ಕಳಸಾ-ಬಂಡೂರಿ : ನಾಲಾ ಒಡೆಯಲು ಸಜ್ಜಾದ ಹೋರಾಟಗಾರರು
ಹುಬ್ಬಳ್ಳಿ, ಅಕ್ಟೋಬರ್, 03 : ಕಳೆದ ಎರಡು ತಿಂಗಳಿಂದ ಕಳಸಾ ಬಂಡೂರಿ ನಾಲಾ ಜೋಡಣೆಗಾಗಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪಕ್ಷಾತೀತ ರೈತ ಹೋರಾಟ ಸಮಿತಿಯು ಅಕ್ಟೋಬರ್ 10 ರ ಶನಿವಾರದಂದು ಕಣಕಂಬಿ ಬಳಿಯ ಕಳಸಾ ನಾಲೆಗೆ ನಿರ್ಮಿಸಿದ ತಡೆಗೋಡೆ ಒಡೆಯಲು ನಿರ್ಧರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಅಕ್ಟೋಬರ್ 1ರ ಗುರುವಾರದಂದು ಬೆಂಗಳೂರಲ್ಲಿ ಭೇಟಿ ಮಾಡಿದ ಪಕ್ಷಾತೀತ ರೈತ ಹೋರಾಟ ಸಮಿತಿಯ ಸದಸ್ಯರು ಈ ನಿರ್ಣಯ ತೆಗೆದುಕೊಂಡಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ?]

ಎರಡೂ ಪಕ್ಷಗಳ ಅಧಿಕಾರಿಗಳು ತಮ್ಮ ಜನಪ್ರತಿನಿಧಿಗಳೊಂದಿಗೆ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರನ್ನು ಭೇಟಿಯಾಗಿ ನಾಲಾ ಯೋಜನೆಯ ಬಗ್ಗೆ ಮನವರಿಕೆ ಮಾಡಬೇಕು . ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ನ್ಯಾಯಾಧೀಕರಣಕ್ಕಿಂತ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಬೇಕೆಂದು ಆಗ್ರಹಿಸಿದ್ದಾರೆ.[ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]
ಪಾದಯಾತ್ರೆ :
ನಾಲಾ ಜೋಡಣೆಗಾಗಿ ನಡೆದ ಬಂದ್ ವೇಳೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದರೆ ಈಗ ಇದೇ ಜಿಲ್ಲೆಯ ಬನವಾಸಿ ಹೊಳೆಮಠದ ಶ್ರೀ ನಾಗಭೂಷಣ ಸ್ವಾಮೀಜಿ ಹೋರಾಟಕ್ಕೆ ಸ್ಪಂದಿಸಿ ಅಕ್ಟೋಬರ್ 6ರ ಮಂಗಳವಾರದಂದು 300 ಕಿ.ಮೀ ಪಾದಯಾತ್ರೆ ನಡೆಸಲಿದ್ದಾರೆ.
ಬನವಾಸಿಯ ಮಠದಿಂದ ಆರಂಭವಾಗುವ ನಾಗಭೂಷಣ ಸ್ವಾಮೀಯವರ ಪಾದಯಾತ್ರೆ ಸೊರಬ. ಶಿರಾಳಕೊಪ್ಪ, ಶಿಕಾರಿಪು, ಶಿವಮೊಗ್ಗ, ಕಡೂರು, ತಿಪಟೂರಿನ ಮೂಲಕ ಎಡೆಯೂರು ತಲುಪಲಿದೆ.












Click it and Unblock the Notifications