Prajwal Revanna Case: ಅತಿಯಾದ ಕಾಮ & ಲೈಂಗಿಕ ಸೆಳೆತಕ್ಕೆ ವೈದ್ಯಕೀಯ ಭಾಷೆಯಲ್ಲಿ ಯಾವ ರೋಗ ಅಂತಾರೆ?
ಲೈಂಗಿಕತೆ ಅನ್ನೋದು ಬರೀ ಸುಖ ಅಲ್ಲ, ಲೈಂಗಿಕತೆ ಅನ್ನೋದು ಮನುಷ್ಯನ ಭವಿಷ್ಯಕ್ಕು ಅತ್ಯಗತ್ಯ ಪ್ರಕ್ರಿಯೆ. ಯಾಕಂದ್ರೆ ಮನುಷ್ಯನ ಸಂತಾನ ಬೆಳೆಯಲು ಲೈಂಗಿಕತೆ ಅತಿಮುಖ್ಯ. ಹೀಗಾಗಿ ಲೈಂಗಿಕ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇದೇ ಲೈಂಗಿಕ ಕ್ರಿಯೆ ಮೇಲೆ ಆಸಕ್ತಿ ಹೆಚ್ಚಾಗಿ, ಅತಿಯಾದ ಲೈಂಗಿಕ ಕ್ರಿಯೆ ನಡೆಸುತ್ತಿದ್ದರೆ ಅದು ಏನಾಗುತ್ತೆ ಗೊತ್ತಾ? ಅತಿಯಾದ ಲೈಂಗಿಕ ಕ್ರಿಯೆ ರೋಗಕ್ಕೆ ವೈದ್ಯರು ಏನು ಹೇಳುತ್ತಾರೆ? ಈ ರೋಗಕ್ಕೆ ಔಷಧಿ ಮತ್ತು ಚಿಕಿತ್ಸೆ ಏನು? ಬನ್ನಿ ತಿಳಿಯೋಣ.
ಕಾಮದಲ್ಲಿ ಆಸಕ್ತಿ ಇರಬೇಕು ನಿಜ, ಆದರೆ ಕಾಮವೇ ಜೀವನ ಆಗಿ ಹೋದರೆ ಅಂತಹವರ ವರ್ತನೆಯನ್ನು ರೋಗ ಅಂತಾ ಕರೆಯುತ್ತಾರೆ. ಈಗ ಪ್ರಜ್ವಲ್ ರೇವಣ್ಣ ವಿಚಾರದಲ್ಲಿಯೂ ಇಂತಹದ್ದೇ ಆರೋಪ ಕೇಳಿಬಂದಿದೆ. ಅದ್ರಲ್ಲೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ & ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದನ ವಿರುದ್ಧ ಇಂತಹ ಗಂಭೀರವಾದ ಆರೋಪ ಕೇಳಿಬಂದು. ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಮಿಂಚಿನ ಸಂಚಲನ ಸೃಷ್ಟಿಯಾಗಿದ್ದು ಲೋಕಸಭೆ ಚುನಾವಣೆ ಸಮಯದಲ್ಲೇ, ಬಿಜೆಪಿ ನಾಯಕರಿಗೂ ತಲೆನೋವು ಶುರುವಾಗಿದೆ. ಹಾಗಾದರೆ ಅತಿಯಾದ ಲೈಂಗಿಕ ಆಸಕ್ತಿ ರೋಗಕ್ಕೆ ವೈದ್ಯರು ಏನೆಂದು ಹೆಸರು ಇಟ್ಟಿದ್ದಾರೆ? ಮುಂದೆ ಓದಿ.

'ಕಂಪಲ್ಸಿವ್ ಸೆಕ್ಸುಲ್ ಬಿಹೇವಿಯರ್ ಡಿಸಾರ್ಡರ್'
ಕಾಮದಲ್ಲಿ ಆಸಕ್ತಿ ಇಲ್ಲದೇ ಇರುವುದು ಹೇಗೆ ಒಂದು ರೋಗವೋ, ಅದೇ ರೀತಿ ಅತಿಯಾಗಿ ಲೈಂಗಿಕತೆ ಅಥವಾ ಸಂಭೋಗದಲ್ಲಿ ಅತಿಯಾದ ಆಸಕ್ತಿ ಹೊಂದಿರುವ ವ್ಯಕ್ತಿಯೊಬ್ಬನ ವರ್ತನೆ ಕೂಡ ರೋಗಕ್ಕೆ ಸಮಾನ. ಇಂತಹ ಜನರು ಅತಿಯಾಗಿ ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಟ್ಟು, ಅದರ ಬಗ್ಗೆಯೇ ಸದಾ ಯೋಚನೆ ಮಾಡುತ್ತಿರುತ್ತಾರೆ. ಹಾಗೇ ಅದೆಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಿದರೂ ಅದು ಅವರಿಗೆ ತೃಪ್ತಿ ನೀಡುವುದಿಲ್ಲ, ಅಲ್ಲದೆ ಮತ್ತೆ ಮತ್ತೆ ಲೈಂಗಿಕ ಕ್ರಿಯೆಯ ನಡೆಸಬೇಕು ಎಂಬುದು ಅವರ ಆಸೆ ಆಗಿರುತ್ತದೆ. ಆದರೆ ಇದರಿಂದ ಹೆಣ್ಣು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅವರ ಆರೋಗ್ಯ ಹದಗೆಡುತ್ತದೆ.
ರೋಗಕ್ಕೆ ಚಿಕಿತ್ಸೆ ಇದೆಯಾ?
ಎಲ್ಲಾ ರೋಗಗಳಂತೆ ಅತಿಯಾದ ಲೈಂಗಿಕ ಆಸಕ್ತಿಗೆ ಕೂಡ ಚಿಕಿತ್ಸೆ ಇದೆ. ಆದರೆ ಈ ರೋಗದ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಮಾನಸಿಕ ಆರೋಗ್ಯ ಸರಿ ಮಾಡುವ ಬಗ್ಗೆ ಒತ್ತು ನೀಡುತ್ತಾರೆ ವೈದ್ಯರು. ಏಕೆಂದರೆ ಲೈಂಗಿಕ ಕ್ರಿಯೆಯಲ್ಲಿ ಪ್ರಮುಖವಾಗಿ ಮನಸ್ಸಿನ ಭಾವನೆಗಳು ಹೆಚ್ಚು ಪರಿಣಾಮ ಬೀರುತ್ತವೆ. ಹೀಗಾಗಿ ಅತಿಯಾದ ಲೈಂಗಿಕ ಆಸಕ್ತಿ ರೋಗಕ್ಕೆ ಚಿಕಿತ್ಸೆ ನೀಡುವಾಗ ಈ ರೀತಿಯಾಗಿ ಮೊದಲು ಮಾನಸಿಕ ಆರೋಗ್ಯವನ್ನು ಸರಿ ಮಾಡಲು ಯತ್ನಿಸುತ್ತಾರೆ. ಈ ಮೂಲಕ ರೋಗಿಯ ಮನಸ್ಸನ್ನು ಹಿಡಿತಕ್ಕೆ ತಂದು, ಔಷಧಗಳನ್ನ ನೀಡುತ್ತಾರೆ ವೈದ್ಯರು.
ಸರ್ಕಾರ ಕ್ರಮ ಕೈಗೊಳ್ಳಲಿದೆಯಾ?
ಕರ್ನಾಟಕದಲ್ಲಿ ಸಂಸದರ ವಿರುದ್ಧ ಕೇಳಿಬಂದಿರುವ ಆರೋಪ ಸಂಚಲನ ಸೃಷ್ಟಿಮಾಡಿದೆ. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ತಪ್ಪು ಯಾರೇ ಮಾಡಿದ್ದರೂ ತಪ್ಪು, ಅದರ ವಿರುದ್ಧವಾಗಿ ಈಗ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೋಷಿಯಲ್ ಮೀಡಿಯಾದಲ್ಲು ಜನ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಈ ಕೇಸ್ ಎಲ್ಲಿಗೆ ಬಂದು ನಿಲ್ಲುತ್ತೆ? ಮುಂದೆ ಕರ್ನಾಟಕ ರಾಜಕೀಯದಲ್ಲಿ ಕೂಡ ಯಾವ ರೀತಿಯ ತಲ್ಲಣ ಸೃಷ್ಟಿ ಮಾಡಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಅದಕ್ಕೂ ಮೊದಲು ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಇನ್ನೂ ಬಾಕಿ ಇರುವ ಕಾರಣ, ಈ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡುವುದು ಪಕ್ಕಾ ಅಂತಿದ್ದಾರೆ ಜನರು.












Click it and Unblock the Notifications