ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಮುಖ್ಯಮಂತ್ರಿ 'ಸಿದ್ದರಾಮಯ್ಯ' ನಡೆ ಒಪ್ಪದ 'ರಾಕಿಂಗ್ ಸ್ಟಾರ್ ಯಶ್'!

|
Google Oneindia Kannada News

ಬೆಂಗಳೂರು, ಫೆ. 20: ರಾಜಕೀಯ ಹಾಗೂ ಸಿನಿಮಾ ರಂಗಕ್ಕೆ ಅವಿನಾಭಾವ ಸಂಬಂಧವಿದೆ. ಎರಡೂ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿರುವವರು ಬಹಳಷ್ಟು ಜನರಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಸಿನಿಮಾ ರಂಗದಿಂದಲೇ. ಬಳಿಕ ರಾಜಕೀಯ ಕ್ಷೇತ್ರಕ್ಕೆ ಹೋಗಿ ಮುಖ್ಯಮಂತ್ರಿಗಳಾದರು. ಇನ್ನು ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿಯೂ ಸಿನಿಮಾ ಕ್ಷೇತ್ರದಲ್ಲಿದ್ದವರು ರಾಜಕೀಯಕ್ಕೆ ಹೋಗಿ ಸಾಧನೆ ಮಾಡಿದ್ದಾರೆ. ಹಾಗೆಯೆ ರಾಜಕೀಯದಲ್ಲಿದ್ದವರು ಸಿನಿಮಾ ಕ್ಷೇತ್ರಕ್ಕೆ ಹೋಗಿ ಸಾಧನೆ ಮಾಡಿದ್ದಾರೆ.

ರಾಜಕೀಯ ನಾಯಕರಿರಲಿ ಅಥವಾ ಸಿನಿಮಾ ನಾಯಕರಿರಲಿ ಇಬ್ಬರಿಗೂ ಅಭಿಮಾನಿಗಳೇ ಆಸ್ತಿ. ಹೀಗಾಗಿ ತಮ್ಮ ಅಭಿಮಾನಿಗಳಿಗೆ ಎರಡೂ ರಂಗಗಳ ನಾಯಕರು ಹೆಚ್ಚು ಮಹತ್ವ ಕೊಡುತ್ತಾರೆ. ಅಭಿಮಾನಿಗಳಲ್ಲಿ ಅಂದಾಭಿಮಾನಿಗಳು ಅನೇಕ ಬಾರಿ ತಮ್ಮ ನೆಚ್ಚಿನ ನಾಯಕರಿಗೆ ಮುಜುಗುರವನ್ನುಂಟು ಮಾಡುತ್ತಾರೆ. ಆದರೂ ತಮ್ಮ ಅಭಿಮಾನಿಗಳನ್ನು ರಾಜಕೀಯ ನಾಯಕರಿರಲಿ ಅಥವಾ ಸಿನಿಮಾ ನಾಯಕರಿರಲಿ ಬಿಟ್ಟು ಕೊಡುವುದಿಲ್ಲ. ಹೀಗೆ ಅಭಿಮಾನಿಗಳ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕನ್ನಡ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಅವರ ನಡೆಗಳು ಬೇರೆ ಬೇರೆಯಾಗಿವೆ.

ಅಭಿಮಾನಿಯ ಆತ್ಮಹತ್ಯೆ

ಅಭಿಮಾನಿಯ ಆತ್ಮಹತ್ಯೆ

ವೈಯಕ್ತಿಕ ಕಾರಣಗಳಿಂದ ಮಂಡ್ಯ ತಾಲೂಕಿನ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಯುವಕ ಕೃಷ್ಣ(24) ಆತ್ಮಹತ್ಯೆಗೆ ಶರಣಾಗಿದ್ದ. ವಿಶೇಷ ಎಂದರೆ ಕೃಷ್ಣ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾಯಕ ನಟ ಯಶ್ ಅವರಿಬ್ಬರ ಕಟ್ಟಾ ಅಭಿಮಾನಿಯಾಗಿದ್ದ. ತಾನು ಸಾಯುವ ಮೊದಲು ಡೆತ್‌ನೋಟ್‌ ಬರೆದಿಟ್ಟಿದ್ದ ಕೃಷ್ಣ, ನಟ ಯಶ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಕೊನೆಯ ಆಸೆಯನ್ನು ಡೆತ್‌ ನೋಟ್‌ನಲ್ಲಿ ತಿಳಿಸಿದ್ದ.

ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ

ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ

ಹೀಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲೇ ನಿಗದಿಯಾಗಿದ್ದ ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಅಭಿಮಾನಿಯ ಅಂತ್ಯಕ್ರಿಯೆಲ್ಲಿ ಭಾಗವಹಿಸಿದರು. ಆತ್ಮಹತ್ಯೆ ಮಾಡಿಕೊಂಡಿದ್ದ ಕೃಷ್ಣನ ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರಲ್ಲಿ ಧೈರ್ಯ ತುಂಬಿದರು. ಬಳಿಕ ಕೋಡಿದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ಆತ್ಮಹತ್ಯೆಗೂ ಮುನ್ನ ಹುಡುಗ ಕೃಷ್ಣ ತನ್ನ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಬರಬೇಕು ಅಂತ ಬರೆದಿಟ್ಟಿದ್ದ, ಆ ಕಾರಣ ಅತ್ಯಂತ ದುಃಖದಿಂದ ಆತನ ಕೊನೆ ಆಸೆ ಈಡೇರಿಸಿದ್ದೇನೆ ಎಂದಿದ್ದರು.

ದುಡುಕಿನ ನಿರ್ಧಾರ ಬೇಡ

ದುಡುಕಿನ ನಿರ್ಧಾರ ಬೇಡ

ಯಾರ ಅಭಿಮಾನಿಯೇ ಆಗಲಿ, ಯಾವುದೇ ಧರ್ಮ-ಸಿದ್ಧಾಂತ ಇರಲಿ, ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಡುಕಿನ ನಿರ್ಧಾರ ಬೇಡ. ಪ್ರತೀ ಜೀವವೂ ಅಮೂಲ್ಯ. ಕತ್ತಲು ಕಳೆದ ನಂತರ ಬೆಳಕು ಬಂದಂತೆ, ಕಷ್ಟಗಳು ದೂರಾಗಲೇಬೇಕು. ಭರವಸೆಯೇ ಬದುಕು ಎನ್ನುವುದನ್ನು ಮರೆಯದಿರೋಣ. ಸಮಸ್ಯೆಗಳಿಗೆ ಸಾವು ಎಂದಿಗೂ ಪರಿಹಾರವಲ್ಲ. ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದರೆ ತಮ್ಮ ಸಮಸ್ಯೆಯನ್ನು ಬೇರೊಬ್ಬರ ಹೆಗಲಿಗೆ ವರ್ಗಾಯಿಸಿದಂತೆ. ಸಾವಿನ ನಂತರವೂ ಸಮಸ್ಯೆ ಹಾಗೆಯೇ ಉಳಿಯುತ್ತೆ, ಆದರೆ ಅಮೂಲ್ಯ ಬದುಕೊಂದು ನಷ್ಟವಾಗುತ್ತೆ. ಕಷ್ಟಗಳು ಬಂದಾಗ ಎದುರಿಸುವ ಗಟ್ಟಿತನ ಪ್ರತಿಯೊಬ್ಬರಲ್ಲೂ ಬರಬೇಕು. ನೆನಪಿರಲಿ, ಸಮಸ್ಯೆಗಳು ತಾತ್ಕಾಲಿಕ, ಆದರೆ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು ಶಾಶ್ವತ ಎಂದು ಸಿದ್ದರಾಮಯ್ಯ ಅವರು ಧೈರ್ಯ ತುಂಬಿದ್ದರು.

Recommended Video

ಮಂಗಳನ ಅಂಗಳದಲ್ಲಿ ಪರ್ಸೀವರೆನ್ಸ್ ರೋವರ್ ಇಳಿಸಿದ ಕರ್ನಾಟಕ ಮೂಲದ ವಿಜ್ಞಾನಿ | Karnataka | Oneindia Kannada
ಅಭಿಮಾನವೇ ನಮ್ಮ ಬದುಕು

ಅಭಿಮಾನವೇ ನಮ್ಮ ಬದುಕು

ಇನ್ನು ಯಶ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಕೃಷ್ಣನ ಅಂತಿಮ ಆಸೆಯ ಕುರಿತು ಯಶ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು, ಜೀವನ, ಹೆಮ್ಮೆ. ಆದರೆ ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆಪಡಲು ಸಾಧ್ಯವೇ? ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ. ಕೋಡಿ ದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಓಂ ಶಾಂತಿ ಎಂದಿದ್ದರು.


ಆ ಮೂಲಕ ಸಿದ್ದರಾಮಯ್ಯ ಅವರಿಗೆ ಭಿನ್ನ ನಡೆಯನ್ನು ಯಶ್ ಅವರು ಪ್ರದರ್ಶನ ಮಾಡಿದ್ದರು. ಹೀಗೆ ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಲ್ಲಿ ಭಾಗವಹಿಸುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಯಶ್ ಬಂದಿದ್ದರು. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ಅವರು ಒಂದೇ ಪ್ರಕರಣದ ಕುರಿತು ಬೇರೆ ಬೇರೆಯಾಗಿ ನಡೆದುಕೊಂಡಂತಾಗಿದೆ.


* ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
Former CM Siddaramaiah, Actor Yash Moves Are Different in Attending Suicide Fan Funeral. Siddaramaiah attend the funeral and yash decided to not to entertain this acts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X