Get Updates
Get notified of breaking news, exclusive insights, and must-see stories!

ಕೆಂಪಯ್ಯರನ್ನು ವಿವಾದಗಳು ಸದಾ ಕಾಡುವುದೇಕೆ?

ಬೆಂಗಳೂರು, ಮೇ 09 : ಒಂದು ಕಾಲದ ಖಡಕ್ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರನ್ನು ವಿವಾದಗಳು ಬಿಡುತ್ತಿಲ್ಲ. ಗೃಹ ಸಚಿವರ ಸಲಹೆಗಾರ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ಕಳೆದ ವಾರ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

1981ನೇ ಬ್ಯಾಚ್ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು 2009ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಆಗ ಅವರ ಮೇಲೆ ಭ್ರಷ್ಟಾಚಾರ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಚಾರ್ಚ್‌ಶೀಟ್ ಸಲ್ಲಿಸಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ 2014ರಲ್ಲಿ ಅವರನ್ನು ಗೃಹ ಸಚಿವರ ಸಲಹೆಗಾರರಾಗಿ ನೇಮಿಸಲಾಗಿದೆ. [ಐಟಿ ಅಧಿಕಾರಿಗಳಿಂದ ಕೆಂಪಯ್ಯ ವಿಚಾರಣೆ]

kempaiah

ಖಡಕ್ ಪೊಲೀಸ್ ಅಧಿಕಾರಿ : ಕರ್ನಾಟಕದಲ್ಲಿ ಕೆಲಸ ಮಾಡಿದ ಖಡಕ್ ಪೊಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ಕೆಂಪಯ್ಯ ಅವರ ಹೆಸರೂ ಇದೆ. ಹೈ ಪ್ರೊಪೈಲ್ ಪ್ರಕರಣಗಳನ್ನು ಅವರು ತನಿಖೆ ನಡೆಸಿದ್ದಾರೆ. ವೀರಪ್ಪನ್ ಹಿಡಿಯುವ ಕಾರ್ಯಾಚರಣೆ, ರಾಜೀವ್ ಗಾಂಧಿ ಹಂತಕರ ಸೆರೆ ಮುಂತಾದ ಪ್ರಕರಣಗಳಲ್ಲಿ ಕೆಂಪಯ್ಯ ಕೆಲಸ ಮಾಡಿದ್ದಾರೆ.[ಕೆಂಪಯ್ಯ ವಿರುದ್ಧ ಈಗ ಸುಳ್ಳು ಜಾತಿ ಪ್ರಮಾಣ ಪತ್ರ ಆರೋಪ]

ಬೆಂಗಳೂರಿನ ಕೋಣನಕುಂಟೆ ಬಳಿ ಅಡಗಿ ಕುಳಿತಿದ್ದ ರಾಜೀವ್ ಗಾಂಧಿ ಹಂತಕರಾದ ಶುಭ ಮತ್ತು ಶಿವರಾಸನ್ ಹಿಡಿಯುವ ಕಾರ್ಯಾಚರಣೆಯಲ್ಲಿ ಕೆಂಪಯ್ಯ ಪಾಲ್ಗೊಂಡಿದ್ದರು. ಕಾಡುಗಳ್ಳ ವೀರಪ್ಪನ್ ಹತ್ಯೆ ಮಾಡಿದ ವಿಶೇಷ ಟಾಸ್ಕ್ ಪೋರ್ಸ್‌ ಮುಖ್ಯಸ್ಥರಾಗಿಯೂ ಕೆಂಪಯ್ಯ ಕೆಲಸ ಮಾಡಿದ್ದಾರೆ. [ಕಂಡವ್ರ ದುಡ್ಡು ಕಕ್ಕಸು: ಮಾಧ್ಯಮದವರ ಮೇಲೆ ಕೆಂಪಯ್ಯ 'ಕೆರಳಿದ ಸಿಂಹ']

ಭ್ರಷ್ಟಾಚಾರದ ಆರೋಪಗಳು : ಕೆಂಪಯ್ಯ ಅವರನ್ನು ಭ್ರಷ್ಟಾಚಾರದ ವಿವಾದಗಳು ಬೆನ್ನು ಬಿಟ್ಟಿಲ್ಲ. ಲೋಕಾಯುಕ್ತ ಪೊಲೀಸರು ಕೆಂಪಯ್ಯ ಅವರ ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದರು. ಇದರಿಂದಾಗಿ 2009ರಲ್ಲಿ ಕೆಂಪಯ್ಯ ಅವರು ಸ್ವಯಂ ನಿವೃತ್ತಿ ಪಡೆದರು.

ಲೋಕಾಯುಕ್ತದ ಚಾರ್ಜ್ ಶೀಟ್ ರದ್ದುಪಡಿಸುವಂತೆ ಅವರು ಹೈಕೋರ್ಟ್ ಮೊರೆ ಹೋದರು. ಕೊನೆಗೆ ಹೈಕೋರ್ಟ್ ಆದೇಶದಂತೆ ಅವರ ಮೇಲಿನ ಆರೋಪವನ್ನು ಕೈಬಿಡಲಾಯಿತು. ಕಳೆದ ವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅವರ ವಿಚಾರಣೆ ನಡೆಸಿದ್ದು, ಮತ್ತೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.

ವಿಚಾರಣೆ ಏಕೆ? : ಕೆಂಪಯ್ಯ ಅವರು ಆದಾಯ ತೆರಿಗೆ ಅಧಿಕಾರಿಗಳು ಮೂರು ತಾಸು ಕೆಂಪಯ್ಯ ವಿಚಾರಣೆ ನಡೆಸಿದ್ದಾರೆ. 12 ಕೋಟಿ ರೂ. ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆದಿದೆ. ವಿಧಾನಪರಿಷತ್ ಸದಸ್ಯ ಮತ್ತು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರ ಮನೆಯ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಸಲಾಗಿದೆ.

2016ರ ಮಾರ್ಚ್ 15ರಂದು ಬೆಂಗಳೂರಿನಲ್ಲಿ ಐಟಿ ದಾಳಿ ನಡೆದಿತ್ತು. ವಿಧಾನಪರಿಷತ್ ಸದಸ್ಯರಾದ ಸಿ.ಆರ್.ಮನೋಹರ್ (ಜೆಡಿಎಸ್), ಕೆ.ಗೋವಿಂದರಾಜು (ಕಾಂಗ್ರೆಸ್), ಡಿ.ಯು ಮಲ್ಲಿಕಾರ್ಜುನ (ಪಕ್ಷೇತರ) ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಕೆ.ಗೋವಿಂದರಾಜು ಅವರ ಮನೆಯಿಂದ ಜಪ್ತಿ ಮಾಡಲಾದ ಡೈರಿಯಲ್ಲಿ ಕೆಂಪಯ್ಯ ಅವರ ಹೆಸರಿತ್ತು. ಈ ಬಗ್ಗೆ ವಿವರಣೆ ಪಡೆಯಲು ಅಧಿಕಾರಿಗಳು ಕೆಂಪಯ್ಯ ವಿಚಾರಣೆ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+