ಯಡಿಯೂರಪ್ಪ ಅವರನ್ನ ಕಡೆಗಣಿಸಿದ್ದೆ ಬಿಜೆಪಿಗೆ ಶಾಪ: ಎಂ ಪಿ ರೇಣುಕಾಚಾರ್ಯ ಕಿಡಿ

ಬೆಂಗಳೂರು, ಆಗಸ್ಟ್‌ 31: ಯಡಿಯೂರಪ್ಪ ಅವರಂತ ನಾಯಕರನ್ನ ಕಡೆಗಣಿಸಿದ್ದಾರೆ. ಇದು ಬಿಜೆಪಿಗೆ ಶಾಪವಾಗಿದೆ, ವರ್ಚಸ್ಸು ಇರುವವರನ್ನ ಬೆಳೆಯೋಕೆ ಬಿಡುತ್ತಿಲ್ಲ, ವಿಜಯೇಂದ್ರ ಅಂತವರನ್ನ ಮೂಲೆಗುಂಪು ಮಾಡ್ತಿದ್ದಾರೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನಗೆ ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ನಾನು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ಹೋಗಿಲ್ಲ. ಆ ನೋಟಿಸ್ ವಾಪಸ್ಸು ಪಡೆಯಬೇಕು ಅದಕ್ಕೆ ಸಭೆಗೆ ಹಾಜರಾಗ್ತಿಲ್ಲ. ನಾನು ಏನ್ ಹೇಳಬೇಕು ಅದನ್ನ ಹೇಳಿದ್ದಿನಿ. ಇದರಿಂದ ನನಗೆ ವಯ್ಯಕ್ತಿಕವಾಗಿ ಯಾವುದೇ ಲಾಭನು ಇಲ್ಲ ನಷ್ಟನೂ ಇಲ್ಲ ಎಂದು ಹೇಳಿದರು.

former-mla-mp-renukacharya

ನಾನೊಬ್ಬ ಸಾಮಾನ್ಯ ಕಾರ್ಯಕರ್ತರ ಅಪೇಕ್ಷೆಯಂತೆ ಇರುವುದನ್ನ ನೇರವಾಗಿ ಹೇಳಿದ್ದಿನಿ, ಯಡಿಯೂರಪ್ಪ ಅವರಂತ ನಾಯಕರನ್ನ ಕಡೆಗಣಿಸಿದ್ದಾರೆ ಇದು ಬಿಜೆಪಿಗೆ ಶಾಪವಾಗಿದೆ. ನಾನು ನೇರವಾಗಿ ಮಾತನಾಡಿದ್ದೇನೆ, ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಪ್ರಧಾನಿ ನರೇಂದ್ರ ಮೋದಿ, ರಾಷ್ಟಧ್ಯಕ್ಷರಾದ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ವಿರುದ್ದ ಮಾತಾಡಿಲ್ಲ ಎಂದು ತಿಳಿಸಿದರು.

ನಾನು ಮಾತಾಡಿರೋದು ಕೆಲ ವ್ಯಕ್ತಿಗಳ ದೌರ್ಬಲ್ಯವನ್ನ, ಅದನ್ನ‌ ನೇರವಾಗಿ ಖಂಡಿಸಿದ್ದೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೊಂದು ರಾಜಕೀಯ ಪಾರ್ಟಿ. ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಿದೆ, ವಿಪಕ್ಷ ಹಾಗೂ ಅಧ್ಯಕ್ಷ ಸ್ಥಾನ ಆಯ್ಕೆಯಾಗಿಲ್ಲ ಇದನ್ನ ನಾಲ್ಕು ಗೋಡೆಗಳ ಮದ್ಯೆ ಚರ್ಚೆ ಮಾಡಬೇಕು. ಕೆಲವರು ದುರಂಕಾರ ಭ್ರಮೆ ಲೋಕದಲ್ಲಿವರಂತೆ ಆಡ್ತಾರೆ. ಅದಕ್ಕೆ ಈ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದು ಲೋಕಸಭೆಗೆ ಆಗಬಾರದು ಅನ್ನೋದು ನಮ್ಮ ಉದ್ದೇಶ ಎಂದು ಹೇಳಿದರು.

ವಿಶ್ವ ಮೆಚ್ಚಿದ ನಾಯಕ ಪ್ರಧಾನಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರೇ ಪ್ರಧಾನಿ ಆಗಬೇಕೆಂಬುದು ನಮ್ಮ ಆಸೆ, ಅದು ಸರಿಯಾಗಲಿ ಅಂತ ನಾನು ಮಾತನಾಡುತ್ತೇನೆ. ನಾನು ಬಿಜೆಪಿ ಬಿಡುವುದಿಲ್ಲ, ಪಕ್ಷದಲ್ಲೇ ಇದ್ದೇನೆ. ನಾನು ಯಾವುದನ್ನ ಮುಚ್ಚುಮರೆ ಇಲ್ಲದೆ ಹೇಳಿದ್ದೇನೆ, ಪಕ್ಷದಲ್ಲಿ ಸಂಘಟನೆ ಕೊರತೆ ಇದೆ, ಇದು ಸರಿಯಾಗಬೇಕು ಎಂದು ರಾಜ್ಯ ಬಿಜೆಪಿ ವಿರುದ್ದ ಅಸಮಾಧಾನ ಹೊರಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+