ಬಿಜೆಪಿಯಲ್ಲಿ ಧಗ ಧಗ; ಪಕ್ಷದ ನೋಟಿಸ್ ಗೆ ಉತ್ತರ ಕೊಡಲ್ಲ,ಬೇಕಾದರೆ ಉಚ್ಛಾಟಿಸಲಿ: ರೇಣುಕಾಚಾರ್ಯ ಮತ್ತೆ ಗರಂ.
ದಾವಣಗೆರೆ, ಜುಲೈ 06: ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಪಕ್ಷದ ನಾಯಕರ ವಿರುದ್ದ ಸಿಡಿದೆದ್ದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ನೋಟಿಸ್ ನೀಡಿದ ಬಳಿಕ ಮತ್ತೆ ಪಕ್ಷದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ರೇಣುಕಾಚಾರ್ಯ, ಯಾವುದೇ ಕಾರಣಕ್ಕೂ ಪಕ್ಷದ ಶಿಸ್ತು ಸಮಿತಿ ನೀಡಿರುವ ನೋಟಿಸ್ ಗೆ ಉತ್ತರ ಕೊಡಲ್ಲ, ಬೇಕಾದರೆ ಉಚ್ಛಾಟಿಸಲಿ ಎಂದು ವಾಗ್ದಾಳಿ ನಡೆಸಿದರು.

ನಮ್ಮಲ್ಲಿ ಶಿಸ್ತು ಸಮಿತಿ ಇದೆ ಅಂತ ಗೊತ್ತಾಗಿದ್ದೆ ನಂಗೆ ನೋಟಿಸ್ ಕೊಟ್ಟ ಮೇಲೆ. ನನಗೆ ಶಿಸ್ತು ಸಮಿತಿಯ ಅಧ್ಯಕ್ಷರು ಯಾರು ಅಂತ ಸಹ ಗೊತ್ತಿಲ್ಲ. ನಾನು ಯಾವುದೇ ರೀತಿ ತಪ್ಪು ಮಾತನಾಡಿಲ್ಲ. ಬೇಸರದಿಂದ ಕಾರ್ಯಕರ್ತರು ಮಾತನಾಡುವುದನ್ನ ಹೇಳಿದ್ದೇನೆ. ನಾನು ಹೇಳಿದ್ದನ್ನು ನೋಡಿ ನಮ್ಮ ಪಕ್ಷದ ನಾಯಕರೆ ಕರೆ ಮಾಡಿ ನೀವು ಮಾತನಾಡುತ್ತಿರುವುದು ಸರಿ ಇದೆ ಎಂದಿದ್ದಾರೆ.
ಇನ್ನೂ ನಮ್ಮಲ್ಲಿ ಯಡಿಯೂರಪ್ಪ ವಿರುದ್ಧ ಮಾತನಾಡಿದವರಿಗೆ ರಾಜ ಮರ್ಯಾದೇನಾ? ನಾನೇನು ಮೋದಿ ವಿರುದ್ಧ ಮಾತನಾಡಿದ್ದೀನಾ ?, ಅಮಿತ್ ಶಾ ವಿರುದ್ದ ಮಾತಾಡಿದ್ದೀನಾ?, ಬಿಎಸ್ ವೈ ವಿರುದ್ಧ ಮಾತಾಡಿದ್ದೀನಾ? ಎಂದು ಗರಂ ಆಗಿದ್ದಾರೆ.
ಈಗಾಗಲೇ ಪಕ್ಷದಲ್ಲಿ 11 ಜನರಿಗೆ ನೋಟಿಸ್ ಕೊಟ್ಟಿದ್ದೀವಿ ಅಂತ ಹೇಳಿದ್ದಾರೆ. ಆದರೆ, ನನ್ನದೊಂದು ನೋಟಿಸ್ ನ್ನ ಮಾತ್ರ ವೈರಲ್ ಮಾಡ್ತಾರೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಪಕ್ಷ ಕೊಟ್ಟಿರುವ ನೋಟಿಸ್ ಗೆ ಉತ್ತರ ಕೊಡಲ್ಲ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಭೇಟಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಶಾಮನೂರು ಶಿವಶಂಕರಪ್ಪ ಅವರ ಜೊತೆ ನನಗೆ ರಾಜಕೀಯ ಬಿಟ್ಟು ಉತ್ತಮ ಒಡನಾಟ ಇದೆ. ಅವರು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು. ಹೀಗಾಗಿಯೇ ಅವರು ಪ್ಲೈಟ್ ನಲ್ಲಿ ನನ್ನನ್ನ ಕರೆದುಕೊಂಡು ಹೋಗಿದ್ದರು. ನಾನು ಈಗಲೂ ಪಕ್ಷದಲ್ಲಿಯೇ ಇದ್ದೇನೆ. ನಾನು ಪಕ್ಷದ ಯಾರ ವಿರುದ್ಧವೂ ಇಲ್ಲ. ಈಗ ಹೋಗಿರುವ ಮತಗಳನ್ನ ಪರಿವರ್ತನೆ ಮಾಡಬೇಕಲ್ಲ. ಅದಕ್ಕಾಗಿಯೇ ನಾನು ಮಾತನಾಡಿದ್ದು. ನಾನು ಸೋತಿರಬಹುದು ಆದರೆ ಪಕ್ಷ ಸೋತಿಲ್ಲ.
ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಿ, ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಸೇರಲ್ಲ. ಇನ್ನು ಬಿಜೆಪಿಯಲ್ಲಿಯೇ ಇದ್ದೇನೆ. ನಾನು ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪರನ್ನ ಬೇಟಿ ಮಾಡಿದರಲ್ಲಿ ತಪ್ಪಿಲ್ಲ. ಹಾಗೇ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಮತ್ತು ಡಿಸಿಎಂ ಡಿ ಕೆ ಶಿವಕುಮಾರನ್ನ ಭೇಟಿ ಮಾಡಿದ್ದೇನೆ. ನಾನು ಅವರನ್ನ ಬೇಟಿ ಮಾಡಿದ್ದು ನಿಜ. ಹಾಗೆ ಸಿದ್ದರಾಮಯ್ಯನವರು ಬಿಜೆಪಿಯವರನ್ನ ಭೇಟಿ ಮಾಡಿದ್ದಾರೆ. ಇದಕ್ಕೇನು ಹೇಳುತ್ತೀರಿ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ












Click it and Unblock the Notifications