• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಿತ್ ಶಾ ಬಂದು ಹೋದ ನಂತರ ಗೇರ್ ಬದಲಿಸಿದ ಯಡಿಯೂರಪ್ಪ

|
   ಬಿ ಎಸ್ ಯಡಿಯೂರಪ್ಪ ಕಾರ್ಯವೈಖರಿಯನ್ನ ಮೆಚ್ಚಿದ ಅಮಿತ್ ಶಾ ಹಾಗು ನರೇಂದ್ರ ಮೋದಿ

   ಪ್ರಧಾನಿ ಮೋದಿ ಬಂದು ವೈಮಾನಿಕ ಸಮೀಕ್ಷೆ ನಡೆಸಬೇಕು ಎನ್ನುವ ವಿರೋಧ ಪಕ್ಷಗಳ ಒತ್ತಾಯದ ನಡುವೆ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಂದು ಸಮೀಕ್ಷೆ ನಡೆಸಿ ಹೋಗಿದ್ದಾರೆ.

   ಕಳೆದ ಜುಲೈ 26ರಂದು ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ, ಇದುವರೆಗೂ ಒಬ್ಬರೇ ರಾಜ್ಯಭಾರ ನಡೆಸುತ್ತಿದ್ದಾರೆ. ಅವರ ರಾಜಕೀಯ ವೃತ್ತಿ ಜೀವನಕ್ಕೇ ಸವಾಲು ಎನ್ನುವಂತೆ, ಇದೇ ಸಮಯದಲ್ಲಿ ರಾಜ್ಯದ ಮುಕ್ಕಾಲು ಭಾಗ ಅತಿವೃಷ್ಟಿಗೆ ಒಳಗಾಗಿದೆ.

   ಅಧಿಕಾರಿಗಳ ನೆರವಿನೊಂದಿಗೆ ಯಡಿಯೂರಪ್ಪ 76ರ ಇಳಿ ವಯಸ್ಸಿನಲ್ಲೂ ರಾಜ್ಯದೆಲ್ಲಡೆ ಸುತ್ತಾಡಿ ಪರಿಹಾರ ಕೆಲಸದ ನೇತೃತ್ವ ವಹಿಸಿಕೊಂಡಿದ್ದಾರೆ. ಮೊದಮೊದಲು ಅಷ್ಟೇನೂ ಚುರುಕಿನಿಂದ ಓಡಾಡದ ಯಡಿಯೂರಪ್ಪ, ಈಗ ಫುಲ್ ಸ್ವಿಂಗ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

   ಹುಡುಗಾಟಿಕೆಗೆ ಈ ಮಾತು ಹೇಳುತ್ತಿಲ್ಲ: ವರ್ಗಾವಣೆ ದಂಧೆಯ ಕರಾಳತೆ ಬಿಚ್ಚಿಟ್ಟ ಎಚ್ಡಿಕೆ

   ಸದ್ಯ ಯಡಿಯೂರಪ್ಪ ನೆರೆ ಪರಿಹಾರದ ಕೆಲಸವನ್ನು ನಿಭಾಯಿಸುತ್ತಿರುವ ರೀತಿ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯಕ್ಕೆ ವೈಮಾನಿಕ ಸಮೀಕ್ಷೆಗೆಂದು ಅಮಿತ್ ಶಾ ಬಂದು ಹೋದ ನಂತರ, ಯಡಿಯೂರಪ್ಪ ಇನ್ನೂ ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

   ಚೆನ್ನಾಗಿ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೀರಿ

   ಚೆನ್ನಾಗಿ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೀರಿ

   'ಚೆನ್ನಾಗಿ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೀರಿ' ಎಂದು ಅಮಿತ್ ಶಾ, ಮುಖ್ಯಮಂತ್ರಿಗಳ ಬೆನ್ನುತಟ್ಟಿ ಹೋಗಿದ್ದಾರೆ ಎನ್ನುವ ಮಾಹಿತಿಯಿದೆ. 'ಅಧಿಕಾರಿಗಳನ್ನು ಮತ್ತು ಸ್ಥಳೀಯ ಸಂಸದರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪರಿಹಾರ ಕೆಲಸ ನಡೆಸುತ್ತಿದ್ದೀರಿ, ನಿಮ್ಮ ಕಾರ್ಯಶೈಲಿ ಇದೇ ಉತ್ಸಾಹದಿಂದ ಮುಂದುವರಿಯಲಿ' ಎಂದು ಅಮಿತ್ ಶಾ ಹೇಳಿದ್ದಾರೆಂದು ತಿಳಿದುಬಂದಿದೆ.

   ಬಿಎಸ್ವೈ ಜೊತೆ ಸುಮಾರು ಎರಡು ಗಂಟೆಗಳ ಕಾಲ ಸಮೀಕ್ಷೆ ನಡೆಸಿದ್ದ ಶಾ

   ಬಿಎಸ್ವೈ ಜೊತೆ ಸುಮಾರು ಎರಡು ಗಂಟೆಗಳ ಕಾಲ ಸಮೀಕ್ಷೆ ನಡೆಸಿದ್ದ ಶಾ

   ಯಡಿಯೂರಪ್ಪನವರ ಜೊತೆ ಸುಮಾರು ಎರಡು ಗಂಟೆಗಳ ಕಾಲ ಸಮೀಕ್ಷೆ ನಡೆಸಿದ್ದ ಅಮಿತ್ ಶಾ, 'ಸಂಪುಟ ರಚನೆಯ ಬಗ್ಗೆ ಸದ್ಯ ತಲೆಕೆಡಿಸಿಕೊಳ್ಳಲು ಹೋಗಬೇಡಿ. ನೀವು ಇದುವರೆಗೆ ಪರಿಸ್ಥಿತಿ ನಿಭಾಯಿಸುತ್ತಿರುವ ರೀತಿ ಪ್ರಶಂಸನಾರ್ಹ. ಎಲ್ಲವೂ ಸರಿದಾರಿಗೆ ಬಂದ ಮೇಲೆ ಮಾತುಕತೆ ನಡೆಸೋಣ' ಎಂದು ಹೇಳಿದ್ದಾರೆಂದು ವರದಿಯಾಗಿದೆ.

   ಪ್ರವಾಹ ಪರಿಸ್ಥಿತಿಯಲ್ಲೂ ಹೊಲಸು ರಾಜಕೀಯ ಮಾಡಿದ ಬಿಜೆಪಿ ಶಾಸಕ

   ದಕ್ಷಿಣಕನ್ನಡ, ಮೈಸೂರು ಜಿಲ್ಲೆ ಪ್ರವಾಸ

   ದಕ್ಷಿಣಕನ್ನಡ, ಮೈಸೂರು ಜಿಲ್ಲೆ ಪ್ರವಾಸ

   ಸತತ ಮೂರು ದಿನ ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಸಂಚರಿಸಿದ್ದ ಯಡಿಯೂರಪ್ಪ, ಅದಾದ ನಂತರ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದರ ಬೆನ್ನಲ್ಲೇ, ದಕ್ಷಿಣಕನ್ನಡ, ಮೈಸೂರು ಜಿಲ್ಲೆಗೆ ಪ್ರವಾಸ ಮಾಡಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಸಂಸದರ ಸಭೆ ನಡೆಸಿ ವಿಸ್ಕೃತ ವರದಿಯನ್ನು ಪಡೆದುಕೊಂಡಿದ್ದಾರೆ.

   ಮಂಗಳೂರಿನಿಂದ ಮೈಸೂರಿಗೆ ಬಂದ ಯಡಿಯೂರಪ್ಪ, ಅಲ್ಲಿಂದ ಶಿವಮೊಗ್ಗ

   ಮಂಗಳೂರಿನಿಂದ ಮೈಸೂರಿಗೆ ಬಂದ ಯಡಿಯೂರಪ್ಪ, ಅಲ್ಲಿಂದ ಶಿವಮೊಗ್ಗ

   ಮಂಗಳೂರಿನಿಂದ ಮೈಸೂರಿಗೆ ಬಂದ ಯಡಿಯೂರಪ್ಪ ಅಲ್ಲೂ ಶಾಸಕರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇಂದು (ಆ 13) ಶಿವಮೊಗ್ಗ ಜಿಲ್ಲೆಯಲ್ಲಿನ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳ ಕುರಿತು ಮಾಹಿತಿ ಪಡೆದು, ನೆರೆ ಸಂತ್ರಸ್ತರಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

   ಅಮಿತ್ ಶಾ ನೀಡಿದ ಕಾರ್ಯವೈಖರಿಯ ಶ್ಲಾಘನೆ

   ಅಮಿತ್ ಶಾ ನೀಡಿದ ಕಾರ್ಯವೈಖರಿಯ ಶ್ಲಾಘನೆ

   ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಸದ್ಯ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಅಮಿತ್ ಶಾ ನೀಡಿದ ಕಾರ್ಯವೈಖರಿಯ ಶ್ಲಾಘನೆಯಿಂದ, ಯಡಿಯೂರಪ್ಪ ಏಕಾಂಗಿಯಾಗಿ ಮತ್ತು ಬಹುತೇಕ ಸಮರ್ಥವಾಗಿ ಜವಾಬ್ದಾರಿಯನ್ನು ಇದುವರೆಗೆ ನಿಭಾಯಿಸುತ್ತಿದ್ದಾರೆ.

   English summary
   Flood Relief Work, Amit Shah Appreciated Yeddyurappa's Way of Functioning, Sources. While, Shah was in Belagavi for aerial survey, he conveyed this to BSY.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X