Karnataka's Richest Districts: ಕರ್ನಾಟಕದಲ್ಲಿ ಕುಬೇರರ ತವರು ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ
Karnataka's Richest Districts: ಸಾಮಾನ್ಯವಾಗಿ ನಾವು ಭಾರತದ ಅತ್ಯಂತ ಶ್ರೀಮಂತ ನಗರಗಳ ಬಗ್ಗೆ ಕೇಳಿರುತ್ತೇವೆ. ಹಾಗೆಯೇ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಪ್ರವಾಸೋದ್ಯಮ, ಹಣಕಾಸು ವಿಚಾರಕ್ಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 2024ನೇ ಸಾಲಿನಲ್ಲಿ ಯಾವೆಲ್ಲಾ ಜಿಲ್ಲೆಗಳು ಶ್ರೀಮಂತ ಪಟ್ಟವನ್ನು ಪಡೆದುಕೊಂಡಿವೆ, ವಿಶೇಷತೆ ಹಾಗೂ ಅಲ್ಲಿನ ತಲಾ ಆದಾಯ ಎಷ್ಟು ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ನೀಡಲಾಗಿದೆ ಇಲ್ಲಿ ಗಮನಿಸಿ.
ರಾಜದಲ್ಲಿನ ಒಂದೊಂದು ಜಿಲ್ಲೆಗಳು ಒಂದೊಂದು ವಿಶೇಷತೆಗಳನ್ನು ಹೊಂದಿವೆ. ಉದಾಹರಣೆಗೆ ಧಾರವಾಡ-ಪೇಡಾನಗರಿ, ದಾವಣಗೆರೆ-ಬೆಣ್ಣೆನಗರಿ, ಮಂಡ್ಯ-ಸಕ್ಕರೆ ನಾಡು, ಮೈಸೂರು-ಸಾಂಸ್ಕೃತಿಕ ನಗರಿ, ಮಂಗಳೂರು-ಕಡಲನಗರಿ, ಉಡುಪಿ-ಕೃಷ್ಣನಗರಿ, ಬೆಳಗಾವಿ-ಕುಂದಾಮಗರಿ, ಬೆಂಗಳೂರು-ತೋಟಗಳ ನಗರಿ ಹೀಗೆ ಹಲವು ಜಿಲ್ಲೆಗಳು ಒಂದೊಂದು ವಿಶೇಷತೆಗಳನ್ನು ಪಡೆದಿವೆ.

ಇನ್ನು ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರವಾಸೋದ್ಯಮದ ಮೂಲಕ ಅತೀ ಹೆಚ್ಚು ಆದಾಯ ಬರುತ್ತದೆ. ಇನ್ನು ಕೆಲವು ಜಿಲ್ಲೆಗಳಿಗೆ ತಂತ್ರಜ್ಞಾನ, ವಿಜ್ಞಾನ, ಶಿಕ್ಷಣಕ್ಕೆ, ವಾಣಿಜ್ಯ ಕ್ಷೇತ್ರಗಳಿಂದ ಆದಾಯ ಹರಿದುಬರುತ್ತದೆ. ಹಾಗಾದರೆ 2024ನೇ ಸಾಲಿನಲ್ಲಿ ಯಾವೆಲ್ಲ ಜಿಲ್ಲೆಗಳು ಎಷ್ಟು ತಲಾ ಆದಾಯವನ್ನು ಒಳಗೊಂಡಿದೆ ಹಾಗೂ ಈ ಪೈಕು ಟಾಪ್ 3 ಶ್ರೀಮಂತ ಜಿಲ್ಲೆಗಳು ಯಾವುವು ಅಂತಲೂ ಇಲ್ಲಿ ಮಾಹಿತಿ ನೀಡಲಾಗಿದೆ ತಿಳಿಯಿರಿ.
ತಲಾ ಆದಾಯ ಲೆಕ್ಕದಲ್ಲಿ ನೋಡುವುದಾದರೆ, ಕಲಬುರಗಿ- 1,39,361 ರೂಪಾಯಿ, ಬೆಳಗಾವಿ- 1,49,710, ಬೀದರ್- 1,52,141, ಕೊಪ್ಪಳ- 1,52,489, ಯಾದಗಿರಿ-1,53,247, ಹಾವೇರಿ- 1,57,931, ವಿಜಯನಗರ- 1,59,868, ರಾಯಚೂರು- 1,64,705, ವಿಜಯಪುರ- 1,69,253, ಗದಗ- 1,69,704, ಚಿತ್ರದುರ್ಗ- 1,77,777, ಕೋಲಾರ- 1,87,284, ದಾವಣಗೆರೆ- 1,93,151 ರೂಪಾಯಿ ತಲಾ ಆದಾಯವನ್ನು ಹೊಂದಿವೆ.
ಚಿಕ್ಕಬಳ್ಳಾಪುರ- 2,00,424, ಚಾಮರಾಜನಗರ- 2,02,494, ಮೈಸೂರು- 2,15,398, ಉತ್ತರ ಕನ್ನಡ- 2,20,984, ಬಾಗಲಕೋಟೆ- 2,26,482, ಧಾರವಾಡ- 2,31,939, ಮಂಡ್ಯ- 2,37,220, ಹಾಸನ- 2,38,029, ತುಮಕೂರು- 2,45,735, ರಾಮನಗರ- 2,49,998, ಕೊಡಗು- 2,60,558, ಬಳ್ಳಾರಿ-2,78,538, ಶಿವಮೊಗ್ಗ- 2,90,893, ಬೆಂಗಳೂರು ಗ್ರಾಮಾಂತರ- 2,91,083, ಚಿಕ್ಕಮಗಳೂರು-3,77,968, ಉಡುಪಿ- 4,54,274, ದಕ್ಷಿಣ ಕನ್ನಡ- 4,92,074, ಬೆಂಗಳೂರು ನಗರ- 7,60,362,
ಟಾಪ್ 3 ಶ್ರೀಮಂತ ನಗರಳು ಹಾಗೂ ತಲಾ ಆದಾಯ
1. ಬೆಂಗಳೂರು ನಗರ- ₹7,60,362
2. ದಕ್ಷಿಣ ಕನ್ನಡ- ₹4,92,074
3. ಉಡುಪಿ- ₹4,54,274
ಬೆಂಗಳೂರು ನಗರ: ಈ ಮೂರು ಜಿಲ್ಲೆಗಳು ಸಹ ಒಂದೊಂದು ವಿಶೇಷತೆಯನ್ನು ಹೊಂದಿವೆ. ಬೆಂಗಳೂರು ನಗರ ಐಟಿ ಸಿಟಿ, ತೋಟಗಳ ನಗರಿ, ಸಿಲಿಕಾನ್ ಸಿಟಿ ಹೀಗೆ ಹಲವು ಹೆಸರುಗಳನ್ನು ಒಳಗೊಂಡಿದೆ. ಅಲ್ಲದೆ ನಗರದ ಒಳಗಡೆ ಹಾಗೂ ಸುತ್ತಮುತ್ತ ಪ್ರವಾಸಿ ತಾಣಗಳನ್ನು, ದೊಡ್ಡ ದೊಡ್ಡ ಕಂಪನಿಗಳನ್ನು ಕೂಡ ಹೊಂದಿದೆ. ಆದ್ದರಿಂದ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುವ ಮೂಲಕ ತಲಾ ಆದಾಯದಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ.
ದಕ್ಷಿಣ ಕನ್ನಡ: ಈ ಜಿಲ್ಲೆ ಪ್ರಮುಖ ಪ್ರವಾಸಿ ತಾಣಗಳು, ಮೀನುಗಾರಿಗೆ ಮೂಲಕ ಗುರುತಿಸಿಕೊಂಡಿದೆ. ಅಲ್ಲದೆ, ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡುತ್ತಲೇ ಬಂದಿದ್ದು, ಅತೀ ಬುದ್ಧಿವಂತರು ಇರುವ ಜಿಲ್ಲೆ ಎನಿಸಿಕೊಂಡಿದೆ. ಇಲ್ಲಿ ಪ್ರಮುಖ ಆದಾಯ ಬರುವುದೇ ಮೀನುಗಾರಿಕೆ, ಪ್ರವಾಸಿ ತಾಣಗಳಿಂದ. ಹೀಗೆ ಈ ಜಿಲ್ಲೆ ಅತೀ ಹೆಚ್ಚು ತಲಾ ಆದಾಯದಲ್ಲಿ ಇಡೀ ರಾಜ್ಯದಲ್ಲೇ 2ನೇ ಸ್ಥಾನವನ್ನು ಅಲಂಕರಿಸಿದೆ.
ಉಡುಪಿ: ಈ ಜಿಲ್ಲೆಯಲ್ಲಿ ಪ್ರಮುಖ ಆದಾಯ ಮೀನುಗಾರಿಕೆಯೇ ಆಗಿದ್ದು, ಜೊತೆಗೆ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆ ಇದಾಗಿದೆ. ಈ ಕ್ಷೇತ್ರಗಳ ಮೂಲಕ ಆದಾಯ ಹರಿದುಬರುತ್ತದೆ. ಈ ಮೂಲಕ ಅತೀ ಹೆಚ್ಚು ತಲಾ ಆದಾಯದಲ್ಲಿ ಇದು ಇಡೀ ರಾಜ್ಯದಲ್ಲೇ 3ನೇ ಸ್ಥಾನ ಪಡೆದುಕೊಂಡಿದೆ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications