ಮರಳಿ ಕಾಡು ಸೇರಿದ ಆನೆಗಳು, ಕೊಡಗು ಗ್ರಾಮಸ್ಥರು ನಿರಾಳ

ಮಡಿಕೇರಿ, ಡಿಸೆಂಬರ್, 03: ಕಾಫಿ ತೋಟಗಳಲ್ಲಿ ವಾಸ್ತವ್ಯ ಹೂಡಿ ಜನರನ್ನು ಭಯಭೀತರನ್ನಾಗಿಸಿದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಕೊಡಗಿನ ಚೆಟ್ಟಳ್ಳಿಯಲ್ಲಿ ಗುರುವಾರ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹರಸಾಹಸದ ನಡುವೆ ಈ ಕಾರ್ಯ ಯಶಸ್ವಿಯಾಗಿದೆ.

ಚೆಟ್ಟಳ್ಳಿ ಕಾಫಿಬೋರ್ಡಿನ ತೋಟ ಹಾಗೂ ಕೆರೆಯ ಬಳಿ ಸುಮಾರು 9 ಆನೆಗಳು ಬೀಡು ಬಿಟ್ಟು ಭಯದ ವಾತಾವರಣ ನಿರ್ಮಾಣ ಮಾಡಿದ್ದವು. ರೈತರು ಬೆಳೆದ ಕಾಫಿ, ಬಾಳೆ, ತೆಂಗು, ಅಡಿಕೆ, ಭತ್ತದ ಬೆಳೆಯನ್ನು ನಾಶಮಾಡುತ್ತಿದ್ದವು. ಆನೆಯ ಹಾವಳಿಯಿಂದ ಬೇಸತ್ತ ಮಂದಿ ಅರಣ್ಯ ಇಲಾಖೆಗೆ ದೂರು ನೀಡಿದ್ದರಿಂದ ಅಧಿಕಾರಿಗಳು ಆನೆ ಕಾರ್ಯಾಚರಣೆ ಕೈಗೊಂಡಿದ್ದರು.[ಮದವೇರಿದ ಗಜೇಂದ್ರನ ಪುಂಡಾಟಕ್ಕೆ ಆನೆ, ಕಾವಾಡಿ ಬಲಿ]

Forest department officers runs the elephants to the forest from the chettihalli, Kodagu

ಅರಣ್ಯ ಇಲಾಖೆಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಚಿಣ್ಣಪ್ಪನವರ ನೇತೃತ್ವದಲ್ಲಿ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿತ್ತು.

ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಸತಾಯಿಸಿದ ಆನೆಗಳು ಕಾಫಿತೋಟಗಳಲ್ಲಿ ಅಡ್ಡಾದಿಡ್ಡಿ ಓಡಾಡಿ ಬೆವರಿಳಿಸಿದವು. ಒಟ್ಟಾಗಿದ್ದ ಆನೆಗಳನ್ನು ದುಬಾರೆಯ ಉಪವಲಯಾಧಿಕಾರಿ ರಂಜನ್ ಅವರು ಮುನ್ನುಗ್ಗಿ ಗಾಳಿಗೆ ಗುಂಡು ಹಾರಿಸುತ್ತಿದ್ದಂತೆ ಮಧ್ಯಾಹ್ನದ ವೇಳೆಗೆ ಮರಿ ಸೇರಿ 9 ಕಾಡಾನೆಗಳ ಹಿಂಡು ಕಾಫಿತೋಟ ಬಿಟ್ಟು ಅರಣ್ಯದತ್ತ ಓಡಿದವು. ಇದರಿಂದ ಜನ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+