ರಾಜ್ಯ ಸರ್ಕಾರದ ಕಿವಿ ಹಿಂಡಿ ರೈತರ ಮನೆಗೆ ಹೊರಟ ಕೃಷ್ಣ
ಬೆಂಗಳೂರು, ಜು. 17: ರಾಜ್ಯ ಸರ್ಕಾರದ ವಿರುದ್ಧ ಈ ಬಾರಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಚಾಟಿ ಬೀಸಿದ್ದಾರೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳುತ್ತಿದ್ದ ಮಾತುಗಳನ್ನು ಕೃಷ್ಣ ಪುನರುಚ್ಚಾರ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಸಿಎಂ ಎಸ್ ಎಂ ಕೃಷ್ಣ ಸ್ವತಃ ರೈತರ ಮನೆ ಬಾಗಿಲಿಗೆ ತೆರಳಲು ಮುಂದಾಗಿದ್ದಾರೆ. ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳಾಗುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಪರಿಹಾರ ಮಾರ್ಗಗಳನ್ನು ತೆಗೆದುಕೊಳ್ಳುತ್ತಿಲ್ಲ. ನಾನು ಈ ಬಗ್ಗೆ ನಾಯಕರ ಗಮನ ಸೆಳೆದರೂ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.(ಯಡಿಯೂರಪ್ಪ ಬಿಟ್ಟು ಹೊರಟ ಬಿಜೆಪಿ ನಾಯಕರು)

ಹಾಗಾಗಿ ಎರಡು ದಿನಗಳ ಕಾಲ ಮಂಡ್ಯ ಜಿಲ್ಲೆಯಾದ್ಯಂತ ಪ್ರವಾಸ ಮಾಡುತ್ತೇನೆ. ರೈತರ ಸಮಸ್ಯೆ ಆಲಿಸುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ತಿಳಿಸಿದ್ದಾರೆ. ಉತ್ತರ ಕರ್ನಾಟಕದ ರೈತರು ಮಳೆ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಬಲ ಬೆಲೆ ನೀತಿಗಳು ಸಮರ್ಪಕವಾಗಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಬಳಿ ಕೃಷ್ಣ ಅಸಮಾಧಾನ ತೋಡಿಕೊಂಡಿದ್ದರು.
ಎರಡು ಎಕರೆ ಮೆಕ್ಕೆಜೋಳ ನಾಶ ಮಾಡಿದ ರೈತ
ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ರೈತರೊಬ್ಬರು ಎರೆಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೊಳವನ್ನು ನಾಶ ಮಾಡಿದ್ದಾರೆ. ಮೂರು ವರ್ಷದಿಂದ ಮಳೆ ಬಾರದ ಕಾರಣ ರೈತ ಶಿವಪ್ಪ ಮೆಕ್ಕೆಜೊಳ ನಾಶ ಮಾಡಿದ್ದಾರೆ. ತೆಗೆಸಿದ್ದ ಕೊಳವೆಬಾವಿ ಸಹ ವಿಫಲವಾಗಿತ್ತು. ಸಹಕಾರಿ ಬ್ಯಾಂಕ್ ಸೇರಿದಂತೆ ವಿವಿಧೆಡೆ ಸುಮಾರು 1.5 ಲಕ್ಷ ರು. ಸಾಲ ಮಾಡಿಕೊಂಡಿರುವ ರೈತ ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.












Click it and Unblock the Notifications