ಇಸ್ರೇಲ್‌ ಮಹಿಳಾ ಅಧಿಕಾರಿಗೆ ತೋಟ ತೋರಿಸಿ, ಬಾಳೆ ಹಣ್ಣು ಕೊಟ್ಟು ಕಳುಹಿಸಿದ ಮಾಜಿ ಸಿಎಂ!

ಒಂದ್ಕಡೆ ಹಮಾಸ್ ಉಗ್ರರು ಮತ್ತು ಇಸ್ರೇಲ್ ಮಧ್ಯೆ ಭೀಕರ ಯುದ್ಧ ನಡೆಯುತ್ತಿದೆ. ಇದೇ ವೇಳೆ ಇಸ್ರೇಲ್ ಮಹಿಳಾ ಅಧಿಕಾರಿ ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಎಚ್‌ಡಿಕೆ ಮನೆಗೆ ಭೇಟಿ ನೀಡಿದ್ದಾರೆ. ಬಿಡದಿ ತೋಟಕ್ಕೆ, ಭೇಟಿ ನೀಡಿದ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್-ಹೈಮ್ ಅವರಿಗೆ ಕೃಷಿ ಉತ್ಪನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ ಮಾಜಿ ಸಿಎಂ. ಹಾಗಾದ್ರೆ ಇಸ್ರೇಲ್ ಅಧಿಕಾರಿ ದಿಢೀರ್ ಮಾಜಿ ಪ್ರಧಾನಿ ಪುತ್ರನ ಮನೆಗೆ ವಿಸಿಟ್ ಕೊಟ್ಟಿದ್ದು ಯಾಕೆ?

ಇಸ್ರೇಲ್ ಮತ್ತು ಭಾರತದ ಸಂಬಂಧ ಉತ್ತಮವಾಗಿದೆ, ಅದರಲ್ಲೂ ಈ ಹಿಂದೆ ಎಚ್‌ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಕೃಷಿ ಅಧ್ಯಯನಕ್ಕೆ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ್ದರು. ಹೀಗಿದ್ದಾಗ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್-ಹೈಮ್ ಭೇಟಿ ವೇಳೆ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಹಾಗೆ ಕರ್ನಾಟಕ & ಇಸ್ರೇಲ್ ಸಂಬಂಧ ವೃದ್ಧಿಯ ಬಗ್ಗೆಯೂ ಚರ್ಚೆ ಮಾಡಿದ್ದು, ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ವಿವರಗಳನ್ನ ನೀಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಎಚ್‌ಡಿಕೆ ಸಹಕಾರ ಕೋರಿದ್ದಾರಂತೆ ಟಾಮಿ ಬೆನ್-ಹೈಮ್. ಅಲ್ಲದೆ ಹಮಾಸ್ ಉಗ್ರರು & ಇಸ್ರೇಲ್ ಯುದ್ಧದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.

Explore Why Israeli Diplomat Meets Former Prime Minister HDD Son HD Kumaraswamy

ಯುದ್ಧದ ಬಗ್ಗೆ ಇಸ್ರೇಲ್ ಅಧಿಕಾರಿ ಮಾತು

ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಘೋರ ಯುದ್ಧ ನಡೆಯುತ್ತಿದ್ದು, ಈ ವೇಳೆಯೇ ಮಾಜಿ ಪ್ರಧಾನಿ ಪುತ್ರನ ಮನೆಗೆ ಇಸ್ರೇಲ್ ಅಧಿಕಾರಿ ಭೇಟಿ ಸಹಜವಾಗಿ ಕುತೂಹಲ ಕೆರಳಿಸಿದೆ. ಈ ಹಿಂದಿನಿಂದ ವಿವಿಧ ದೇಶಗಳ ಅಧಿಕಾರಿಗಳು ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಭೇಟಿ ನೀಡುವುದು ಮಾಮೂಲು. ಆದ್ರೆ ಈ ಬಾರಿ ಎಚ್‌ಡಿಕೆ ಜೊತೆಗೆ ಇಸ್ರೇಲ್ ಮತ್ತು ಹಮಾಸ್ ಯುದ್ಧದ ಬಗ್ಗೆ ಚರ್ಚೆ ಮಾಡಿದ್ದಾರೆ ಇಸ್ರೇಲ್ ಅಧಿಕಾರಿ.

ಕರ್ನಾಟಕದ ವಿಚಾರವೂ ಪಸ್ತಾಪ

ಹಮಾಸ್ ಉಗ್ರರು ಇಸ್ರೇಲ್, ಅಮೆರಿಕ ಸೇರಿ ಹಲವು ದೇಶದ ವೃದ್ಧರು ಹಾಗೂ ಮಹಿಳೆಯರು ಸೇರಿದಂತೆ ಮಕ್ಕಳನ್ನು ಅಪಹರಣ ಮಾಡಿದ ಕೃತ್ಯದ ಕುರಿತಾಗಿ ಈ ವೇಳೆ ಇಸ್ರೇಲ್ ಅಧಿಕಾರಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಇಂತಹ ಸಂಕಷ್ಟ ಸಮಯದಲ್ಲಿ ಭಾರತವು ಇಸ್ರೇಲ್ ಪರವಾಗಿ ನಿಂತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಂಥ ಸಂಕಷ್ಟ ಸಮಯದಲ್ಲಿ ಭಾರತ, ಇಸ್ರೇಲ್ ಪರ ಬೆಂಬಲ ನೀಡಿದ್ದಕ್ಕೆ ಅವರು ಭಾರತೀಯರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಸಮಾನ ಆಸಕ್ತಿ ಮತ್ತೆ ದೃಷ್ಟಿಕೋನದಿಂದ ಬೆಳೆಯುತ್ತಿರುವ ಕರ್ನಾಟಕ & ಇಸ್ರೇಲ್ ಮಧ್ಯೆ ಸಮಾನ ಹಿತಾಸಕ್ತಿ ಕೂಡ ಇದ್ದು. ಈ ನಿಟ್ಟಿನಲ್ಲಿ ನಾವೆಲ್ಲರೂ, ದೀರ್ಘಕಾಲೀನ ದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ ಟಾಮಿ ಬೆನ್.

ತೋಟ ಸುತ್ತಾಡಿಸಿದ ಮಾಜಿ ಸಿಎಂ

ಇದೇ ವೇಳೆ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್-ಹೈಮ್ ಅವರಿಗೆ, ತಮ್ಮ ತೋಟ ತೋರಿಸಿದ ಮಾಜಿ ಸಿಎಂ ಎಚ್‌ಡಿಕೆ. ಬಾಳೆಹಣ್ಣು ಸೇರಿದಂತೆ ಕೃಷಿ ಉತ್ಪನ್ನಗಳನ್ನ ಕೂಡ ಉಡುಗೊರೆಯಾಗಿ ನೀಡಿದರು. ಹಲವು ಗಂಟೆಗಳ ಕಾಲ, ಅಂತಾರಾಷ್ಟ್ರೀಯ ವಿಚಾರಗಳೂ ಸೇರಿ ಸ್ಥಳೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಒಟ್ನಲ್ಲಿ ಮಾಜಿ ಪ್ರಧಾನಿಯ ಪುತ್ರನ ಮನೆಗೆ, ಯುದ್ಧದ ಸಮಯದಲ್ಲಿ ಇಸ್ರೇಲ್ ಅಧಿಕಾರಿ ಭೇಟಿ ನೀಡಿದ್ದು ಸಹಜವಾಗಿ ಭಾರಿ ಕುತೂಹಲ ಕೆರಳಿಸಿದೆ.

Explore Why Israeli Diplomat Meets Former Prime Minister HDD Son HD Kumaraswamy

ಯುದ್ಧ ಶುರುವಾಗಿದ್ದು ಯಾವಾಗ?

ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು ಇಸ್ರೇಲ್‌ನ ವಿರುದ್ಧ 5000 ರಾಕೆಟ್‌ ಉಡಾಯಿಸಿ, ಅಟ್ಟಹಾಸ ಮೆರೆದಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನು ಮತ್ತು ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 1 ತಿಂಗಳು ಕಳೆದಿದೆ. ಹೀಗೆ 1 ತಿಂಗಳ ಅವಧಿಯಲ್ಲಿ ತನ್ನ ಶತ್ರುಗಳನ್ನ ನಾಶ ಮಾಡಲು ಇಸ್ರೇಲ್ ಬಳಸಿರುವುದು ಬರೋಬ್ಬರಿ 30 ಸಾವಿರ ಟನ್ ಬಾಂಬ್‌ಗಳನ್ನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+