ಸಿದ್ದರಾಮಯ್ಯ, ಡಿಕೆಶಿ ಅವರೇ ನಿಮ್ಮ ಮನೆ ಹೆಣ್ಣು ಮಕ್ಕಳನ್ನ ಮತಾಂತರ ಮಾಡಿದರೇ ಏನು ಮಾಡ್ತೀರಾ?: ಈಶ್ವರಪ್ಪ
ಶಿವಮೊಗ್ಗ, ಜೂನ್ 16: ಸಿದ್ದರಾಮಯ್ಯ, ಡಿಕೆಶಿ ಅವರೇ ನಿಮ್ಮ ಮನೆ ಹೆಣ್ಣು ಮಕ್ಕಳನ್ನು ಬಲತ್ಕಾರವಾಗಿ ಮತಾಂತರ ಮಾಡಿದರೇ ಏನು ಮಾಡ್ತೀರಾ? ಕೇರಳ ಸ್ಟೋರಿ ಸಿನಿಮಾ ನೋಡಿದ್ರಾ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಈ ಕುರಿತು ಶಿವಮೊಗ್ಗದಲ್ಲಿ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಸ್ಲಿಂರನ್ನು ಮೆಚ್ಚಿಸಲು ಈ ಕಾಯ್ದೆ ಹಿಂಪಡೆಯುತ್ತಿದ್ದೀರಾ? ಹಿಂದುಗಳಿಗೆ ಅಪಮಾನ ಮಾಡುತ್ತಿದ್ದಿರಾ. ಈ ಕಾಯ್ದೆ ಹಿಂಪಡೆದರೆ ಲವ್ ಜಿಹಾದ್ ಆರಂಭವಾಗುತ್ತದೆ, ಸರಕಾರ ಬರುತ್ತೆ ಹೋಗುತ್ತೆ ಶಾಶ್ವತವಲ್ಲ. ಬಡವರ ರಕ್ಷಣೆಗೆ, ರಾಜ್ಯ ರಕ್ಷಣೆಗೆ ಏನು ಮಾಡಿದ್ರಿ ಅಂತಾ ಜನ ಕೇಳುತ್ತಾರೆ ಎಂದರು.

ಒಂದು ತಿಂಗಳಿಗೆ ಈ ಸರಕಾರ ಯಾಕಾದ್ರೂ ಬಂತೋ ಅಂತ ಜನ ಅಂತಿದ್ದಾರೆ. ತಕ್ಷಣ ಮತಾಂತರ ಕಾಯ್ದೆ ಹಿಂಪಡೆಯುವುದನ್ನು ರದ್ದು ಮಾಡಬೇಕು, ಮತಾಂತರ ಕಾಯ್ದೆ ಮುಂದುವರಿಸಬೇಕು ಮುಂದಿನ ದಿನಗಳಲ್ಲಿ ಬಿಜೆಪಿ ಪ್ರಬಲ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಿಂಗಳು ಆಗಿದೆ. ಈ ಸರಕಾರ ನೇರವಾಗಿ ಹಿಂದುಗಳ ವಿರೋಧಿ, ಬಡಜನರಿಗೆ ಮೋಸ ಮಾಡುವ ಸರಕಾರ. ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದರು, ಕೇಂದ್ರ ಸರಕಾರ ಐದು ಕೆಜಿ ಕೊಡ್ತಿತ್ತು. ಚುನಾವಣೆಯಲ್ಲಿ ಗ್ಯಾರಂಟಿ ಕೊಡುವ ಸಂದರ್ಭದಲ್ಲಿ ಮೋದಿ ಅವರಿಗೆ ಈ ಬಗ್ಗೆ ಕೇಳಿದ್ರಾ? ಎಂದು ಪ್ರಶ್ನಿಸಿದ ಅವರು, ಅವರಿಗೆ ಕೇಳದೇ ಗ್ಯಾರಂಟಿ ಘೋಷಣೆ ಮಾಡಿದ್ದೀರಾ. ಬಡವರ ಓಟು ಹಾಕಿಸಿಕೊಂಡು ಮೋಸ ಮಾಡ್ತಿದ್ದೀರಾ, ಬಡವರ ಶಾಪ ತಟ್ಟೇ ತಟ್ಟುತ್ತದೆ ಎಂದು ವಾಗ್ದಾಳಿ ನಡೆಸಿದರು.
ಪದವೀಧರ ಯುವಕರಿಗೆ ಮೂರು ಸಾವಿರ ಕೊಡುತ್ತಿವಿ ಅಂದ್ರು. ಈ ವರ್ಷ ಪಾಸಾಗಿರುವ ಯುವಕರಿಗೆ ಅಂತ ಹೇಳಿ ಮೋಸ ಮಾಡಿದ್ದಾರೆ. ವಿದ್ಯುತ್ ಏರಿಕೆ ಮಾಡಿ ಹಾಹಾಕಾರ ಎದ್ದಿದೆ, ಕೈಗಾರಿಕೆಗಳು ಮುಚ್ವುವ ಪರಿಸ್ಥಿತಿ ಬಂದಿದೆ. ಜನರಿಗೆ ಬೇಕಾದಂತಹ ಸರಕಾರ ಆಗಬೇಕು, ವಿದ್ಯುತ್ ದರ ಬಿಜೆಪಿ ಏರಿಕೆ ಮಾಡಿದೆ ಎಂದು ಹೇಳುತ್ತಾರೆ. ಅಕ್ಕಿ ಕೇಂದ್ರ ಸರಕಾರ ಕೊಡ್ತಿಲ್ಲ ಅಂತೇಳಿ ಪಲಾಯನ ಮಾಡುತ್ತಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸ್ವಾಗತ ಮಾಡ್ತೇನೆ. ಖಾಸಗಿ ಬಸ್ ಮುಚ್ಚುವ ಸ್ಥಿತಿ ಆಟೋ ಚಾಲಕರಿಗೆ ಹೊಟ್ಟೆಗೆ ಅನ್ನ ಇಲ್ಲ, ಖಾಸಗಿ ಬಸ್, ಆಟೋದವರಿಗು ಉಚಿತ ಕೊಡಿ. ಹೆಣ್ಣು ಮಕ್ಕಳಿಗೆ ಹಣ ಕೊಡ್ತೀವೆ ಅಂತೇಳಿ ಅರ್ಜಿ ಹಾಕೋದನ್ನೇ ಮುಂದು ಹಾಕ್ತಿದ್ದಾರೆ. ಮೊದಲ ಕ್ಯಾಬಿನೆಟ್ ನಲ್ಲೇ ಎಲ್ಲಾ ಗ್ಯಾರಂಟಿ ಘೋಷಣೆ ಮಾಡ್ತೀವಿ ಅಂದ್ರು. ಸರಕಾರ ಬಂದು ಒಂದು ತಿಂಗಳು ಆದ್ರೂ ಕೊಟ್ಟಿಲ್ಲ ಎಂದರು.
ಎಲ್ಲರಿಗೂ ಮೋಸ ಮಾಡಿ ಅಧಿಕಾರಕ್ಕೆ ಬಂದರಿ ಇಂತಹ ಅಧಿಕಾರ ಬೇಕಿತ್ತಾ? ಮೋಸ ಅಂತೂ ಮಾಡಿದ್ದೀರಾ ನೀವು ಅಕ್ಕಿ ಎಲ್ಲಿಂದ ತರುತ್ತೀರಾ ಗೊತ್ತಿಲ್ಲ ಅಕ್ಕಿ ಕೊಡಿ. ಇಲ್ಲದಿದ್ದರೆ ಬಡವರಿಗೆ ಅವರ ಅಕೌಂಟ್ ಗೆ ಹಣವನ್ನು ಹಾಕಿ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ - ಬಿಜೆಪಿ ಹೊಂದಾಣಿಕೆ ರಾಜಕಾರಣ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನಾನು ಸಿ.ಟಿ.ರವಿ ಜೊತೆ ಪ್ರತಾಪ್ ಸಿಂಹ ಜೊತೆ ಚರ್ಚೆ ಮಾಡಿಲ್ಲ. ಅವರ ಜೊತೆ ಈ ಬಗ್ಗೆ ನಾನು ಚರ್ಚೆ ಮಾಡುತ್ತೇನೆ, ಈ ಬಗ್ಗೆ ಕೇಂದ್ರದ ನಾಯಕರ ಜೊತೆ ಮಾತನಾಡುತ್ತೇನೆ. ಈ ರೀತಿ ಹೊಂದಾಣಿಕೆ ನಡೆದಿದ್ದೇ ಆಗಿದ್ದರೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
ಜಿ.ಪಂ. ತಾ.ಪಂ. ಚುನಾವಣೆ ದೃಷ್ಟಿಯಿಂದ ರಾಜ್ಯದಾದ್ಯಂತ 7 ತಂಡ ಪ್ರವಾಸ ಮಾಡಲಾಗುವುದು. ಜೂನ್ 22 ಹಾಗು 23 ರಂದು ತಂಡ ರಾಜ್ಯದಲ್ಲಿ ಪ್ರವಾಸ ಮಾಡಲಿದೆ, ನನ್ನ ನೇತೃತ್ವದಲ್ಲಿ ಒಂದು ತಂಡ ಪ್ರವಾಸ ಮಾಡಲಿದೆ ಎಂದು ಹೇಳಿದರು.












Click it and Unblock the Notifications