ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಎಷ್ಟು ಪರಿಣಾಮಕಾರಿಯಾಗಿದೆ? ವಿಶ್ಲೇಷಕರ ಅಂಕಿಅಂಶ

ಬೆಂಗಳೂರು, ಮೇ 27: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಮೇ 10ರಿಂದ ಮೇ 24ರವರೆಗೂ ಲಾಕ್‌ಡೌನ್ ಘೋಷಿಸಲಾಗಿತ್ತು. ಆದರೆ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಜೂನ್ 7ರವರೆಗೂ ಮತ್ತೆ ಲಾಕ್‌ಡೌನ್ ವಿಸ್ತರಿಸಿ ಆದೇಶ ಹೊರಡಿಸಲಾಯಿತು.

ಮೊದಲ ಲಾಕ್‌ಡೌನ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಲಾಕ್‌ಡೌನ್ ವಿಸ್ತರಣೆ ಅನಿವಾರ್ಯ ಎಂದು ಸರ್ಕಾರ ಘೋಷಣೆ ಮಾಡಿತು. ಆದರೆ ಲಾಕ್‌ಡೌನ್ ವಿಸ್ತರಣೆಯಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆಯೇ? ಸಕ್ರಿಯ ಪ್ರಕರಣಗಳ ಸಂಖ್ಯೆ, ಹೊಸ ಸೋಂಕಿತ ಪ್ರಕರಣಗಳು ತಗ್ಗಿವೆಯೇ? ಈ ಕುರಿತು ಸಂಶೋಧಕರ ತಂಡವೊಂದು ವಿಶ್ಲೇಷಣೆ ನಡೆಸಿದೆ. ಅಂಕಿ ಸಂಖ್ಯೆಗಳಲ್ಲಿ ಮಾಹಿತಿ ಹಂಚಿಕೊಂಡಿದೆ. ಮುಂದೆ ಓದಿ...

 ಕೇವಲ ಶೇ 36ರಷ್ಟು ಪರಿಣಾಮಕಾರಿ...

ಕೇವಲ ಶೇ 36ರಷ್ಟು ಪರಿಣಾಮಕಾರಿ...

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನ ಕಂಪ್ಯುಟೇಷನಲ್ ಹಾಗೂ ಡೇಟಾ ಸೈನ್ಸಸ್ ವಿಭಾಗದ ಸಂಶೋಧನಾ ತಂಡ ಈ ಕುರಿತು ವಿಶ್ಲೇಷಣೆ ನಡೆಸಿದ್ದು, ರಾಜ್ಯದಲ್ಲಿ ವಿಸ್ತರಿತವಾಗಿರುವ ಲಾಕ್‌ಡೌನ್ ಅವಧಿ, ಮೇ 19ರಿಂದ ಮೇ 25ರವರೆಗೆ ಕೊರೊನಾ ನಿಯಂತ್ರಣದಲ್ಲಿ ಕೇವಲ ಶೇ 36ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.

ಈ ತಂಡದ ಮಾದರಿ ವಿಶ್ಲೇಷಣೆ ಪ್ರಕಾರ ನಿರೀಕ್ಷೆಗಿಂತ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗಿವೆ. ಮೇ 10ರಿಂದ ಮೇ 24ರವರೆಗಿನ ಲಾಕ್‌ಡೌನ್ ಶೇ 80ರಷ್ಟು ಪರಿಣಾಮಕಾರಿಯಾಗಿತ್ತು. ಆದರೆ ಮೇ 19ರಿಂದ ಮೇ 25ರವರೆಗೆ ಪ್ರಕರಣಗಳು ನಿರೀಕ್ಷೆಗಿಂತ ಹೆಚ್ಚಿಗೆ ದಾಖಲಾಗಿವೆ ಎಂದು ತಂಡ ತಿಳಿಸಿದೆ.

"ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಕರಣಗಳು ದಾಖಲಾದವು"

ಲಾಕ್‌ಡೌನ್ ಇಲ್ಲದ ಅವಧಿ, 50% ಲಾಕ್ ಡೌನ್ ಹಾಗೂ ಸಂಪೂರ್ಣ ಲಾಕ್‌ಡೌನ್ ಎಂಬ ಮೂರು ಸಂದರ್ಭಗಳೊಂದಿಗೆ ತಾಳೆ ಹಾಕಿದ್ದು, ಲಾಕ್‌ಡೌನ್ ಇಲ್ಲದ ಸಂದರ್ಭ ದೃಢಪಟ್ಟ ಪ್ರಕರಣಗಳ ಸಂಖ್ಯೆ 24.28 ಲಕ್ಷ, 50% ಲಾಕ್‌ಡೌನ್ ಇರುವ ಸನ್ನಿವೇಶದಲ್ಲಿ 24.21 ಲಕ್ಷ ಹಾಗೂ ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ 24.04 ಲಕ್ಷ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿಯೇ 24.72 ಲಕ್ಷ ಪ್ರಕರಣವಾಯಿತು. ಸಕ್ರಿಯ ಪ್ರಕರಣಗಳ ವಿಚಾರದಲ್ಲಿಯೂ ಹೀಗೇ ಆಯಿತು ಎಂದು ವಿಭಾಗದ ಅಧ್ಯಕ್ಷ ಪ್ರೊ. ಶಶಿಕುಮಾರ್ ಗಣೇಶನ್ ತಿಳಿಸಿದ್ದಾರೆ.

 ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗಿಲ್ಲ

ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗಿಲ್ಲ

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಹೇರಲಾಯಿತು. ಲಾಕ್ ಡೌನ್ ವಿಸ್ತರಣೆಯೂ ಆಯಿತು. ಆದರೆ ಕಳೆದ ಒಂದು ವಾರದಿಂದ, ಅಂದರೆ ಮೇ 19-25ರವರೆಗೆ ಹೆಚ್ಚಿನ ಪ್ರಕರಣಗಳು ದಾಖಲಾದವು. ಇದು ಒಂದು ರೀತಿ ಎಚ್ಚರಿಕೆ ಗಂಟೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಯುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಇಳಿದಿಲ್ಲ. ನಮ್ಮ ಊಹೆ ಪ್ರಕಾರ ಜೂನ್ 7ರ ನಂತರದಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತವೆ ಎಂದು ಹೇಳಿದ್ದಾರೆ.
 ಲಾಕ್‌ಡೌನ್ ಅವಧಿಯಲ್ಲಿ ಕೊರೊನಾ ಪರೀಕ್ಷೆಯೂ ಹೆಚ್ಚಾಗಬೇಕು

ಲಾಕ್‌ಡೌನ್ ಅವಧಿಯಲ್ಲಿ ಕೊರೊನಾ ಪರೀಕ್ಷೆಯೂ ಹೆಚ್ಚಾಗಬೇಕು

ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಈ ಸಮಯ ಕೊರೊನಾ ಪರೀಕ್ಷೆ ಅತಿ ಮುಖ್ಯವಾಗಿದೆ. ಇಲ್ಲವೆಂದರೆ ಹೊಸ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗುತ್ತದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ ಬಾಬು ಹೇಳಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಪರೀಕ್ಷೆಗಳನ್ನೂ ಹೆಚ್ಚಾಗಿ ನಡೆಸಬೇಕು. ಕುಟುಂಬದ ಒಳಗೊಳಗೇ ಸೋಂಕು ಹರಡುತ್ತಿರುತ್ತದೆ. ಲಾಕ್‌ಡೌನ್ ಸಡಿಲಗೊಂಡ ನಂತರ ಹೆಚ್ಚಿನ ಮಟ್ಟದಲ್ಲಿ ಹರಡುವಿಕೆಗೆ ಕಾರಣವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.'

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+