಗೆ ಬಂದು ನಿಲ್ಲಿ ಅಂತ ಆದರೆ, ನಾನು ಹಠಕ್ಕೆ ಬಿದ್ದಿದ್ದೇನಿ, ಕೊರಟಗೆರೆ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ. ಈ ಬಾರಿಯ ಚುನಾವಣೆ ನನಗೆ ಅಗ್ನಿ ಪರೀಕ್ಷೆ. ಬನ್ರೋ ....ಯಾರ್ ಬರ್ತೀರೊ ಬನ್ನಿ.. ಯಾವ ಮೀಸೆನೂ ಇಲ್ಲ, ಗೀಸೆಗೂ ಹೆದರೋಲ್ಲ ಎಂದು ಗುಡುಗಿದರು.
ಸಂಸದರೆ, ಕೊರಟಗೆರೆ ಕ್ಷೇತ್ರಕ್ಕೆ ನಿಮ್ಮ ಕಾಣಿಕೆ ಏನು ತೋರಿಸಿ, ತುಮಕೂರಿನ ಸಂಸದರೆ, 5 ವರ್ಷದ ನಿಮ್ಮ ಸಾಧನೆಯ ಅಂಕಿ-ಅಂಶ ಜನತೆಗೆ ನೀಡಿ. ನಿಮ್ಮ ಲೆಕ್ಕ ಆಮೇಲೆ, ಚುನಾವಣೆ ಪ್ರಚಾರಕ್ಕೆ ಬನ್ನಿ. ಪ್ರಧಾನಿ ಮೋದಿ ಹೆಸರಲ್ಲಿ ಮತ ಕೇಳೊದನ್ನ ಬೀಡಿ. ನಿಮ್ಮ ಅಭಿವೃದ್ಧಿ ಹೆಸರಲ್ಲಿ ಚುನಾವಣೆಗೆ ಬನ್ನಿ. ಕೊರಟಗೆರೆ ಕ್ಷೇತ್ರಕ್ಕೆ ಎಷ್ಟು ಸಾರಿ ಬಂದಿದ್ದೀರಾ? ಸಂಸದರೇ ನಮಗೇ ಲೆಕ್ಕ ಕೊಡಿ ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರದ 40% ಕಮಿಷನ್ ಸರಕಾರ ಆಡಳಿತ ನಡೆಸುತ್ತಿದೆ. 14 ದಿನ ಮಾತ್ರ ನಿಮ್ಮ ಆಡಳಿತ, ಆಮೇಲೆ ನಿಮ್ಮ ಅಧಿಕಾರ ಮುಗಿಯುತ್ತೆ ಕಾಯುತ್ತೀರಿ. ಮೋದಿ ಸರಕಾರ ಮಜ್ಜಿಗೆಗೆ 18% ತೆರಿಗೆ ಹಾಕ್ತರೇ ಎಚ್ಚರ. ರೈತ ವಿರೋಧಿ ಕಾಯಿದೆ ಇಂದಿಗೂ ಬಿಜೆಪಿ ಸರಕಾರ ವಾಪಸ್ ಪಡೆದಿಲ್ಲ. ಎತ್ತಿನಹೊಳೆ ಯೋಜನೆಗೆ ಬೊಮ್ಮಾಯಿ 50 ರೂ. ಅನುದಾನ ನೀಡಿಲ್ಲ. ನನ್ನ 35 ವರ್ಷದ ರಾಜಕೀಯ ಜೀವನ ಸಮಾಜಸೇವೆಗೆ ಮೀಸಲು ಎಂದು ಹೇಳಿದರು.
ಇನ್ನೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ. ವಿರೋಧಿಗಳ ಮಾತನ್ನು ಯಾರೂ ನಂಬಬೇಡಿ ಎಂದು ವಾಗ್ದಾಳಿ ನಡೆಸಿದ ಅವರು, ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕುರುಹು ಏನಿದೆ ಎಂಬುದನ್ನು ಮೋದ್ಲು ತೋರಿಸಿ. ನಿಮ್ಮ ನಾಯಕರ ಅಭಿವೃದ್ಧಿಯ ಸಾಕ್ಷಿ ಗುಡ್ಡೇಯನ್ನು ಜನತೆಗೆ ತಲುಪಿಸಿ. ಪಾಪ ಕುಮಾರಸ್ವಾಮಿ ಒಳ್ಳೆಯ ಮನುಷ್ಯ, ಆಡಳಿತ ಬೇಕಲ್ಲ. ಕುಮಾರಸ್ವಾಮಿ ಮೊದ್ಲು ಕರ್ನಾಟಕದ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕ್ಲಿ. 25 ಸೀಟು ಬಂದ್ರೆ ವ್ಯವಹಾರ ಮಾಡಿಕೊಳ್ಳೋಣ ಅಂತ ಹಗಲು ಕನಸು ಕಾಣ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ರು.












Click it and Unblock the Notifications