ಮಾಜಿ ಪ್ರಧಾನಿ ದೇವೇಗೌಡರಿಂದ, ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಮಹತ್ವದ ಮಾಹಿತಿ!
2024ರ ಲೋಕಸಭೆ ಚುನಾವಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸೇರಿದಂತೆ ಜೆಡಿಎಸ್‌ನ ನಾಯಕರು ಭರ್ಜರಿ ತಯಾರಿ ಆರಂಭಿಸಿದ್ದಾರೆ. ಅದರಲ್ಲೂ ಹಾಸನ ಲೋಕಸಭಾ ಕ್ಷೇತ್ರವು ಈಗ ಐಕಾನ್ ಆಗಿದೆ. ಯಾಕಂದ್ರೆ ಇಲ್ಲಿ ಹೊಸ ಪೈಪೋಟಿ ಶುರುವಾಗಿರುವ ಹಿನ್ನೆಲೆ, ಮಾಜಿ ಪ್ರಧಾನಿ ದೇವೇಗೌಡರೇ ಸ್ಪರ್ಧೆ ಮಾಡ್ತಾರೆ ಎಂಬ ಮಾತು ಓಡಾಡುತ್ತಿದೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಮಹತ್ವದ ಮಾಹಿತಿ ನೀಡಿದ್ದಾರೆ. ಹಾಗೇ ಪ್ರಧಾನಿ ಮೋದಿ ಬಗ್ಗೆಯೂ ಮಾತನಾಡಿದ್ದಾರೆ.
ಜೆಡಿಎಸ್ ಭದ್ರಕೋಟೆ ಎಂಬ ಹೆಸರು ಪಡೆದಿರುವ ಹಾಸನ ಜಿಲ್ಲೆಯಲ್ಲಿ ದಳಪತಿಗಳ ಹವಾ ಬಲು ಜೋರಾಗಿದೆ. ಜೆಡಿಎಸ್‌ಗೆ ಅತಿಹೆಚ್ಚು ಶಾಸಕರನ್ನು ಗೆಲ್ಲಿಸಿಕೊಡುವ ಜಿಲ್ಲೆ ಹಾಸನ. ಅಲ್ಲದೆ ಇಲ್ಲಿನ ಲೋಕಸಭಾ ಕ್ಷೇತ್ರ ಕೂಡ ಜೆಡಿಎಸ್‌ಗೆ ಭದ್ರಕೋಟೆ ಆಗಿದೆ. ಸದ್ಯಕ್ಕೆ ಮಾಜಿ ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭೆ ಕ್ಷೇತ್ರದ ಸಂಸದರಾಗಿದ್ರೂ, 2024 ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿಂದ ಸ್ಪರ್ಧೆಯನ್ನ ಮಾಡ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾದರೆ ಈ ಮಾತು ನಿಜವಾಗುತ್ತಾ? ಮಾಜಿ ಪ್ರಧಾನಿ ದೇವೇಗೌಡರು ಈ ಬಗ್ಗೆ ಹೇಳಿದ್ದೇನು?

ಪ್ರಧಾನಿ ಮೋದಿ ಬಗ್ಗೆ ದೇವೇಗೌಡರ ಮಾತು
ಮಾಜಿ ಪಿಎಂ ದೇವೇಗೌಡರು ಇಂದು ಹರದನಹಳ್ಳಿಯಲ್ಲಿ ಮಾತನಾಡ್ತಾ, ಮಹತ್ವದ ಮಾಹಿತಿ ನೀಡಿದ್ದು. ಇದು 2024 ಲೋಕಸಭೆ ಚುನಾವಣೆಗೆ ಮೊದಲು ಸಂಚಲನ ಸೃಷ್ಟಿಸಿದೆ. ಈ ಪೈಕಿ ಹಾಸನ ಲೋಕಸಭೆ ಕ್ಷೇತ್ರದ ಸ್ಪರ್ಧೆ ಬಗ್ಗೆ ಬಿಗ್ ಅಪ್‌ಡೇಟ್ ಆಗಿದೆ. ಲೋಕಸಭೆ ಎಲೆಕ್ಷನ್ ವೇಳೆ I.N.D.I.A ಅಥವಾ N.D.A ಯಾರ ಪರ ಜನರು ತೀರ್ಪು ಕೊಡುತ್ತಾರೆ ಅನ್ನೋದು ಚುನಾವಣೆ ನಂತರ ಗೊತ್ತಾಗಲಿದೆ. ಈಗಿನ ಪರಿಸ್ಥಿತಿಯಲ್ಲಿ ವಿಶ್ವದ ರಾಜಕಾರಣದಲ್ಲಿ ಮೋದಿ ಎತ್ತರಕ್ಕೆ ಬೆಳೆದಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು. ಹಾಗೆ ಈ ವೇಳೆ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆಯೂ ಮಾತನಾಡಿದ್ದಾರೆ ದೇವೇಗೌಡರು.
ಹಾಸನ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ...
ಇನ್ನು ಈ ವೇಳೆ, ಮುಂದಿನ ಚುನಾವಣೆಯಲ್ಲಿ ದೇವೇಗೌಡರ ಸ್ಪರ್ಧೆ ಬಗ್ಗೆ ಚರ್ಚೆ ಮಾಡ್ತೇವೆ ಎಂಬ ಎಚ್‌ಡಿಕೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಪದೇ ಪದೆ ಹೇಳೋದು ಬೇಡವೆಂದು ವಿನಂತಿ ಮಾಡಿಕೊಳ್ಳುತ್ತೇನೆ, ಸಿಂಟಿಂಗ್ ಮೆಂಬರ್ ಕಂಟಿನ್ಯೂ ಆಗಲಿದ್ದಾರೆ ಅಂತ ಹೇಳಿದ್ರು ಮಾಜಿ ಪ್ರಧಾನಿಗಳು. ಹೀಗಂದ್ರೆ ಹಾಲಿ ಸಂಸದರಾದ ಪ್ರಜ್ವಲ್ ರೇವಣ್ಣ ಅವರೇ, 2024ರ ಲೋಕಸಭೆ ಚುನಾವಣೆಗೆ ಹಾಸನ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಅಂತ ತಿಳಿಸಿದ್ದಾರೆ. ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆಯನ್ನ ಮತ್ತೊಮ್ಮೆ ದೇವೇಗೌಡರು ಖಚಿತಪಡಿಸಿದ್ದಾರೆ.

ಜೆಡಿಎಸ್‌ಗೆ ಮತ್ತಷ್ಟು ಶಕ್ತಿ?
ಬಿಜೆಪಿ ಜೊತೆಗೆ ಇದೀಗ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಗೊತ್ತಿರುವ ವಿಚಾರ, ಈ ಮೈತ್ರಿ ಬಿಜೆಪಿ & ಜೆಡಿಎಸ್ ಎರಡೂ ಪಕ್ಷಗಳಿಗೆ ಲಾಭ ಕೊಡಲಿದೆ. ಹೀಗಿದ್ದಾಗ ಲೋಕಸಭೆ ಸ್ಥಾನ ಹಂಚಿಕೆ ವಿಚಾರವಾಗಿ ಇನ್ನೇನು ಕೆಲ ದಿನದಲ್ಲಿ ಮಹತ್ವದ ಮಾತುಕತೆ ಕೂಡ ನಡೆಯುವ ಸಾಧ್ಯತೆ ಇದೆ. ಹೀಗಿದ್ದಾಗಲೇ ಮಾಜಿ ಪ್ರಧಾನಿ ದೇವೇಗೌಡರು ಹಾಸನ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ಕಡೆ ಹಳೇ ಮೈಸೂರು ಭಾಗದ ಮೇಲೆ ಜೆಡಿಎಸ್ ಪಕ್ಷಕ್ಕೆ ಭಾರಿ ಹಿಡಿತವೂ ಇರುವ ಕಾರಣ, ಬಿಜೆಪಿ ಜೊತೆಗಿನ ಮೈತ್ರಿ ಹಿನ್ನೆಲೆ ಆ ಭಾಗದಲ್ಲೇ ಹೆಚ್ಚಿನ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಒಟ್ನಲ್ಲಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಅಖಾಡ ರಂಗೇರಿದ್ದು ಕಾಂಗ್ರೆಸ್ ಪಕ್ಷಕ್ಕೆ ಇಕ್ಕಟ್ಟು ಎದುರಾಗುತ್ತಿದೆ. ಜೆಡಿಎಸ್ & ಬಿಜೆಪಿ ನಡುವೆ ಮೈತ್ರಿ ಪರಿಣಾಮ ಕಾಂಗ್ರೆಸ್ ಪಕ್ಷ ಈಗ ತನ್ನ ಗುರಿ ತಲುಪಲು ಸಾಕಷ್ಟು ಶ್ರಮ ಹಾಕಬೇಕಿದೆ. ಇದೇ ಸಮಯದಲ್ಲಿ ಜೆಡಿಎಸ್ ನಾಯಕರು ಕೂಡ ಹೊಸ ಅಸ್ತ್ರ ಪ್ರಯೋಗ ಮಾಡುವ ಮೂಲಕ, ಚುನಾವಣೆ ಸಜ್ಜಾಗ್ತಿದ್ದಾರೆ. ಎಲ್ಲದಕ್ಕೂ ಉತ್ತರ ಶೀಘ್ರದಲ್ಲೇ ಸಿಗುವ ನಿರೀಕ್ಷೆ ಇದೆ.












Click it and Unblock the Notifications