ಭೀಮಾ, ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ
ಬೆಂಗಳೂರು, ಸೆಪ್ಟೆಂಬರ್ 21 : ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ, ಪಕ್ಕದ ಮಹಾರಾಷ್ಟ್ರದಿಂದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡಲಾಗಿದ್ದು ಉತ್ತರ ಕರ್ನಾಟಕದ ಜನರು ಆತಂಕಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 9 ಸೆಂ.ಮೀ.ಮಳೆಯಾಗಿದೆ. ಮಲಪ್ರಭಾ ನದಿ ಮೈದುಂಬಿ ಹರಿಯತ್ತಿದೆ. ಹಬ್ಬನಹಟ್ಟಿಯಲ್ಲಿ ಆಂಜನೇಯ ದೇವಾಲಯ ಜಲಾವೃತ್ತವಾಗಿದೆ. ಬೆಳಗಾವಿ, ಕಿತ್ತೂರು, ಚಿಕ್ಕೋಡಿಯಲ್ಲಿ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಧವಾರ ಧಾರಾಕಾರ ಮಳೆ ಸುರಿದಿದೆ. 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 11.22 ಸೆಂ.ಮೀ.ಮಳೆಯಾಗಿದೆ. ಯಲ್ಲಾಪುರ, ಸಿದ್ದಾಪುರ, ಹೊನ್ನಾವರ, ಶಿರಸಿಯಲ್ಲಿ ಮಳೆಯಾಗಿದೆ. ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿಯೂ ಸಾಧಾರಣ ಮಳೆಯಾಗಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದ್ದು, ಕೃಷ್ಣಾ ನದಿಯ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ರಾಜಾಪುರದ ಬ್ಯಾರೇಜ್ ಮೂಲಕ 30 ಸಾವಿರ ಕ್ಯುಸೆಕ್, ದೂಧ್ ಗಂಗಾ ನದಿಯ ಮೂಲಕ 14 ಸಾವಿರ ಕ್ಯುಸೆಕ್ ನೀರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಮೂಲಕ ಹರಿದುಬರುತ್ತಿದೆ.
ಉಜನಿ ಜಲಾಶಯದಿಂದ ಮಂಗಳವಾರ ರಾತ್ರಿ ಭೀಮಾ ನದಿಗೆ 70 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗಿದೆ. ಇದರಿಂದಾಗಿ ಕಲ್ಲೂರ (ಬಿ), ಅಫಜಲಪುರ ತಾಲೂಕಿನ ನಡುವೆ ನಿರ್ಮಿಸಿದ್ದ ಸೇತುವೆ ಕಂ ಬ್ಯಾರೇಜ್‌ಗೆ ಹಾನಿಯಾಗಿದೆ. ನದಿಯಲ್ಲಿ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ಆತಂಕಗೊಂಡಿದ್ದಾರೆ.
Recommended Video













Click it and Unblock the Notifications