ಬಾಗಲಕೋಟೆಯಲ್ಲಿ ವಿವಿಧ ಕಾರ್ಯಕ್ರಮ ನಡೆಸಿದ ಯಡಿಯೂರಪ್ಪ
ಬಾಗಲಕೋಟೆ, ಜುಲೈ 7: ಮಾಜಿ ಮುಖ್ಯಮಂತ್ರಿಗಳು ಹಾಗು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಜುಲೈ 6ರಂದು ಬಾಗಲಕೋಟೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.

ವಿಸ್ತಾರಕ ಕಾರ್ಯಕ್ರಮ ಹಾಗು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರ 150 ನೇ ಜನ್ಮಶತಾಬ್ದಿಯ ಅಂಗವಾಗಿ ಪಕ್ಷದ ಕಾರ್ಯಕರ್ತರುಗಳು ಹಾಗು ಮುಖಂಡರುಗಳ ಜೊತೆ ಸೈಕಲ್ ಜಾಥಾ ನಡೆಸುವ ಮೂಲಕ ಪ್ರತಿ ಮನೆಗಳಿಗೂ ತೆರಳಿ ಮೋದಿ ಸರ್ಕಾರದ ಜನಪರ ಯೋಜನೆಗಳ ಮಾಹಿತಿ ಒದಗಿಸಿದರು.

ಜಂಬಗಿಯಲ್ಲಿ ಹಿಂದುಳಿದ ವರ್ಗಗಳ ಮುಖಂಡರೊಡನೆ ಚರ್ಚೆ ನಡೆಸಿದ ಅವರು, ಇದಕ್ಕೂ ಮೊದಲು ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಮಿತ್ ಶಾ ರವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕ್ಷಮಾಪಣೆ ಕೇಳುವಂತೆ ಪುನಃ ಆಗ್ರಹಿಸಿದರು. ಬೋವಿಗಲ್ಲಿ ಜ್ಞಾನೇಶ್ವರಿ ಮಠ ದಲ್ಲಿ ದಲಿತ ಕಾಲೋನಿಗಳಿಗೆ ತೆರಳಿ ಅವರ ಆತಿಥ್ಯ ಸ್ವೀಕರಿದರು.












Click it and Unblock the Notifications