Get Updates
Get notified of breaking news, exclusive insights, and must-see stories!

ಮಾಜಿ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಪತ್ನಿ ವಿಧಿವಶ

ಬೆಂಗಳೂರು, ನವೆಂಬರ್ 10 : ಮಾಜಿ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಪತ್ನಿ ಸರ್ವಮಂಗಳ ಪಟೇಲ್ ನಿಧನ ವಿಧಿವಶರಾದರು. ಮೃತರ ಅಂತ್ಯಕ್ರಿಯೆ ದಾವಣಗೆರೆಯಲ್ಲಿ ಭಾನುವಾರ ಸಂಜೆ ನಡೆಯಲಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರ್ವಮಂಗಳ ಪಟೇಲ್ (84) ಬೆಂಗಳೂರಿನ 'ಪುಣ್ಯ' ನಿವಾಸದಲ್ಲಿ ಶನಿವಾರ ರಾತ್ರಿ ನಿಧನ ಹೊಂದಿದರು. ಮೂವರು ಗಂಡು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರಿನಲ್ಲಿರುವ ಜೆ. ಎಚ್. ಪಟೇಲ್ ಸಮಾಧಿ ಪಕ್ಕದಲ್ಲಿಯೇ ಸರ್ವಮಂಗಳ ಪಟೇಲ್ ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ನಡೆಯಲಿದೆ.

Sarvamangala Patel

ಜೆ. ಎಚ್. ಪಟೇಲ್ ರಾಜಕೀಯ ಜೀವನದಲ್ಲಿ ಮಹತ್ವದ ಪಾತ್ರವನ್ನು ಸರ್ವಮಂಗಳ ಪಟೇಲ್ ವಹಿಸಿದ್ದರು. ಅಸಿಸ್ಟೆಂಟ್ ಕಮೀಷನರ್ ಮಗಳಾಗಿದ್ದರೂ ಮನೆಗೆ ಬಂದ ಜನರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿದ್ದರು.

ಸರ್ವಮಂಗಳ ಪಟೇಲ್ ನಿಧನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದೆ ಶೋಭಾ ಕರಂದ್ಲಾಜೆ ಮುಂತಾದವರು ಸಂತಾಪ ಸೂಚಿಸಿದ್ದಾರೆ. ಯಡಿಯೂರಪ್ಪ 'ಪುಣ್ಯ' ನಿವಾಸಕ್ಕೆ ಭೇಟಿ ನೀಡಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪತ್ನಿ ಶ್ರೀಮತಿ ಸರ್ವಮಂಗಳ ಪಟೇಲ್ ಅವರ ನಿಧನದ ಸುದ್ದಿ ಆಘಾತವನ್ನುಂಟುಮಾಡಿದೆ. ಸರ್ವಮಂಗಳ‌ ಅವರು ಪಟೇಲರ ರಾಜಕೀಯ ಜೀವನದ ಆಧಾರಸ್ಥಂಭವಾಗಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+