ಜೆಡಿಎಸ್‌ನಿಂದ ಬಿಜೆಪಿಗೆ ಹಾರಿದ ಕೋಟೆ ಶಿವಣ್ಣ
ಬೆಂಗಳೂರು, ಮೇ 20 : ಕೆಲವು ದಿನಗಳ ಹಿಂದೆ ಜೆಡಿಎಸ್ ತೊರೆದಿದ್ದ ಮಾಜಿ ಸಚಿವ ಕೋಟೆ ಶಿವಣ್ಣ ಬಿಜೆಪಿ ಸೇರಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಿದರು ಎಂದು ಆರೋಪಿಸಿದ್ದ ಶಿವಣ್ಣ ಪಕ್ಷ ತೊರೆದಿದ್ದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕೋಟೆ ಶಿವಣ್ಣ (ಎಂ.ಶಿವಣ್ಣ) ಅವರು ಬೆಂಬಲಿಗರ ಜೊತೆ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪಕ್ಷದ ಬಾವುಟ ನೀಡುವ ಮೂಲಕ ಶಿವಣ್ಣ ಅವರನ್ನು ಬರಮಾಡಿಕೊಂಡರು. [ಜೆಡಿಎಸ್ ತೊರೆದ ಮಾಜಿ ಸಚಿವ ಎಂ. ಶಿವಣ್ಣ]

'ಜೆಡಿಎಸ್ ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಿದರು ಎಂದು ಆರೋಪಿಸಿದ್ದ ಶಿವಣ್ಣ ಅವರು, ರಾಜ್ಯದ ತುಂಬಾ ಸಂಚರಿಸಿ ಪಕ್ಷ ಸಂಘಟನೆ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದೆ. ಕುಮಾರಸ್ವಾಮಿ ಮತ್ತು ದೇವೇಗೌಡರು ನನಗೆ ಅಗತ್ಯ ಸಹಕಾರ ನೀಡಲಿಲ್ಲ' ಎಂದು ದೂರಿದ್ದರು ಮತ್ತು ಪಕ್ಷ ತೊರೆದಿದ್ದರು. [ಕಣ್ಣೀರು ಹಾಕಿದ ಜೆಡಿಎಸ್ ಅಭ್ಯರ್ಥಿ ಶಿವಣ್ಣ]
2014ರ ಲೋಕಸಭೆ ಚುನಾವಣೆಗೆ ಚಾಮರಾಜನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಣ್ಣ ಅವರು ಕಾಂಗ್ರೆಸ್‌ನ ಧ್ರುವನಾರಾಯಣ ಅವರ ವಿರುದ್ಧ ಸೋಲು ಅನುಭವಿಸಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿಯೂ ಅವರು ಚಾಮರಾಜನಗರದಲ್ಲಿ ಸೋತಿದ್ದರು.













Click it and Unblock the Notifications