Breaking: ಕೋವಿಡ್ BF7: ಹೊಸ ವರ್ಷಾಚರಣೆಗೆ ಬೀಳಲಿದೆಯೇ ಬ್ರೇಕ್?, ಆರೋಗ್ಯ ಸಚಿವರು ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 23: ಕೋವಿಡ್ ಉಪತಳಿ ಬಿಎಫ್7 ಆರ್ಭಟ ಎಲ್ಲೆಡೆ ಕೇಳಿ ಬರುತ್ತಿದೆ. ಇತ್ತ ಸಮೀಪಿಸುತ್ತಿರುವ ಹೊಸ ವರ್ಷಾಚರಣೆಯ ಸಂಭ್ರಮಾಚರಣೆಯಲ್ಲಿ ತೊಡಗಲು ಕರ್ನಾಟಕದ ಜನರು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ಮೂರುದಿನಗಳಲ್ಲಿ ಮೂರು ನಾಲ್ಕು ದಿನಗಳಲ್ಲಿ ಹೊಸ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಕಳೆದ ಎರಡು ವರ್ಷ ರಾಜ್ಯದಲ್ಲಿ ಹಬ್ಬ ಹರಿದಿನಗಳು, ಕ್ರಿಸ್‌ಮಸ್, ಹೊಸ ವರ್ಷಾಚರಣೆಗಳಿಗೆ ಬ್ರೇಕ್ ಬಿದ್ದಿತ್ತು. ಅತ್ಯಂತ ಸರಳವಾಗಿ ಆಚರಣೆ ಮಾಡುವಂತೆ ಸೂಚಿಸಿದ್ದ ಸರ್ಕಾರ ಅನೇಕ ನಿಯಮಗಳನ್ನು ಹೇರಿತ್ತು. ಆದರೆ ಈ ವರ್ಷ ಕೊರೊನಾ ಸಂಪೂರ್ಣವಾಗಿ ತಗ್ಗಿದೆ ಎಂದು 2023 ಹೊಸ ವರ್ಷವನ್ನು ವಿಜೃಂಭಣೆಯಿಂದ ಬರಮಾಡಿಕೊಳ್ಳಲು ಕಾತರರಾಗಿದ್ದು ಜನರಿಗೆ ಕೊರೊನಾ ಮಹಾಮಾರಿ ಮತ್ತೆ ಸಂಕಷ್ಟ ತಂದೊಡ್ಡುವ ಸೂಚನೆ ನೀಡಿದೆ.
ಚೀನಾ ಮೂಲದ ವೈರಸ್ ಭಾರತದಲ್ಲಿ ಕಂಡು ಬಂದಿದ್ದು, ಕರ್ನಾಟಕದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಡಿಸೆಂಬರ್ 25 ಕ್ರಿಸ್‌ಮಸ್ ನಂತರ ಹೊಸ ವರ್ಷಾಚರಣೆ ಜನರು ಗುಂಪು ಗುಂಪಾಗಿ ಕೂಡಿ ಸಂಭ್ರಮಿಸುವುದು ರೂಢಿ. ಈ ಹಿನ್ನೆಲೆಯಲ್ಲಿ ಮುಂದಿನ 2-3 ದಿನ ಪರಿಸ್ಥಿತಿ ನೋಡಿಕೊಂಡು ಹೊಸ ವರ್ಷಕ್ಕೆ ಜನರಿಗೆ ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ನೇತೃತ್ವದಲ್ಲಿ ನಡೆದ ರಾಜ್ಯಗಳ ಆರೋಗ್ಯ ಸಚಿವರ ಜೊತೆಗಿನ ಸಭೆ ನಂತರ ಈ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಡಾ.ಕೆ.ಸುಧಾಕರ್ ಉತ್ತರಿಸಿದರು. ಕೊರೊನಾ ಸಂಪೂರ್ಣವಾಗಿ ತಗ್ಗಿಲ್ಲ. ಇದೀಗ ಚೀನಾ, ಜರ್ಮನಿ, ಜಪಾನ್ ಅಮೆರಿಕಾ ಸೇರಿದಂತೆ ಹತ್ತು ದೇಶಗಳಲ್ಲಿ ಸೋಂಕು ಭಾಧಿಸುತ್ತಿದೆ. ಭಾರತದಲ್ಲೂ ಓಮಿಕ್ರಾನ್ ಉಪತಳಿ ಬಿಎಫ್7 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ದಾಖಲಾತಿ ತೀರಾ ಕಡಿಮೆ ಇದೆ ಎಂದರು.

ಹೊಸ ವರ್ಷದ ಆಚರಣೆ ವೇಳೆ ಭಾಗವಹಿಸುವವರು ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕು. ಗುಂಪು ಗೂಡುವುದು ಆದಷ್ಟು ಬಿಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಕೂಡಲೇ ಲಸಿಕೆ ಪಡೆಯಿರಿ. ಸದ್ಯಕ್ಕೆ ಕೊರೊನಾ ತಪಾಸಣೆ, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯದ ಮಾರ್ಗಸೂಚಿಗಳೇ ಪಾಲನೆ ಮಾಡಬೇಕಿದೆ ಎಂದು ಹೇಳಿದರು.












Click it and Unblock the Notifications