ನಾನು ಇವರ ತರ ಕೊಲೆಗಡುಕ ರಾಜಕೀಯ ಮಾಡಿ ಬಂದಿಲ್ಲ: ಸರ್ಕಾರದ ವಿರುದ್ದ ಸದನದಲ್ಲಿ ಅಬ್ಬರಿಸಿದ ಕುಮಾರಸ್ವಾಮಿ
ಬೆಂಗಳೂರು, ಜುಲೈ 06: ರಾಜ್ಯ ಸರ್ಕಾರದ ವಿರುದ್ದ ವರ್ಗಾವಣೆ ಧಂದೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ದ ಅಬ್ಬಸಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆ ಕುರಿತು ಆಗ್ರಹಿಸಿದ್ದು, ಸದನದಲ್ಲಿ ಸರ್ಕಾರದ ವಿರುದ್ದ ಅಬ್ಬರಿಸಿದ ಪ್ರಸಂಗ ನಡೆದಿದೆ.
ಹೌದು, ವರ್ಗಾವಣೆ ಧಂದೆ ಕುರಿತು ನಾಗಮಂಗಲ ಡಿಪೋ ಕೆಎಸ್ ಆರ್ ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ನನ್ನ ಜೀವನದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿ ಬಂದವನು ನಾನು.ನಾನು ಇವರ ತರ ಕೊಲೆಗಡುಕ ರಾಜಕೀಯ ಮಾಡಿ ಬಂದಿಲ್ಲ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಇನ್ನೂ ಈ ವೇಳೆ ಮಧ್ಯ ಪ್ರವೇಶಿದ ಸಚಿವರು, ಅನಾವಶ್ಯಕವಾಗಿ ನಮ್ಮನ್ನು ತೇಜೋವಾದಿ ಮಾಡೋದನ್ನು ಬಿಡಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರ ಇಲ್ಲದಾಗ ಇವರ ಒಬ್ಬರ ಮೇಲೆ ಇಲ್ಲಸಲ್ಲದ ಮಾತಾಡೋದನ್ನು ಬಿಡಬೇಕು. ನನ್ನ ಬಳಿ ಸಿಡಿ ಇದೆ, ಅದು ಇದೆ ಅನ್ನೋದನ್ನು ಬಿಡಬೇಕು. ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ, ಇದರಲ್ಲಿ ನನ್ನ ಪಾತ್ರವೂ ಇಲ್ಲ. ಆ ಹುಡುಗ ಆಸ್ಪತ್ರೆಗೆ ಶಿಫ್ಟ್ ಮಾಡಬೇಕಿತ್ತು, ಆದರೆ ಅವರನ್ನು ತಡೆದಿದ್ದು ದೊಡ್ಡ ಅಪರಾಧ. ಮಾಜಿ ಸಿಎಂ ಸೇರಿ ಅವರ ಮಾಜಿ ಶಾಸಕ ಮಾಡಿದ್ದು ಸರಿಯಲ್ಲ ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಾಮಾನ್ಯ. ಜನರ ತೀರ್ಮಾನವನ್ನು ನಾವು ಯಾರು ಅರ್ಥ ಮಾಡಿಕೊಂಡಿಲ್ಲ. ಆದರೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಸ್ಥಾನ ವನ್ನು ದೇವೇಗೌಡ್ರು ಹುಡುಕಿಕೊಂಡು ಹೋದವರಲ್ಲ. ಯಾವುದೇ ತಪ್ಪು ಮಾಡದ ಕನ್ನಡಿಗನನ್ನು ಅಧಿಕಾರದಿಂದ ಇಳಿಸಿದವರು ಈ ಕಾಂಗ್ರೆಸ್ ನವರು. ಕಾಂಗ್ರೆಸ್ ನವ್ರು ಅಲ್ಲ ದೇವೇಗೌಡ ರನ್ನು ಪ್ರಧಾನಿ ಗಳನ್ನಾಗಿ ಮಾಡಿದ್ದು, ಬೇರೆ ಪಕ್ಷ ಗಳ ಬೆಂಬಲದಿಂದ ಅವರು ಪ್ರಧಾನಿ ಆಗಿದ್ದು. ಅವರ ಏನು ಪ್ರಧಾನಿ ಗಳಾಗೋಕೆ ಅರ್ಜಿ ಹಾಕೊಂಡು ಹೋಗಿದ್ರಾ..? ಎಂದು ಪ್ರಶ್ನಿಸಿದ್ದಾರೆ.
ನಾನು ನಿನ್ನೆ ಡಾಕ್ಟರ್ ಜೊತೆ ಮಾತಾಡಿರೋದು, ಕುಟುಂಬ ಸದಸ್ಯರ ಜೊತೆ ಮಾತಾಡಿರುವ ಆಡಿಯೋ ಇರುತ್ತದೆ. ನಿಮ್ಮ ಪೊಲೀಸರನವರೇ ಅದನ್ನು ಮಾಡಿಸಿರ್ತಾರೆ. ಆ ವ್ಯಕ್ತಿ ಸಾಯಬೇಕು, ಆ ವ್ಯಕ್ತಿ ಸಾವಿನ ಮೇಲೆ ರಾಜಕಾರಣ ಮಾಡೋಕೆ ಅಂತಾ ಅವರು ಆಪಾದನೆ ಮಾಡಿದ್ದಾರೆ. ಹೀಗಾಗಿ ಇದರ ಬಗ್ಗೆ ತನಿಖೆ ಆಗಲೇಬೇಕು. ಅಲ್ಲಿವರೆಗೂ ಇವರು ರಾಜೀನಾಮೆ ಕೊಟ್ಟು ಹೊರಗೆ ಇರಲಿ ಎಂದು ಚಲುವರಾಯಸ್ವಾಮಿ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇನ್ನೂ ಕುಮಾರಸ್ವಾಮಿ ಕೊಲೆಗಡುಕ ಆರೋಪಕ್ಕೆ ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕ ಬಾಲಕೃಷ್ಣ ಹಾಗೂ ಸಚಿವ ಚಲುವರಾಯಸ್ವಾಮಿ ಆಕ್ರೋಶಗೊಂಡಿದ್ದಾರೆ. ನಮ್ಮ ಹಂಗಿನಲ್ಲಿ ನೀವು ಸಿಎಂ ಆಗಿದ್ದು, ಈ ಸದನ ನಿಮ್ಮ ಅಪ್ಪಂದು ಅಲ್ಲ, ನಮ್ಮ ಅಪ್ಪಂದು ಅಲ್ಲ. ರಾಜ್ಯದ ಆರುವರೆ ಕೋಟಿಯ ಜನರದ್ದು. ಬಾಲಕೃಷ್ಣ, ಚಲುವರಾಯಸ್ವಾಮಿ ಹಾಗೂ ಕುಮಾರಸ್ವಾಮಿ ನಡುವೆ ಮಾತಿನ ಪೈಪೋಟಿಗೆ ಸದನದಲ್ಲಿ ನಡೆಯಿತು.












Click it and Unblock the Notifications