Sriramulu: ಬಿಜೆಪಿ ಪಕ್ಷ ತೊರೆಯುವ ಬಗ್ಗೆ ಶ್ರೀರಾಮುಲು ಸ್ಪಷ್ಟನೆ

ಬೆಂಗಳೂರು, ಜನವರಿ 23: ರಾಜ್ಯ ಕಮಲ ಕೋಟೆಯೊಳಗೆ ಬಣ ಬಡಿದಾಟ ಜೋರಾಗಿರುವ ಬೆನ್ನಲ್ಲೇ, ಹಿಂದುಳಿದ ಸಮುದಾಯದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಈ ದಿಢೀರ್ ಬೆಳವಣಿಗೆ ಬಿಜೆಪಿಗೆ ಭಾರೀ ಆಘಾತ ಉಂಟಾಗಿದೆ. ಅಲ್ಲದೇ ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಒಂದು ವೇಳೆ ರಾಮುಲು ಬಿಜೆಪಿ ಪಕ್ಷ ಬಿಡುವ ನಿರ್ಧಾರಕ್ಕೆ ಬಂದರೆ ಪರಿಶಿಷ್ಟ ವರ್ಗದ ಮತಗಳು ಕೈ ತಪ್ಪುವ ಆತಂಕ ಬಿಜೆಪಿಗೆ ಎದುರಾಗಿದೆ.

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆದಿತ್ತು.ಸಂಡೂರು ಚುನಾವಣೆಯ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದ ಬಂಗಾರು ಹನುಮಂತು ದೂರು ನೀಡಿದ್ದರು.ಇನ್ನು ಆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನಾಯಕರ ಶ್ರಮ ಸಾಕಾಗಿಲ್ಲ ಎಂದು ಶ್ರೀರಾಮುಲು ಅವರನ್ನು ಸೇರಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ಈ ಬೆಳವಣೆಗೆಯ ಮಧ್ಯ ಶ್ರೀರಾಮುಲು ಖಾಸಗಿ ಚಾನಲ್‌ ನಲ್ಲಿ ಪಕ್ಷ ಬಿಡುಗ ಮಾತನಾಡಿದ್ದಾರೆ.

Former Minister B Sriramulu clarifies on leaving BJP party

ಈ ಕುರಿತು ಖಾಸಗಿ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಬಿ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಸಂದರ್ಭ ಬಂದ್ರೆ ನಾನು ಹೈಕಮಾಂಡ್‌ ನಾಯಕರನ್ನ ಭೇಟಿ ಮಾಡಿ ಬರುತ್ತೇನೆ. ಈ ಎಲ್ಲಾ ಬೆಳವಣಿಗಗಳ ಬಗ್ಗೆ ನಾನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ, ನಾನು ಪಕ್ಷ ಬಿಡಲ್ಲ, ನಮ್ಮಲ್ಲಿ ಜಗಳ ಆದರೆ, ನಾವೇ ಸರಿ ಪಡಿಸಿಕೊಳ್ಳುತ್ತೇನೆ. ನಾನು ಮಾತನಾಡುವ ಸಂದರ್ಭ ಬಂದಾಗ ಟೈಮ್‌ ನೋಡಿ ಮಾತ್ನಾಡ್ತಿನಿ, ನನ್ನ ಬಗ್ಗೆ ದೆಹಲಿ ಹೈಕಮಾಂಡ್‌ ನಾಯಕರಿಗೆ ಗೊತ್ತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.

ರಾಧಾಮೋಹನ್ ದಾಸ್ ಅವರ ಆರೋಪದಿಂದ ನನಗೆ ನೋವಾಗಿದೆ. ಆದರೆ ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ , ನಾನು ಪಕ್ಷ ಬಿಡುವ ಪ್ರಶ್ನೆ ಇಲ್ಲ, ನನಗೆ ಸಂಕಟ ಆಗಿದ್ದಕ್ಕೆ ಪಕ್ಷ ಬಿಡೋದಾಗಿ ಹೇಳಿದ್ದೆ, ನಿಮಗೆ ಇಷ್ಟ ಇಲ್ಲ ಎಂದಾದರೆ ನಾನು ಪಕ್ಷ ಬಿಡುತ್ತೇನೆ. ಆದರೆ ಪಕ್ಷ ಬಿಡುವ ಮುನ್ನವೇ ಹೈಕಮಾಂಡ್‌ ಗೆ ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಎಲ್ಲವನ್ನೂ ಹೇಳಿಯೇ ಬಿಡುತ್ತೇನೆ. ನಾನು ಈವರೆಗೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ, ಕೆಲಸ ಮಾಡಿದ್ದೇನೆ. ಇಲ್ಲಿ ಸುಮ್ಮನಿದ್ದರೆ, ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ.

ರಾಧಾಮೋಹನ್ ದಾಸ್ ಉತ್ತರಪ್ರದೇಶದವರು ಅವರಿಗೆ ಇಲ್ಲಿನ ಕೆಲವು ವಿಚಾರಗಳು ಗೊತ್ತಿಲ್ಲ. ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದೇನೆ. ಈ ವಿಚಾರವನ್ನು ರಾಜ್ಯಾಧ್ಯಕರಾದ ಬಿ ವೈ ವಿಜಯೇಂದ್ರ ಅವರಿಗೂ ತಿಳಿಸಿದ್ದೇನೆ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳಿರೋದು ಸ್ಪಷ್ಟವಾಗಿದೆ. ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ರಾಧಾಮೋಹನ್ ದಾಸ್ ಲಘುವಾಗಿ ಮಾತನಾಡಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.

ಇನ್ನೂ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಬಣ ಬಡಿದಾಟ ನಡೆಯುತ್ತಿದ್ದು, ರಾಜ್ಯಾಧ್ಯಕ್ಷ ಬದಲಾವಣೆಯಲ್ಲಿ ಬೆಂಬಲ ಯಾರಿಗೆ ವ್ಯಕ್ತಿ ಪರವಾಗಿ ನಾನು ಇಲ್ಲ, ನಾನು ಪಕ್ಷದ ಪರವಾಗಿ ಇದ್ದೇನೆ. ಪಕ್ಷ ಏನು ಹೇಳುತ್ತೋ ಅದನ್ನ ನಾನು ಮಾಡುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+