ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ: ಎಚ್‌ಕೆ ಕುಮಾರಸ್ವಾಮಿ, ಫಾರೂಕ್‌ಗೆ ಮಂತ್ರಿ ಸ್ಥಾನ?

|
Google Oneindia Kannada News

Recommended Video

Karnataka Cabinet Expansion 2018 : ಮಂತ್ರಿ ಸ್ಥಾನದ ರೇಸ್ ನಲ್ಲಿ ಇರೋರು ಯಾರು? | Oneindia Kannada

ಬೆಂಗಳೂರು, ನವೆಂಬರ್ 21: ಸಚಿವ ಸಂಪುಟ ವಿಸ್ತರಣೆ ನವೆಂಬರ್ ಅಂತ್ಯಕ್ಕೆ ನಡೆಯಲಿದೆ ಎಂದು ಜೆಡಿಎಸ್ ವರಿಷ್ಠರು ಕಾಂಗ್ರೆಸ್ ಸಚಿವರು ಹೇಳುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ತಿಳಿದಿಲ್ಲ. ಆದರೆ ಸಂಪುಟ ವಿಸ್ತರಣೆಯಾದರೆ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷೆ ಮಾಡಬಹುದಾಗಿದೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಖಾಲಿ ಇರುವ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಜೆಡಿಎಸ್ ಪಾಳಯದಲ್ಲಿ ಕಸರತ್ತು ಆರಂಭವಾಗಿದೆ.

ಮುಸ್ಲಿಂ ಮತ್ತು ದಲಿತ ಕೋಟಾದಲ್ಲಿ ಮಂತ್ರಿಗಳಿಗೆ ಸ್ಥಾನ ನೀಡಲು ಜೆಡಿಎಸ್ ಆಲೋಚನೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

 ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ: ದೇವೇಗೌಡರ ಭರವಸೆ ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ: ದೇವೇಗೌಡರ ಭರವಸೆ

ಇನ್ನು ದಲಿತ ಕೋಟಾದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಎಸ್ ಪಿ ಎನ್ ಮಹೇಶ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಬಿಎಸ್‌ಪಿಯಲ್ಲಿ ನಡೆದ ಬೆಳವಣಿಗೆಯಿಂದಾಗಿ ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

 ಬಿಎಂ ಫಾರೂಕ್‌ಗೆ ಮಂತ್ರಿ ಸ್ಥಾನ

ಬಿಎಂ ಫಾರೂಕ್‌ಗೆ ಮಂತ್ರಿ ಸ್ಥಾನ

ಪಕ್ಷದೊಳಗೆ ಭಿನ್ನದನು ಹುಟ್ಟಿಗೆ ಅವಕಾಶ ನೀಡದೆ ಸಚಿವ ಸಂಪುಟ ವಿಸ್ತರಣೆ ವೇಳೆ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಜೆಡಿಎಸ್ ಚಿಂತನೆ ನಡೆಸಿದೆ. ಸಂಪನ್ಮೂಲ ವ್ಯಕ್ತಿಯಾಗಿರುವ ಬಿಎಂ ಫಾರೂಕ್ ಗೆ ಎರಡನೇ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

 ಸಂಪುಟ ವಿಸ್ತರಣೆ: ಸಿದ್ದರಾಮಯ್ಯ-ಪರಮೇಶ್ವರ್‌ ನಡುವೆ ಮಹತ್ವದ ಮಾತುಕತೆ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ-ಪರಮೇಶ್ವರ್‌ ನಡುವೆ ಮಹತ್ವದ ಮಾತುಕತೆ

 ಮಹೇಶ್ ರಾಜೀನಾಮೆಯಿಂದ ತೆರವಾದ ಸ್ಥಾನ

ಮಹೇಶ್ ರಾಜೀನಾಮೆಯಿಂದ ತೆರವಾದ ಸ್ಥಾನ

ಬಿಎಸ್‌ಪಿ ಶಾಸಕ ಎನ್ ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ದಲಿತ ಕೋಟಾದಲ್ಲಿ ಶಾಸಕ ಎಚ್‌ಕೆ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಭಾಗ್ಯ ಒಲಿದುಬರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

 ಆಷಾಢ ಮಾಸ ಕಳೆಯುವವರೆಗೂ ಸಂಪುಟ ವಿಸ್ತರಣೆ ಇಲ್ಲ ಆಷಾಢ ಮಾಸ ಕಳೆಯುವವರೆಗೂ ಸಂಪುಟ ವಿಸ್ತರಣೆ ಇಲ್ಲ

 ಬಸವರಾಜ ಹೊರಟ್ಟಿಗೆ ಸಚಿವ ಸ್ಥಾನದ ಮೇಲೆ ಕಣ್ಣು

ಬಸವರಾಜ ಹೊರಟ್ಟಿಗೆ ಸಚಿವ ಸ್ಥಾನದ ಮೇಲೆ ಕಣ್ಣು

ಆದರೆ, ಈಗಿರುವ ಹಂಗಾಮಿ ಸಭಾಪತಿಯಾಗಿರುವ ಹಿರಿಯ ನಾಟಕ ಬಸವರಾಜ ಹೊರಟ್ಟಿ ಸಹ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಜೆಡಿಎಸ್ ಪಾಳಯದಲ್ಲಿ ಮುಸ್ಲಿಂ ಸಮುದಾಯದ ಯಾವೊಬ್ಬ ಶಾಸಕರೂ ಆಯ್ಕೆಯಾಗಿಲ್ಲ. ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಫಾರೂಕ್ ಅವರನ್ನು ಸೋಲಿಸಲಾಯಿತು. ಪಕ್ಷದ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಅವರಿಗೆ ಮನ್ನಣೆ ನೀಡಲು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

 ವಿಧಾನಸೌಧ ಪ್ರವೇಶ ಇನ್ನು ಸಲೀಸಲ್ಲ: ನೌಕರರ ವಾಹನಗಳಿಗೂ ಹೊಸ ಪಾಸ್ ವಿಧಾನಸೌಧ ಪ್ರವೇಶ ಇನ್ನು ಸಲೀಸಲ್ಲ: ನೌಕರರ ವಾಹನಗಳಿಗೂ ಹೊಸ ಪಾಸ್

 ಶೂನ್ಯ ಮಾಸ ನೆಪ: ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆ

ಶೂನ್ಯ ಮಾಸ ನೆಪ: ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆ

ಈಗಾಗಲೇ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಹಲವು ಬಾರಿ ಮುಂದೂಡಾಗಿದೆ. ಇನ್ನೇನು ನವೆಂಬರ್ ಅಂತ್ಯಕ್ಕೆ ವಿಸ್ತರಣೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರೂ ಕೂಡ ನವೆಂಬರ್ ನಲ್ಲಿ ಸಂಪುಟ ವಿಸ್ತರಣೆ ನಡೆಯದಿದ್ದರೆ ಡಿಸೆಂಬರ್‌ನಲ್ಲಿ ನಡೆಯಲು ಸಾಧ್ಯವೇ ಇಲ್ಲ.

ಇನ್ನು ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಬೆಳಗಾವಿ ಅಧಿವೇಶನ ಮುಗಿದ ಬಳಿಕ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸೋಮವಾರ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರೇ ಖುದ್ದಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾಗಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

English summary
JDS senior leader BM Farooq and HK Kumaraswamy may get into cabinet from JDS side. They might get place in the cabinet from muslim and Dalit Quota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X