ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿಶತ 60 ರಷ್ಟು ಮಹಿಳೆಯರಿಗೆ ಹಣ ಬಂದಿಲ್ಲ: ಬಿ.ಸಿ. ಪಾಟೀಲ್
ಹಾವೇರಿ, ಅಕ್ಟೋಬರ್ 30: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿಶತ 60 ಮಹಿಳೆಯರಿಗೆ ಹಣ ಬಂದಿಲ್ಲ. ಮೊದಲ ಕಂತು ಬಂದಿದ್ದನ್ನ ಬಿಟ್ಟರೆ ಬಹುತೇಕ ಮಹಿಳೆಯರಿಗೆ ಗೃಹಲಕ್ಷ್ಮಿ
ಹಣ ಬಂದಿಲ್ಲ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಆರೋಪಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು ಒಂದೇ ಒಂದು ಕೆಜಿ ಅಕ್ಕಿ ಕೊಡಲಾಗಿಲ್ಲ. ಐದು ಕೆಜಿ ಅಕ್ಕಿ ನೀಡುತ್ತಿರುವದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯದು. ಜನರಿಗೆ ರೈತರಿಗೆ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ರೈತರನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಮಾಜಿ ಸಚಿವ ಪಾಟೀಲ್ ಆರೋಪಿಸಿದರು.

ರಾಜ್ಯ ಸರ್ಕಾರದಲ್ಲಿ ಹಣ ಇಲ್ಲಾ ಸಂಪೂರ್ಣ ದಿವಾಳಿಯಾಗಿದೆ. ಭಾಗ್ಯಗಳ ಈಡೇರಿಸುವ ಭರದಲ್ಲಿ ಅವುಗಳಿಗೆ ಮಾತ್ರ ಗಮನ ನೀಡಿದ್ದಾರೆ, ಭಾಗ್ಯಗಳ ಈಡೇರಿಸುವ ಭರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಬಿ ಸಿ ಪಾಟೀಲ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪ್ರತಿಶತ 65 ರಷ್ಟು ಮಳೆ ಕೊರತೆಯಾಗಿದೆ. ಆಕ್ಟೋಬರ್ ತಿಂಗಳಿನಲ್ಲಿ ನೀರಿನ ಆಹಾಕಾರ ಎದ್ದಿದೆ. ರೈತರಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲಾ. ಏಳು ತಾಸು ಇರಲಿ ಮೂರು ತಾಸು ಸಹ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ನಾವು ಕಳೆದ ವರ್ಷ ಅತಿವೃಷ್ಠಿಯಾದಾಗ ಕೇಂದ್ರ ಹಣ ಬರುವ ಮುಂಚೆ ಪರಿಹಾರ ವಿತರಣೆ ಮಾಡಿದ್ದೇವು ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ಕೇಂದ್ರ ಸರ್ಕಾರ ಮೇಲೆ ಸುಮ್ಮನೆ ಗೂಬೆ ಕುಳ್ಳಿರಿಸುತ್ತಿದ್ದಾರೆ. ಇವತ್ತು ಸುಮ್ಮನೆ ಹುಲಿ ಉಗುರು ಹೇಳಿ ಕೊಂಡು 50 ವರ್ಷದ ಕಾಯ್ದೆ ಈಗ ತಂದು ಅರಣ್ಯ ಇಲಾಖೆಯವರೇನು ಕತ್ತೆಕಾಯ್ತಾ ಇದ್ದರಾ ಎಂದು ಪಾಟೀಲ್ ಪ್ರಶ್ನಿಸಿದರು. ರಾಜ್ಯದಲ್ಲಿ ಹಿಂದೂಗಳನ್ನ ಸಂಪೂರ್ಣವಾಗಿ ಕಡಗಣಿಸಲಾಗಿದೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹಿಂದೂಗಳಿಗೆ ಹಲವು ನಿಯಮ ಹೇಳುತ್ತಾರೆ. ಹಿಂದೂಗಳನ್ನ ಹತ್ತಿಕ್ಕುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಬಿ.ಸಿ. ಪಾಟೀಲ್ ಆರೋಪಿಸಿದರು.
ಹಿರೇಕೆರೂರು ತಾಲೂಕಿನಲ್ಲಿ ಐದು ಎಕರೆ ಜೋಳ ಹಾಳಾದರೆ ರಾಜ್ಯ ಸರ್ಕಾರ ಪರಿಹಾರ 2804 ರೂಪಾಯಿ ಪರಿಹಾರ ನೀಡಿದ್ದಾರೆ. ಈ ರೀತಿಯಾದರೆ ರೈತರು ಹೇಗೆ ಬದುಕಬೇಕು ಇದರಿಂದ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಪಾಟೀಲ್ ಒತ್ತಾಯಿಸಿದರು.
ನಾವು ಅಧಿಕಾರದಲ್ಲಿದ್ದಾಗ ಕೇಂದ್ರದ ಕಡೆ ಬೊಟ್ಟು ಮಾಡದೆ ನಾವು ಪರಿಹಾರ ನೀಡಿದ್ದೇವು. ಇವತ್ತು ಇವರು ಅಧಿಕಾರಿಗಳಿಗೆ ಹೇಳಿ ಪ್ರತಿಶತ 95 ರಷ್ಟು ಹಾನಿಯಾದರೂ ಪ್ರತಿಶತ 5 ರಷ್ಟು ಹಾನಿಯಾಗಿದೆ ಎಂದು ಅಧಿಕಾರಿಗಳಿಗೆ ಹೇಳಿಸಿದ್ದಾರೆ. ಗ್ಯಾರಂಟಿ ಈಡೇರಿಸಿದ್ದೇವೆ ಗ್ಯಾರಂಟಿ ಈಡೇರಿಸಿದ್ದೇವೆ ಎಂದು ಹೇಳಿಕೊಂಡು ಹೋರಟಿದ್ದಾರೆ ರೈತರನ್ನ ಬದುಕಿಸುವ ಕುರಿತಂತೆ
ಸಿಎಂ ಸಿದ್ದರಾಮಯ್ಯ ಆಗಲಿ ಡಿಸಿಎಂ ಡಿ ಕೆ ಶಿವಕುಮಾರ್ ಆಗಲಿ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.












Click it and Unblock the Notifications