ಉಪಚುನಾವಣೆ ಸಮಯ ಐವರು ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ನವೆಂಬರ್ 19: ಉಪಚುನಾವಣೆ ಮತದಾನ ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲಿ ಐವರು ಕೆಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಈ ವರ್ಗಾವಣೆಯನ್ನು ಮಾಡಲಾಗಿರುವುದಾಗಿ ಅಧಿಕೃತ ಆದೇಶದಲ್ಲಿ ನಮೂದಿಸಲಾಗಿದೆ. ಕೆಎಎಸ್ ನ ಹಿರಿಯ ಮತ್ತು ಕಿರಿಯ ಶ್ರೇಣಿಯ ಅಧಿಕಾರಿಗಳು ವರ್ಗಾವಣೆ ಪಟ್ಟಿಯಲ್ಲಿದ್ದಾರೆ.
ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿದ್ದ ಅಶೋಕ್ ದುಡಗುಂಡಿ ಅವರ ಸ್ಥಾನಕ್ಕೆ ಕೆ.ಎ.ಎಸ್ ಅಧಿಕಾರಿ ಸತೀಶ್ ಅವರನ್ನು ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಬೈಲುಹೊಂಗಲ ಉಪವಿಭಾಗಾಧಿಕಾರಿ ಯಲ್ಲಪ್ಪ ಭಜಂತ್ರಿ ಸ್ಥಾನಕ್ಕೆ ಅಭಿಜಿನ್ ಅವರನ್ನು ವರ್ಗ ಮಾಡಲಾಗಿದೆ.

ಎಚ್.ಜಿ.ಚಂದ್ರಶೇಖರಯ್ಯ ಅವರನ್ನು ಚಿಕ್ಕೋಡಿ ಉಪವಿಭಾಗಾಧಿಕಾರಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ರವೀಂದ್ರ ಕರಿಲಿಂಗಣ್ಣ್ ಅವರನ್ನು ಹಾವೇರಿ ಜಿಲ್ಲೆಯ ಆಹಾರ ಸರಬರಾಜು ಇಲಾಖೆ ಉಪ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಬಿ.ಮಲ್ಲಿಕಾರ್ಜುನ ಅವರನ್ನು ಗೋಕಾಕ್ ನಗರಸಭೆ ಪೌರಾಯುಕ್ತರನ್ನಾಗಿ ಮಾಡಲಾಗಿದೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆಗಳನ್ನು ಮಾಡಲಾಗಿದೆಯೆಂದು ಸರ್ಕಾರಿ ಆದೇಶದಲ್ಲಿ ಹೇಳಲಾಗಿದೆ. ಆದೇಶವು ತತಕ್ಷಣದಿಂದ ಜಾರಿಗೆ ಬರಲಿದೆ.












Click it and Unblock the Notifications