ರೇಷನ್ ಕಾರ್ಡ್‌ ಬಗ್ಗೆ ಸರ್ಕಾರದ ಹಂತದಲ್ಲಿ ಸ್ಫೋಟಕ ಚರ್ಚೆ: ಜಿ. ಪರಮೇಶ್ವರ್ ಹೇಳಿದ್ದೇನು

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ರದ್ದು ವಿಚಾರವು ಇದೀಗ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಸರ್ಕಾರದ ಈ ವಿಷಯದಲ್ಲಿ ಯಾವುದೇ ರದ್ದು ಮಾಡ್ತಿಲ್ಲ ಅಂತ ಹೇಳಿಕೊಳ್ಳುತ್ತಿದ್ದರೂ, ರೇಷನ್ ಕಾರ್ಡ್‌ಗಳ ವಿಚಾರದಲ್ಲಿ ತೆರೆಮರೆಯ ಹಿಂದೆ ಸದ್ದಿಲ್ಲದೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಅನರ್ಹರು ಹಾಗೂ ಶ್ರೀಮಂತರು ಸರ್ಕಾರದ ಕಣ್ಣು ತಪ್ಪಿಸಿ ಇಲ್ಲವೇ ಮೋಸ ಮಾಡಿ ಯಾವುದೇ ಕಾರಣಕ್ಕೂ ಇನ್ಮುಂದೆ ಬಿಪಿಎಲ್ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ, ಸರ್ಕಾರದ ಹಂತದಲ್ಲಿ ಯಾವ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದಿರುವ ಚರ್ಚೆಯ ಬಗ್ಗೆ ಜಿ. ಪರಮೇಶ್ವರ್ ಅವರು ಚರ್ಚಿಸಿರುವ ವಿಷಯವೇನು ಎನ್ನುವ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಅನರ್ಹ, ಶ್ರೀಮಂತರು, ತೆರಿಗೆದಾರರು ಹಾಗೂ ಸರ್ಕಾರಿ ನೌಕರರಿಗೆ ನೀಡಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದಾಗಿ ರಾಜ್ಯ ಸರ್ಕಾರವು ಹೇಳಿತ್ತು. ಅದಕ್ಕೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಕೆಲವು ಫಲಾನುಭವಿಗಳು ಸಹ ರೇಷನ್‌ ಕಾರ್ಡ್‌ ಪರಿಷ್ಕರಣೆ ಮಾಡುವುದನ್ನು ಬಿಡಬೇಕು ಅಂತ ಆಗ್ರಹಿಸಿದ್ದರು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಯಾವುದೇ ಮಾದರಿಯ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

Explosive debate at the government level about ration cards What did G Parameshwara say

ಆದರೆ, ರಾಜ್ಯದಲ್ಲಿ ರೇಷನ್ ಕಾರ್ಡ್‌ಗಳ ಪರಿಷ್ಕರಣೆ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆ. ಹೀಗಾಗಿ, ಈಗಾಗಲೇ ಬಿಪಿಎಲ್ ಕಾರ್ಡ್‌ ರದ್ದಾಗಿದ್ದರೆ ಅದೇ ಕಾರ್ಡ್‌ಅನ್ನು ಮತ್ತೆ ಪಡೆಯುವುದು ಸುಲಭದ ಕೆಲಸವಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಈ ಬಾರಿ ಬಿಪಿಎಲ್‌ ಕಾರ್ಡ್‌ಗಳನ್ನು ಮರಳಿ ನೀಡುವಾಗ ರಾಜ್ಯ ಸರ್ಕಾರವು ಕೆಲವು ಮುಖ್ಯ ದಾಖಲೆಗಳನ್ನು ಹಾಗೂ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿಯೇ ಕೊಡಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಅರ್ಹರಲ್ಲದವರು ಕಳೆದುಕೊಳ್ಳುವುದು ಕನ್ಫರ್ಮ್ ಅಂತಲೇ ಹೇಳಲಾಗುತ್ತಿದೆ.

ಈ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದು, ಈ ವಿಷಯದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ನಾನೂ ಸಹ ಈ ಬಗ್ಗೆ ಹೇಳಿದ್ದೇನೆ. ಕರ್ನಾಟಕದ ಮಾರ್ಗಸೂಚಿಯ ಪ್ರಕಾರ ಯಾರು ಬರ್ತಾರೆ ಅವರಿಗೆಲ್ಲಾ ಬಿಪಿಎಲ್ ಕೊಡಿ ಅಂತ ಹೇಳಿದ್ದೇವೆ. ಕೆಲವರನ್ನು ತೆಗೆದಿದ್ದೇವೆ ಅಂತ ಆಹಾರ ಇಲಾಖೆಯವರು ಹೇಳಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರ್ ಪರಿಶೀಲನೆ ಮಾಡಿ ವಾಪಸ್ ಕೊಡಿ ಅಂತ ಹೇಳಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Explosive debate at the government level about ration cards What did G Parameshwara say

ಪರಿಶೀಲನೆ ಮಾಡಿಯೇ ಕಾರ್ಡ್‌

ರಾಜ್ಯದಲ್ಲಿ ಇಂದಿನಿಂದ ಬಿಪಿಎಲ್ ಕಾರ್ಡ್‌ ರದ್ದಾಗಿರುವವರ ಪರಿಶೀಲನೆ ಹಾಗೂ ಕಾರ್ಡ್‌ಗಳನ್ನು ವಾಪಸ್‌ ಕೊಡುವ ಪ್ರಕ್ರಿಯೆ ಶುರುವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿತ್ತು. ಈ ರೀತಿ ರದ್ದು ಮಾಡಲಾದ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡುವುದಾಗಿ ರಾಜ್ಯ ಸರ್ಕಾರವು ಹೇಳಿತ್ತು. ಅಲ್ಲದೇ ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿಸುತ್ತಿರುವವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡುವುದಾಗಿ ಹೇಳಿತ್ತು. ಈ ಪ್ರಕ್ರಿಯೆ ಇದೀಗ ಶುರುವಾಗಿದೆ.

ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಹಲವು ಪ್ರಮುಖ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿದೆ. ಇದೀಗ ರೇಷನ್‌ ಕಾರ್ಡ್‌ಗಳನ್ನು ಕಳೆದುಕೊಂಡವರು ಇದೀಗ ರೇಷನ್ ಕಾರ್ಡ್‌ಗಳನ್ನು ಪಡೆಯುವುದಕ್ಕೆ ಮತ್ತೆ ಪರದಾಡುತ್ತಿದ್ದಾರೆ. ಇದಕ್ಕೆ ಮೂಲ ಕಾರ್ಡ್‌ ಪಡೆದುಕೊಳ್ಳುವುದಕ್ಕಿಂತಲೂ ಹಲವು ದಾಖಲೆಗಳನ್ನು ನೀಡುವ ಅವಶ್ಯಕತೆ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+