ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಅಮಿತ್ ಶಾ ಗೆ ಟೀಕೆ ಮಾಡಿದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ: ಈಶ್ವರಪ್ಪ

ಬಾದಾಮಿ ದೂರವಾದರೆ ಚಾಮುಂಡಿ ಕ್ಷೇತ್ರಕ್ಕೆ ನಿಲ್ಲಬೇಕಿತ್ತು. ಬಾದಾಮಿ, ಚಾಮುಂಡಿ ಬಿಟ್ಟು ಕೋಲಾರಕ್ಕೆ ಹೋಗಿದ್ದ್ಯಾಕೆ.? ಎಂದು ಸಿದ್ದರಾಮಯ್ಯ ಅವರನ್ನ ಮಾಜಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

|
Google Oneindia Kannada News

ಬಾಗಲಕೋಟೆ, ಜನವರಿ 28: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಗ್ಗೆ ಟೀಕೆ ಮಾಡಿದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಬಿಜೆಪಿಗರು ರಾಷ್ಟ್ರೀಯ ನಾಯಕರನ್ನು ಕರೆತಂದು ಪ್ರಚಾರ ತಗೊತಿದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಕರೆತರಲು ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರು ಯಾರಿದಾರೆ? ಎಂದು ಪ್ರಶ್ನೆ ಮಾಡಿದ ಅವರು,ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಂದ್ರೆ ಗೆಲ್ಲೋ ಸೀಟು ಗೆಲ್ಲಲ್ಲ,ಯುಪಿ, ಗುಜರಾತ್ ನಲ್ಲಿ ಎಲ್ಲೆಲ್ಲಿ ಕಾಲಿಟ್ರೋ ಅಲ್ಲೆಲ್ಲ ಡೆಪಾಸಿಟ್ ಕಳೆದುಕೊಂಡರು.ಹಾಗಾಗಿ ಅವರ ರಾಷ್ಟ್ರೀಯ ನಾಯಕರು ಬರಲ್ಲ, ಅವರ ಮುಖ ನೋಡಿ ಜನ ವೋಟ್ ಕೊಡಲ್ಲ ಎಂದು ಕಿಡಿಕಾರಿದರು.

ರಾಜ್ಯಕ್ಕೆ ಅಮಿತ್ ಶಾ ಆಗಮನ; ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಬಸವರಾಜ ಬೊಮ್ಮಾಯಿರಾಜ್ಯಕ್ಕೆ ಅಮಿತ್ ಶಾ ಆಗಮನ; ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಬಸವರಾಜ ಬೊಮ್ಮಾಯಿ

ವಿಪಕ್ಷ ನಾಯಕ ಎಂಬ ಕಲ್ಪನೆ ಇಲ್ದೇನೆ ಬಾಯಿಗೆ ಬಂದಂಗೆ ಏನೇನು ಪದಗಳನ್ನು ಬಳಸ್ತಿದಾರೆ, ಅವರ ಭಾಷಣ ತೆಗೆದು ಅವರೇ ನೋಡಲಿ ಎಂದು ಟಾಂಗ್ ನೀಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಬಳಸಿದ ಪದಗಳನ್ನು ರಿಪೀಟ್ ಮಾಡಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲು ನಾನು ತಯಾರಿಲ್ಲ ಎಂದರು. ಆ ರೀತಿ ಅಶ್ಲೀಲ ಪದ ಬಳಕೆ ಮಾಡೋದ್ರಿಂದ ಒಂದಿಷ್ಟು ಜನ ಕೇಕೆ ಹೊಡಿಯಬಹುದು,ಆದ್ರೆ ಸಾಮಾನ್ಯ ಜನರು ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅನ್ನ ಒಪ್ಪಲ್ಲ ಎಂದರು.

Former Minister KS Eshwarappa Slams Siddaramaiah And DK Shivakumar

ಬರುವ ದಿನಗಳಲ್ಲಿ ವಿಪಕ್ಷ ಸ್ಥಾನವನ್ನು ಕಾಂಗ್ರೆಸ್ಸಿಗರು ಕಳೆದುಕೊಳ್ತಾರೆ. ನಮಗೂ ಆ ರೀತಿ ಪದಗಳನ್ನು ಬಳಸಲು ನಮಗೂ ಬರುತ್ತೆ,ಆದ್ರೆ ನಾನು ಖಂಡಿತ ಆ ಪದಗಳನ್ನು ಬಳಸಲು ಇಷ್ಟಪಡಲ್ಲ. ನಿಮ್ಮ ಸರ್ಕಾರ ಇದ್ದಾಗ ಏನೇನು ಮಾಡಿದ್ರಿ ಹೇಳ್ರಿ, ಒಳ್ಳೆಯ ಕೆಲಸ ಮಾಡಿದ್ರೆ ನೀವ್ಯಾಕೆ ಸರ್ಕಾರ ಕಳೆದಿಕೊಳ್ತಿದ್ರಿ? ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ,ನೀವು ಮಾಡಿದಂತಹ ಸಾಧನೆ ಸರಿಯಿಲ್ಲ ಅಂತಾನೆ ನಿಮ್ಮನ್ನ ಮನೆಗೆ ಕಳುಹಿಸಿದ್ದು,ನಾವು ಇಂತಹ ಕೆಲಸ ಮಾಡಿದ್ದೀವಿ ಅಂತಾ ಹೇಳಿ ನಾನು ಒಪ್ತೀನಿ. ಆದ್ರೆ ಏಕವಚನದಲ್ಲಿ, ವ್ಯಕ್ತಿಗತ ಟೀಕೆ ಮಾಡಬೇಡಿ, ಸೈದ್ಧಾಂತಿಕವಾಗಿ, ಅಭಿವೃದ್ಧಿ ಪರವಾಗಿ ಟೀಕೆ ಮಾಡಿ ನಾನು ಒಪ್ಪುತ್ತೇನೆ ಎಂದು ಹೇಳಿದರು.

ಸಚಿವ ಸುಧಾಕರ ಮೇಲೆ ಸಿದ್ದರಾಮಯ್ಯ ನಿರಂತರ ದಾಳಿ ವಿಚಾರ ವಾಗಿ ಮಾತನಾಡಿ,ವೈಯಕ್ತಿಕ ಟೀಕೆ ರಾಜಕಾರಣದಲ್ಲಿ ಒಳ್ಳೆಯದಲ್ಲ. ಸಿದ್ದರಾಮಯ್ಯ, ಡಿಕೆಶಿ ಅವರು, ರಾಜ್ಯ, ಕೇಂದ್ರ ಸರ್ಕಾರ ಏನೇನು ಅಭಿವೃದ್ಧಿ ಮಾಡಿಲ್ಲ ಅದನ್ನ ಹೇಳಲಿ. ನಾವು ಏನು ಮಾಡಿದ್ದೀವಿ ಅದನ್ನ ನಾವು ಹೇಳ್ತೀವಿ ಯಾವ ಸರ್ಕಾರ ಒಳ್ಳೆಯದು ಅಂತಾ ಜನ ತೀರ್ಮಾನ ಮಾಡಲಿ ಎಂದ ಅವರು,ಅಭಿವೃದ್ಧಿ ಕಾರ್ಯಗಳು, ಸಂಘಟನೆ, ನೇತೃತ್ವ ಈ ಅಂಶಗಳನ್ನು ಜನ ಗಮನಿಸುತ್ತಾರೆ. ಈ ಮೂರು ಅಂಶಗಳಲ್ಲಿ ಯಾವ ಪಕ್ಷ ಒಳ್ಳೆಯದು ಅಂತಾ ಜನ ತೀರ್ಮಾನ ಮಾಡುತ್ತಾರೆ ಎಂದರು.

Former Minister KS Eshwarappa Slams Siddaramaiah And DK Shivakumar

ಬಾದಾಮಿ ದೂರವಾದರೆ ಚಾಮುಂಡಿ ಕ್ಷೇತ್ರಕ್ಕೆ ನಿಲ್ಲಬೇಕಿತ್ತು. ಬಾದಾಮಿ, ಚಾಮುಂಡಿ ಬಿಟ್ಟು ಕೋಲಾರಕ್ಕೆ ಹೋಗಿದ್ದ್ಯಾಕೆ.? ಎಂದು ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದರು. ಬಾದಾಮಿ ಮತದಾರರಿಗೆ ಸಿದ್ದರಾಮಯ್ಯ ಮಾಡ್ತಾ ಇರೋ ದ್ರೋಹವಾಗಿದೆ. ನಾನು ಈ ಮೊದಲು ಬಾಗಲಕೋಟೆಯಲ್ಲೆ ಹೇಳಿದ್ದೆ, ಸಿದ್ದರಾಮಯ್ಯ ಯಾವ ಕಾರಣಕ್ಕೂ ಮತ್ತೆ ಬಾದಾಮಿಗೆ ಬರಲ್ಲ ಅಂತ. ಬಾದಾಮಿ ದೂರ ಆಗಿದ್ರೆ ಚಾಮುಂಡಿಯಲ್ಲಿ ನಿಲ್ಲಬೇಕಿತ್ತು. ಚಾಮುಂಡಿ ಬಿಟ್ಟು ಕೋಲಾರಕ್ಕೆ ಹೋಗ್ತಿದಿರಾ? ಚಾಮುಂಡೇಶ್ವರಿಯಲ್ಲಿ ಆರು ಸಲ ಗೆದ್ದಿದ್ದೀಯಾ.ಯಾವ ಮತದಾರರು ನಿನ್ನ ತೀರಸ್ಕಾರ ಮಾಡಿದ್ದಾರೋ,ಅದೇ ಕ್ಷೇತ್ರಕ್ಕೆ ಹೋಗಿ ಜನರಿಗೆ ಅಭಿವೃದ್ದಿ ಕೆಲಸ ಮಾಡ್ತೇನೆ ಅಂತ ಹೇಳಿ ಅಲ್ಲೆ ಸ್ಪರ್ಧೆ ಮಾಡೋದು ಅವನು ರಾಜಕಾರಣಿ ಎಂದರು.

ಇದೆಲ್ಲ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಿ ಆಸೆ ಆಮಿಶ ತೋರಿಸಿ ಜಾತಿ ಹೆಸರಿನಲ್ಲಿ ಗೆಲ್ಲೋದು ಎಂದ ಅವರು, 224 ಕ್ಷೇತ್ರದಲ್ಲಿ ಓಡಾಡೋದು ರಾಜಕಾರಣನಾ? ಯುವಕರಿಗೆ ಅವಕಾಶ ಕೊಡಬೇಕು ಎನ್ನುವುದು ಬಿಜೆಪಿ ಯೋಚನೆ ಮಾಡುತ್ತಿದೆ. ಇದೇ ಕಾರಣಕ್ಕೆ ನಮ್ಮಲ್ಲಿ ಇನ್ನು ಪಟ್ಟಿ ಬಿಡುಗಡೆ ಮಾಡಿಲ್ಲ. ಜೆಡಿಎಸ್ ನಲ್ಲಿ ತಮ್ಮಮ್ಮ ಹೆಸರು ಘೋಷಣೆ ಮಾಡುತ್ತಿದ್ದಾರೆ, ನನ್ನ ಅಪೇಕ್ಷೆ ಸಿದ್ದರಾಮಯ್ಯ ಅವರು ಚಾಮುಂಡಿಯಲ್ಲಿ ನಿಲ್ಲೋದು ಗೌರವ, ಬಾದಾಮಿ ಬಿಟ್ಟು ಹೋಗುತ್ತಿರುವುದು ಮತದಾರರಿಗೆ ಮಾಡ್ತಾ ಇರೋ ದ್ರೋಹವಾಗಿದೆ. ಇದೇ ತರಹ ಮಾಡಿದ್ರೆ ಹತ್ತು ಕ್ಷೇತ್ರದಲ್ಲಿ ನಿಂತರೂ ಗೆಲ್ಲಲ್ಲ ಎಂದು ಈಶ್ವರಪ್ಪ ಟಾಂಗ್ ನೀಡಿದರು.

English summary
karnataka assembly elections 2023; KS Eshwarappa said that Congress leaders are under the delusion that they will become bigger if they criticize Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X