ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಗ್ಯಾರಂಟಿ? ದಿನಾಂಕ ಯಾವಾಗ?

ಸಮಾಜದಲ್ಲಿ ಅವಕಾಶ ವಂಚಿತ ಜನಕ್ಕೆ ಮತ್ತು ಶತ ಶತಮಾನದಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವವರು, ಸಾಮಾಜಿಕ ನ್ಯಾಯದಿಂದ ಇಂದಿಗೂ ವಂಚಿತರಾದ ಜನರ ಪರವಾಗಿ ನಾವು ಇರುತ್ತೇವೆ. ಯಾರು ಏನೇ ಹೇಳಿದರೂ, ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೆ ಕೆಲಸ ಮಾಡುತ್ತೇವೆ ಅಂತಾ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಇದೇ ವೇಳೆ ಕರ್ನಾಟಕದ ಜಾತಿ ಗಣತಿ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.

ಅಷ್ಟಕ್ಕೂ ಇಂದು ಅಖಿಲ ಕರ್ನಾಟಕ ಗಾಣಿಗರ ಸಂಘ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಗಾಣಿಗ ಜನಾಂಗದ ಸಮಾವೇಶವನ್ನು ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆ ವೃತ್ತಿ ಮಾಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿ ಬಿಡಬೇಕಾದ ಸ್ಥಿತಿ ಬಂದಿದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ, ಜಮೀನು ಹೊಂದಿದವರು ಬಹಳ ಕಡಿಮೆ, ಸಣ್ಣ ರೈತರು ಬಹಳ ಕಡಿಮೆ ಇದ್ದಾರೆ ಎಂದರು ಸಿಎಂ.

Explore What CM Siddaramaiah Said About The Caste Census Report Of Karnataka

'ಪ್ರಧಾನಿ ಮೋದಿಯವರಿಗೆ ಅರ್ಥ ಆಗಿಲ್ವಾ?'

ಗಾಣಿಗರ ನಿಗಮ ಸ್ಥಾಪನೆ & ವಿಶ್ವಕರ್ಮ ಯೋಜನೆ ಅಡಿ ಗಾಣಿಗರನ್ನು ಬಿಟ್ಟಿದ್ದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು, ಸಮುದಾಯದ ಮುಖಂಡರು ಇದೀಗ ನನ್ನ ಬಳಿ ಮನವಿಯನ್ನು ಮಾಡಿದ್ದಾರೆ. ನಿಮ್ಮ ಸಮಾಜಕ್ಕೆ ಸೇರಿದ ಪ್ರಧಾನಿ ಅವರಿಗೆ ನಿಮ್ಮ ಸಮಸ್ಯೆ ಗೊತ್ತಿದೆಯೋ..? ಇಲ್ಲವೋ..? ನನಗೆ ತಿಳಿದಿಲ್ಲ, ಆದರೆ ನಾನು ಕೂಡಲೇ ಪತ್ರ ಬರೆಯುತ್ತೇನೆ ಎಂದು ಅವರಿಗೆ ಮಾತು ಕೊಟ್ಟಿದ್ದೇನೆ ಎಂದರು ಸಿಎಂ ಸಿದ್ದರಾಮಯ್ಯ.

ಜಾತಿ ಗಣತಿ ಬಿಡುಗಡೆ ಪಕ್ಕಾ?

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ವರದಿಯನ್ನ ವೈಜ್ಞಾನಿಕವಾಗಿ ಸಿದ್ಧ ಮಾಡಿದ್ದು ವರದಿಯನ್ನ ಇನ್ನೂ ನಾವು ಸ್ವೀಕಾರ ಮಾಡಿಲ್ಲ. ವರದಿಯನ್ನು ಸ್ವೀಕರಿಸಲೆಂದೇ ಆಯೋಗದ ಅವಧಿ 2 ತಿಂಗಳು ಮುಂದುವರಿಸುವ ಅಗತ್ಯತೆ ಇದೆ. ವರದಿಯು ಬಂದ ಬಳಿಕ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ.

ನಮ್ಮ ಕಾರ್ಯ ಹೀಗೆ ಮುಂದುವರಿಯುತ್ತದೆ

ಹಾಗೇ ರಾಜಶೇಖರ್ ಅವರಿಗೆ ಸಹಕಾರ ರತ್ನ ಎಂಬ ಬಿರುದು ಮತ್ತು ಲಕ್ಷ್ಮೀಪತಿ ಎನ್ನುವವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ರಾಧಾಕೃಷ್ಣ ಅವರಿಗೆ ರಾಜ್ಯ ರೈತ ಪ್ರಶಸ್ತಿಯನ್ನ ನೀಡಿದೆ. ಸಮಾಜಿಕ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಹೀಗೆಯೇ, ಈ ಕಾರ್ಯವನ್ನ ನಾವು ಮುಂದುವರೆಸುತ್ತೇವೆ ಅಂತಾ ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಾತನ್ನು ನೀಡಿದರು.

ವಿ.ಆರ್.ಸುದರ್ಶನ್ & ನಾನು ರಾಜಕೀಯ, ಹೋರಾಟ ಸೇರಿದಂತೆ ಸಾಮಾಜಿಕವಾಗಿ ಒಟ್ಟಿಗೆ ಇದ್ದವರು. ಅವರ & ನಮ್ಮ ಮನಸ್ಥಿತಿ ಒಂದೇ. ರೂಢಾನಂದಪುರಿ ಅವರು, ಸ್ವಾಮೀಜಿಗಳಾದ ಮೇಲೆ ಇದೇ ಮೊದಲ ಬಾರಿ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ. ನಾವು ಒಟ್ಟಿಗೆ ಹಿಂದುಳಿದ ಜಾತಿ ಸಮಸ್ಯೆ ಕುರಿತು ಚರ್ಚೆ ಮಾಡಿ, ಇತ್ಯರ್ಥಪಡಿಸಲು ಪ್ರಯತ್ನವರು. ಅವರಲ್ಲಿ ಈ ಸಮಾಜವ ಮುನ್ನಡೆಸುವ ಶಕ್ತಿ ಹೆಚ್ಚಾಗಲಿ ಎಂದರು ಸಿಎಂ ಸಿದ್ದರಾಮಯ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+