ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸೇರುವವರ ಪಟ್ಟಿ ದಿಢೀರ್ ಬದಲಾವಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸೇರುವ ಸಚಿವರ ಪಟ್ಟಿಯಲ್ಲಿ ದಿಢೀರ್ ಬದಲಾವಣೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಒಪ್ಪಿಗೆ ನೀಡಿದರೆ ಗುರುವಾರ ಸಂಜೆಯೇ ನಾಲ್ವರು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬುಧವಾರ ಸಂಜೆ ನವದೆಹಲಿಯಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರು 30 ನಿಮಿಷಗಳಿಗೂ ಅಧಿಕ ಕಾಲ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ, ಪರಮೇಶ್ವರ ಅವರು ಸಂಪುಟ ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದು, ಅವರ ಮನವೊಲಿಕೆ ಕಾರ್ಯ ನಡೆಯುತ್ತಿದೆ. [ನಾಲ್ವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ : ಸಿದ್ದರಾಮಯ್ಯ]

cabinet expansion

ಇದರ ನಡುವೆಯೇ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಹೆಸರನ್ನು ಸಂಪುಟ ಸೇರುವವರ ಪಟ್ಟಿಯಿಂದ ಕೈ ಬಿಡಲಾಗಿದೆ. ಸ್ಪೀಕರ್ ಆಗಿ ಅವರು ಮುಂದುವರೆಯುವುದು ಖಚಿತವಾಗಿದೆ. ಈ ಪಟ್ಟಿಯಲ್ಲಿ ಇನ್ನೂ ಬದಲಾವಣೆಯಾಗಲಿದೆಯೇ? ಕಾದು ನೋಡಬೇಕು. [ಸಂಪುಟ ಸೇರುವವರು ಯಾರು?]

ಸಂಪುಟ ಸೇರುವವರ ಪಟ್ಟಿ : ಹಾನಗಲ್‌ ಶಾಸಕ ಮನೋಹರ್ ತಹಶೀಲ್ದಾರ್, ಅರಕಲಗೋಡು ಶಾಸಕ ಎ.ಮಂಜು, ಧಾರವಾಡ ಶಾಸಕ ವಿನಯ್ ಕುಲಕರ್ಣಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ.

ಮತ್ತೊಂದು ಸುತ್ತಿನ ಚರ್ಚೆ : ಡಾ.ಜಿ.ಪರಮೇಶ್ವರ ಮತ್ತು ಸಿದ್ದರಾಮಯ್ಯ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ಜೊತೆ ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದು, ನಂತರ ಸಂಪುಟ ಸೇರುವವರ ಮತ್ತು ಪ್ರಮಾಣ ವಚನ ಸ್ವೀಕಾರ ಮಾಡುವ ದಿನಾಂಕದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಒಂದು ವೇಳೆ ಡಿಸಿಎಂ ಪಟ್ಟ ದೊರೆಯದಿದ್ದಲ್ಲಿ ಪ್ರಬಲವಾದ ಖಾತೆಯನ್ನು ನೀಡುವಂತೆ ಪರಮೇಶ್ವರ ಅವರು ಬೇಡಿಕೆ ಇಡಬಹುದು. ಕಂದಾಯ, ಗೃಹ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ಪ್ರಬಲ ಖಾತೆಗೆ ಅವರು ಬೇಡಿಕೆ ಇಡಬಹುದಾಗಿದೆ.

English summary
Karnataka Chief minister Siddaramaiah will induct 4 ministers to cabinet. New ministers may take oath on October 29th, Thursday evening at Raj Bhavan Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X