ಸಿಂಪ್ಲಿಸಿಟಿಯೇ ಪಬ್ಲಿಸಿಟಿ: ಸುಧಾ ಮೂರ್ತಿ ಕಿಂಡಲ್ ಮಾಡಿದ ಕುನಾಲ್ ಕಮ್ರಾ.... Sudha Murty
ಸುಧಾ ಮೂರ್ತಿ ಅವರು ತುಂಬಾನೇ ಸಿಂಪಲ್, ಸಾವಿರ ಸಾವಿರ ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಧಾ ಮೂರ್ತಿ ಅವರು 500 ರೂಪಾಯಿಯ ಸೀರೆ ಹಾಕುತ್ತಾರೆ. ಸುಧಾ ಮೂರ್ತಿ ಅವರ ಗುಣಗಳನ್ನ ಇಂದಿನ ಕಾಲದ ಮಹಿಳೆಯರು ಎಲ್ಲರೂ ಅಳವಡಿಕೆ ಮಾಡಿಕೊಳ್ಳಬೇಕು ಅಂತೆಲ್ಲಾ ಹೇಳೋದನ್ನ ಯುಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ನಾವೆಲ್ಲಾ ನೋಡಿದ್ದೀವಿ. ಆದರೆ ಸುಧಾ ಮೂರ್ತಿ ಅವರ ಸಿಂಪ್ಲಿಸಿಟಿಯೇ ಪಬ್ಲಿಸಿಟಿ ಆಗೋಯ್ತಾ?
ಇನ್ಫೋಸಿಸ್ ಸಂಸ್ಥೆ ಕರ್ನಾಟಕ ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿನ ಹೆಸರನ್ನು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದೆ. ಇನ್ಫೋಸಿಸ್ ಸಂಸ್ಥೆಯು ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತದೆ. ಹಾಗೇ ಲಕ್ಷಾಂತರ ಜನರಿಗೆ ಉದ್ಯೋಗವನ್ನೂ ಸಂಸ್ಥೆ ಕೊಟ್ಟಿದ್ದು, ಸರ್ಕಾರಕ್ಕೆ ಕೋಟಿ ಕೋಟಿ ರೂಪಾಯಿ ತೆರಿಗೆ ಹಣ ಕೂಡ ಬರುತ್ತದೆ. ಇಂತಿಪ್ಪ ಇನ್ಫೋಸಿಸ್ ಸಂಸ್ಥೆ ಸಹ ಸಂಸ್ಥಾಪಕರೂ ಆಗಿದ್ದಾರೆ ಸುಧಾ ಮೂರ್ತಿ ಅವರು. ಆದರೆ ಈಗ ಗಂಭೀರ ಆರೋಪ ಒಂದು ಕೇಳಿಬಂದಿದ್ದು, ಹಂಗಾದ್ರೆ ಸುಧಾ ಮೂರ್ತಿ ಅವರು ಸಿಂಪ್ಲಿಸಿಟಿ ಹೆಸರಲ್ಲಿ ನಾಟಕ ಮಾಡ್ತಿದ್ದಾರಾ?

ಸಿಂಪ್ಲಿಸಿಟಿ ಹೆಸರಲ್ಲಿ ನಾಟಕ ಮಾಡ್ತಿದ್ದಾರಾ?
ಹೌದು, ಸುಧಾ ಮೂರ್ತಿ ಅವರ ಯಜಮಾನರು ಅಂದ್ರೆ ಗಂಡ ನಾರಾಯಣ ಮೂರ್ತಿ ಅವರು ಪದೇ ಪದೇ ತಮ್ಮ ಹೇಳಿಕೆಗಳ ಪರಿಣಾಮ ಟ್ರೋಲ್ ಆಗುತ್ತಾರೆ. ಆದರೆ ಸುಧಾ ಮೂರ್ತಿ ಅವರ ಬಗ್ಗೆಯೂ ಟ್ರೋಲ್ ಮಾಡುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಈ ರೀತಿ, ಸುಧಾ ಮೂರ್ತಿ ಅವರ ಸಿಂಪ್ಲಿಸಿಟಿ ಬಗ್ಗೆ ಕಾಮಿಡಿಯನ್ ಒಬ್ಬ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿ ವೈರಲ್ ಆಗುತ್ತಿದೆ. ಅಲ್ಲದೆ, ಸುಧಾ ಮೂರ್ತಿ ಸಿಂಪ್ಲಿಸಿಟಿ ಹೆಸರಲ್ಲಿ ನಾಟಕ ಮಾಡ್ತಿದ್ದಾರಾ? ಅನ್ನೋ ಪ್ರಶ್ನೆ ಕೇಳಿದವರ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ....
ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕನ್ನಡಿಗರು!
ಈ ರೀತಿ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ಅವರ ಹೆಂಡತಿ ಸುಧಾ ಮೂರ್ತಿ ಅವರ ಬಗ್ಗೆ ಮಾತನಾಡಿದ್ದು ಕಾಮಿಡಿಯನ್ ಕುನಾಲ್ ಕಮ್ರಾ. ಮಹಾರಾಷ್ಟ್ರದ ಏಕನಾಥ್ ಶಿಂಧೆ ಬಗ್ಗೆ ಮಾತನಾಡಿ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿರುವ ಕಾಮಿಡಿಯನ್ ಕುನಾಲ್ ಕಮ್ರಾ ಈ ಹಿಂದೆ ಸುಧಾ ಮೂರ್ತಿ ಅವರ ಸಿಂಪ್ಲಿಸಿಟಿ ಬಗ್ಗೆ ಕೂಡ ಮಾತನಾಡಿದ್ದು ಈಗ ಮತ್ತೆ ಮತ್ತೆ ವೈರಲ್ ಆಗುತ್ತಿದೆ. ಕುನಾಲ್ ಕಮ್ರಾ ನೀಡಿರುವ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕ್ಷಮೆ ಕೇಳದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನ ಕೂಡ ನೀಡುತ್ತಿದ್ದಾರೆ ಕನ್ನಡಿಗರು.
ಒಟ್ನಲ್ಲಿ ನಿಂತು ಕಾಮಿಡಿ ಮಾಡುವ ಭರದಲ್ಲಿ ಏನೇನೋ ಎಡವಟ್ಟು ಮಾಡಿಕೊಳ್ಳಬೇಡಿ, ಸುಧಾ ಮೂರ್ತಿ ಅವರು ಕರ್ನಾಟಕಕ್ಕೆ ಭಾರಿ ದೊಡ್ಡ ಸಹಾಯ ಮಾಡಿದ್ದಾರೆ. ಸಮಾಜ ಸೇವೆ ಕೂಡ ಮಾಡಿದ್ದಾರೆ ಅಂತಾ ಇದೀಗ ಕನ್ನಡಿಗರು ಬುದ್ಧಿ ಮಾತು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಈ ವಿಡಿಯೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ & ವಿರೋಧದ ಚರ್ಚೆಯೂ ಜೋರಾಗಿದೆ. ಕಾಮಿಡಿಯನ್ ಕುನಾಲ್ ಕಮ್ರಾ ಈ ಮೂಲಕ ಮತ್ತೆ ಟ್ರೆಂಡ್‌ನಲ್ಲಿದ್ದಾರೆ.












Click it and Unblock the Notifications