ಅತ್ತಿಬೆಲೆಯಲ್ಲಿ ಹೊತ್ತಿ ಉರಿದ ಪಟಾಕಿ ಮಳಿಗೆ: ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಿಷ್ಟು!
ಆನೇಕಲ್, ಅಕ್ಟೋಬರ್ 07: ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿನ ಅತ್ತಿಬೆಲೆಯಲ್ಲಿ ಪಟಾಕಿ ದಾಸ್ತಾನು ಮಳಿಗೆಗೆ ಅಗ್ನಿ ಅವಘಡ ಸಂಭವಿಸಿ ಹೊತ್ತಿ ಉರಿದ ಪರಿಣಾಯ 12 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ ದುರಂತದಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನೂ ಈ ಅಗ್ನಿ ದುರಂತದ ಕುರಿತು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಧ್ಯಾಹ್ನ 3.30ರ ಸುಮಾರಿಗೆ ಪಟಾಕಿ ಗೋಡೌನ್ ಅಗ್ನಿ ದುರಂತ ಸಂಭವಿಸಿದ್ದು, ಬಾಲಾಜಿ ಕ್ರಾಕರ್ಸ್ ಎಂಬ ಪಟಾಕಿ ಮಳಿಗೆಯಲ್ಲಿ ಕ್ಯಾಂಟರ್‌ನಿಂದ ಪಟಾಕಿ ಅನ್‌ಲೋಡ್ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಅಗ್ನಿಯ ಜ್ವಾಲೆ ಮಳಿಗೆ ಮತ್ತು ಗೋದಾಮಿಗೂ ವ್ಯಾಪಿಸಿದೆ. ಕೂಡಲೇ ಕಾರ್ಯಾಚರಣೆ ನಡೆಸಲಾಗಿದ್ದು, ಸದ್ಯ ಶೇ.80ರಷ್ಟು ಬೆಂಕಿ ನಿಯಂತ್ರಿಸಲಾಗಿದೆ. ಬೆಂಕಿ ಸಂಪೂರ್ಣ ನಂದಿಸಿದ ಬಳಿಕ ಮಳಿಗೆ ಒಳಗೆ ಕಾರ್ಮಿಕರು ಸಿಲುಕಿರುವ ಬಗ್ಗೆ ಮಾಹಿತಿ ಸಿಗಲಿದೆ. ಮಳಿಗೆ ಪರವಾನಗಿ ಬಗ್ಗೆಯು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೋದಾಮಿನಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟಾಕಿ ದುರಂತದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಮಳಿಗೆಯ ಮಾಲೀಕ ನವೀನ್ ಗು ಸುಟ್ಟ ಗಾಯಗಳಾಗಿದೆ. ಬೆಂಕಿ ಸಂಪೂರ್ಣ ನಂದಿಸಿದ ಬಳಿಕ ಮಳಿಗೆ ಒಳಗೆ ಕಾರ್ಮಿಕರು ಸಿಲುಕಿರುವ ಬಗ್ಗೆ ಮಾಹಿತಿ ಸಿಗಲಿದೆ, ಸದ್ಯ ಹೊತ್ತಿಕೊಂಡ ಬಗ್ಗೆ ಖಚಿತ ಮಾಹಿತಿ ಇಲ್ಲ. ಪರಿಶೀಲನೆಗಾಗಿ ಎಫ್ ಎಸ್ ಎಲ್ ಟೀಮ್ ಆಗಮಿಸಲಿದೆ ಎಂದು ಹೇಳಿದರು.
ಇನ್ನೂ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಗೋಡೌನ್ ರಾಮಸ್ವಾಮಿ ರೆಡ್ಡಿ ಎಂಬುವವರಿಗೆ ಸೇರಿದ್ದು, ಗೋಡೌನ್ಗೆ ಅನುಮತಿ ಪಡೆದುಕೊಳ್ಳಲಾಗಿತ್ತು. ಆದರೆ ಎಲ್ಲಾ ನಿಯಮ ಪಾಲನೆ ಮಾಡಿದ್ದಾರಾ ಎನ್ನುವುದು ನೋಡಬೇಕಾಗುತ್ತೆ. ಬೆಂಕಿ ನಂದಿದ ಬಳಿಕ ಪರಿಶೀಲನೆ ಮಾಡಬೇಕಾಗುತ್ತೆ ಎಂದು ಹೇಳಿದ್ದಾರೆ. ಮಳಿಗೆಯ ಮಾಲೀಕ ನವೀನ್ಗೂ ಸುಟ್ಟ ಗಾಯಗಳಾಗಿವೆ. ಬೆಂಕಿ ಸಂಪೂರ್ಣ ನಂದಿಸಿದ ಬಳಿಕ ಮಳಿಗೆ ಒಳಗೆ ಕಾರ್ಮಿಕರು ಸಿಲುಕಿರುವ ಬಗ್ಗೆ ಮಾಹಿತಿ ಸಿಗಲಿದೆ. ಸದ್ಯ ಹೊತ್ತಿಕೊಂಡ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications