Lok Sabha Election: ಕರ್ನಾಟಕದಲ್ಲಿ ಜನನ: ಪ್ಯಾನ್ ಇಂಡಿಯಾದಲ್ಲಿ ಭಾರೀ ಸದ್ದು
ಕರ್ನಾಟಕ ಲೋಕಸಭಾ ಚುನಾವಣೆಗಳ ಬಿಸಿ ದಿನೇ ದಿನೇ ಏರುತ್ತಿದೆ. ಈಗಾಗಲೇ ದೇಶದಲ್ಲಿ ಎರಡು ಹಂತದ ಚುನಾವಣೆಗಳು ನಡೆದಿವೆ. ಶುಕ್ರವಾರ ರಾಜ್ಯದಲ್ಲೂ ಮೊದಲು ಹಂತದ ಚುನಾವಣೆಗಳು ಮುಗಿದಿದ್ದು, ಎರಡನೇ ಹಂತದ ಚುನಾವಣೆಗಳಿಗೆ ಭರದ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಅಖಾಡದಲ್ಲಿ ಸದ್ದು ಮಾಡುತ್ತಿರುವುದು ಒಂದೇ ಗ್ಯಾರಂಟಿ..
2023ರ ಕರ್ನಾಟಕ ವಿಧಾನಸಭಾ ಚುನಾವಣೆಗಳು ಆರಂಭವಾದಾಗ ಎಲ್ಲ ಪಕ್ಷಗಳಂತೆ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಈ ಪ್ರಣಾಳಿಕೆಯಲ್ಲಿ ಎಲ್ಲರ ಚಿತ್ತ ಕದ್ದ ಒಂದು ಅಂಶ ಗ್ಯಾರಂಟಿ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಐದು ಗ್ಯಾರಂಟಿಗಳನ್ನು ತರುವುದಾಗಿ ಘೋಷಿಸಿತ್ತು. ಇದರ ಪ್ರಭಾವ ಎಷ್ಟಿತ್ತು ಎಂದರೆ ಕಾಂಗ್ರೆಸ್ ಅಂದುಕೊಂಡಿದಕ್ಕಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲಿಸಿಕೊಡುವಲ್ಲಿ ಗ್ಯಾರಂಟಿ ನೆರವಾಯಿತು.

ಐದು ಗ್ಯಾರಂಟಿ
ಅನ್ನ ಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಯೋಜನೆಯ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯುವಲ್ಲಿ ಕಾಂಗ್ರೆಸ್ ಸಫಲವಾಯಿತು. ಅಲ್ಲದೆ ಮ್ಯಾಜಿಕ್ ನಂಬರ್ ದಾಟಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಇದರ ಹಿಂದಿನ ಶಕ್ತಿ ಗ್ಯಾರಂಟಿ ಎಂಬುದು ಜಗತ್ ಜಾಹೀರವಾಗಿದೆ.
ಕಾಂಗ್ರೆಸ್ ಕರ್ನಾಟಕದಲ್ಲಿ ಜನ್ಮ ನೀಡಿದ ಈ ಯೋಜನೆ, ಅಂದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಅದು ಎಲ್ಲ ಪಕ್ಷಗಳ ಕಣ್ಣು ನೆಟ್ಟಾಗಿಸುತ್ತಿದೆ. ಪಕ್ಷಗಳು ಹಾಗೂ ಸಿದ್ಧಾಂತಗಳು ಬೇರೆ ಬೇರೆ ಆಗಿದ್ದು, ಅದಕ್ಕೆ ಬೇರೆ ಬೇರೆ ಹೆಸರನ್ನು ಇಟ್ಟುಕೊಂಡಿರಬಹುದು. ಆದರೆ ಆ ಪಕ್ಷಗಳು ಕಾಂಗ್ರೆಸ್‌ನಂತೆ ಗ್ಯಾರಂಟಿ ನೀಡಲು ಮುಂದಾಗಿವೆ.

ಅಖಾಡದಲ್ಲಿ ಗ್ಯಾರಂಟಿ ಸದ್ದು
2024-25ರಲ್ಲಿ ಗ್ಯಾರಂಟಿ ಅನುಷ್ಠಾನಕ್ಕೆ ಫೆಬ್ರವರಿ 16 ರ ಬಜೆಟ್‌ನಲ್ಲಿ 54,000 ಕೋಟಿ ರೂ.ಗಳನ್ನು ಮೀಸಲಿಟ್ಟ ಸಿದ್ದರಾಮಯ್ಯ ಸರ್ಕಾರ ತನ್ನ ಸಾಧನೆಗಳನ್ನೇ ಲೋಕಸಭಾ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಗ್ಯಾರಂಟಿ ಲೋಕಸಭಾ ಚುನಾವಣೆಯ ಪ್ರಮುಖ ಅಸ್ತ್ರವಾಗಿದೆ. ಕಾಂಗ್ರೆಸ್ ಇದನ್ನೇ ಹೇಳುತ್ತಾ ಜನರಲ್ಲಿ ಮತವನ್ನು ಕೇಳುತ್ತಾ ಇದ್ದರೆ, ವಿರೋಧ ಪಕ್ಷಗಳು ಈ ಯೋಜನೆಯನ್ನು ಟೀಕಿಸುತ್ತಿವೆ.
ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಹೇಗೆ ತಮ್ಮ ಹಣವನ್ನು ಲೂಟಿ ಮಾಡುತ್ತಿದೆ ಎಂಬುದನ್ನು ಮರತದಾರರಿಗೆ ತೋರಿಸುತ್ತಿದ್ದೇವೆ. ಅವರು ಗ್ಯಾರಂಟಿಗಳು ಹೇಗೆ ಕುಟುಂಬಗಳನ್ನು ನೋವಿಗೆ ತಳ್ಳುತ್ತಿವೆ ಎಂಬುದನ್ನು ಹೇಳುತ್ತಿದ್ದೇವೆ ಎಂದು ಬಿಜೆಪಿ ಪ್ರಚಾರ ಸಮಿತಿ ಸಂಚಾಲಕ ವಿ ಸುನೀಲ್ ಕುಮಾರ್ ಟೈಮನ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಬೇರೆ ರಾಜ್ಯಗಳಲ್ಲೂ ಗ್ಯಾರಂಟಿ
ಕರ್ನಾಟಕದಲ್ಲಿ ಗ್ಯಾರಂಟಿ ವರ್ಕ್ ಆಗುತ್ತಿದ್ದಂತೆ ಬಿಜೆಪಿ ಈ ತಂತ್ರವನ್ನು ಕಾಪಿ ಮಾಡಿತು. ರಾಜಸ್ಥಾನ, ಚತ್ತೀಸಗಢ, ಮಧ್ಯ ಪ್ರದೇಶ, ಮೀಜೋರಾಂನಲ್ಲಿ ಬಳಸಿಕೊಂಡು ಯಶ ಕಂಡಿತು. ಆದರೆ ಕಾಂಗ್ರೆಸ್ ಗ್ಯಾರಂಟಿ ಪಕ್ಕದ ತೆಲಂಗಾಣವನ್ನು ಗೆಲ್ಲಿಸಲು ಮಾತ್ರ ಸಾಧ್ಯವಾಯಿತು.
ಲೋಕ ಅಖಾಡದಲ್ಲಿ ಗ್ಯಾರಂಟಿ
ಗ್ಯಾರಂಟಿ ಪವರ್ ಅರಿತು ಕೊಂಡ ಪಕ್ಷಗಳು ಇದನ್ನೇ ಉಪಯೋಗಿಸಲು ಬಳಸುತ್ತಿವೆ. ಕಾಂಗ್ರೆಸ್ ಕರ್ನಾಟಕದ ಬ್ಲ್ಯೂ ಪ್ರಿಂಟ್ ಇಟ್ಟುಕೊಂಡೆ, ದೇಶದಲ್ಲಿ ನಯಾ ಗ್ಯಾರಂಟಿ ಹೆಸರನಲ್ಲಿ ಅಖಾಡಕ್ಕೆ ಇಳಿದಿದೆ. ಇದರಲ್ಲಿ ಹಿಸಾದಾರಿ ನಯಾ, ಕಿಸಾನ ನಯಾ, ಯುವ ನಯಾ, ನಾರಿ ನಯಾ, ಶ್ರಮಿಕ ನಯಾ, ಎಂದು ಹೆಸರಿಸಿದೆ.
ಕಾಂಗ್ರೆಸ್ ಗ್ಯಾರಂಟಿಗಳಂತೆ ಬಿಜೆಪಿ ಸಹ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಇದಕ್ಕೆ ಮೋದಿಕಿ ಗ್ಯಾರಂಟಿ ಎನ್ನಲಾಗುತ್ತಿದೆ. ಇದರಲ್ಲಿ ಎಲ್ಲರಿಗೂ ಮನೆ, ಎಲ್ಲರಿಗೂ ನೀರು, ನಾರಿ ಶಕ್ತಿ, ಯುವಜನ ಕಲ್ಯಾಣ, ಉದ್ಯೋಗದಂತ ಯೋಜನೆಗಳು ಸೇರಿವೆ.
ಗ್ಯಾರಂಟಿ ಜಿದ್ದಾಜಿದ್ದಿನಲ್ಲಿ ಮತದಾರ ಯಾವ ಪಕ್ಷಕ್ಕೆ ಬಹುಪರಾಕ್ ಎನ್ನುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications