Get Updates
Get notified of breaking news, exclusive insights, and must-see stories!

‘ಯಡಿಯೂರಪ್ಪನವರ ಮಗ ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ "ಯಡಿಯೂರಪ್ಪನವರ ಮಗ"ನಿಗೆ ಅಭಿನಂದನೆಗಳು’

ಅಂತೂ, ಇಂತೂ ಕರ್ನಾಟಕ ಬಿಜೆಪಿಗೆ ಹೊಸ ಮನ್ವಂತರ ಆರಂಭವಾಗಿದೆ. ಅದರಲ್ಲೂ, ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಬಳಿಕ. ಅಂದ್ರೆ ಸುಮಾರು 6 ತಿಂಗಳಿಂದಲೂ ಒಳಜಗಳದಲ್ಲೇ ನೋವು ತಿಂದಿದ್ದ ಕಮಲ ಪಾಳಯಕ್ಕೆ ಖುಷಿಪಡುವ ಸುದ್ದಿ ಸಿಕ್ಕಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕೂಡ ಮಾತನಾಡಿದ್ದು, ಬಿಜೆಪಿ ನಾಯಕರನ್ನು ಪರೋಕ್ಷವಾಗಿ ಕೆಣಕಿದೆ. ಹಾಗಾದರೆ ಬಿ.ವೈ.ವಿಜಯೇಂದ್ರಗೆ ಕಾಂಗ್ರೆಸ್ ವಿಶ್ ಮಾಡಿದ್ದು ಹೇಗಿತ್ತು?

ಕರ್ನಾಟಕ ಬಿಜೆಪಿಯಲ್ಲಿ ಹಲವು ದಿನದ ಗೊಂದಲಕ್ಕೆ ತೆರೆಬಿದ್ದಿದೆ. 6 ತಿಂಗಳಿಂದ ಎದ್ದಿದ್ದ ತಳಮಳಕ್ಕೆ ಉತ್ತರ ಸಿಕ್ಕಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ನಂತರ, ಮಹತ್ವದ ಬೆಳವಣಿಗೆ ಇಂದು ನಡೆದಿದೆ. ಕರ್ನಾಟಕ ಮಾಜಿ ಸಿಎಂ & ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ 'ಝೀರೋ ಟು ಹೀರೋ' ಸ್ಥಾನಕ್ಕೆ ತಂದು ನಿಲ್ಲಿಸಿರುವ ಯಡಿಯೂರಪ್ಪ ಅವರ ಮಾತಿಗೆ ಬಿಜೆಪಿ ಹೈಕಮಾಂಡ್ ಮಣೆಹಾಕಿದೆ. ಯಡಿಯೂರಪ್ಪ ಅವರ ಪುತ್ರನಿಗೆ ಬಿಜೆಪಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಹೀಗಿದ್ದಾಗ ಕರ್ನಾಟಕದ ಕಾಂಗ್ರೆಸ್ ಘಟಕ, ಬಿ.ವೈ.ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಕುಹಕವಾಡಿದೆ.

new-president-of-karnataka-bjp

ವಿಜಯೇಂದ್ರ ಆಯ್ಕೆ ಬಗ್ಗೆ ಕಾಂಗ್ರೆಸ್ ಮಾತು

ಕರ್ನಾಟಕ ಬಿಜೆಪಿಗೆ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ವಿಜಯೇಂದ್ರ ಅವರ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, '"ಯಡಿಯೂರಪ್ಪನವರ ಮಗ" ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ "ಯಡಿಯೂರಪ್ಪನವರ ಮಗ"ನಿಗೆ ಅಭಿನಂದನೆಗಳು.. "ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ" ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ!' ಎಂದಿದೆ ಕರ್ನಾಟಕದ ಕಾಂಗ್ರೆಸ್ ಘಟಕ. ಈ ಮೂಲಕ ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಿನವೇ, ಕುಟುಂಬ ರಾಜಕಾರಣದ ಅಸ್ತ್ರ ಪ್ರಯೋಗ ಮಾಡಿದೆ ಕಾಂಗ್ರೆಸ್.

ಏನಿದು ಬಿಜೆಪಿ ಹೊಸ ರಣತಂತ್ರ?

ಕರ್ನಾಟಕ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ, ಒಳ ಜಗಳವೂ ಶುರುವಾಗಿತ್ತು. ಆದರೆ ಇವರನ್ನ ಕಂಟ್ರೋಲ್ ಮಾಡಿ ಕೂರಿಸಲು ಒಬ್ಬ ಹಿರಿಯ ನಾಯಕ ಇರಲಿಲ್ಲ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು, ನಿವೃತ್ತರಾದ ನಂತರ ಲೋಕಸಭೆ ಚುಣಾವಣೆ ಭವಿಷ್ಯದ ಬಗ್ಗೆ ಭಯ ಆವರಿಸಿತ್ತು. ಈಗ ಅದನ್ನ ಸರಿ ಮಾಡುವ ಉದ್ದೇಶದಿಂದ, ವರಿಷ್ಠರು ತೆಗೆದುಕೊಂಡಿದ್ದ ಎಲ್ಲಾ ತಪ್ಪು ನಿರ್ಧಾರಗಳಿಗೆ ಒಂದೇ ಮದ್ದು ಎನ್ನವಂತೆ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ಅಧಿಕಾರ ನೀಡಲಾಗಿದೆ.

new-president-of-karnataka-bjp

ಬಿಜೆಪಿ ನಾಯಕರನ್ನು ಕೆಣಕುತ್ತಿದ್ದ ಕಾಂಗ್ರೆಸ್!

ಇದಕ್ಕೂ ಮೊದಲು ಕರ್ನಾಟಕ ಕಾಂಗ್ರೆಸ್ ಘಟಕ, ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ & ವಿಪಕ್ಷ ನಾಯಕನ ಆಯ್ಕೆ ವಿಚಾರವನ್ನೇ ಪ್ರಸ್ತಾಪ ಮಾಡಿ ತಿರುಗೇಟು ಕೊಡುತ್ತಿತ್ತು. ಈ ಎಲ್ಲ ಬೆಳವಣಿಗೆಯು ಬಿಜೆಪಿ ನಾಯಕರಿಗೆ ಭಾರಿ ಹಿನ್ನಡೆ ಉಂಟು ಮಾಡಿತ್ತು. ಅದರಲ್ಲೂ ಪದೇ ಪದೆ ಇದೇ ಮಾತನ್ನು ಹೇಳುತ್ತಿದ್ದ ಕಾಂಗ್ರೆಸ್, ಬಿಜೆಪಿ ನಾಯಕರನ್ನು ಕೆಣಕುತ್ತಿತ್ತು. ಇದೀಗ ನೂತನ ರಾಜ್ಯಾಧ್ಯಕ್ಷರು ಆಯ್ಕೆಯಾದರೂ, ಮತ್ತೊಂದು ಅಸ್ತ್ರ ಪ್ರಯೋಗಿಸಿದೆ ಕೈ ಪಾಳಯ. ಹೀಗಾಗಿ ರಾಜ್ಯ ರಾಜಕೀಯ ರಣರಂಗ ಮತ್ತಷ್ಟು ರಂಗೇರಿದೆ.

ಒಟ್ನಲ್ಲಿ ಕಾಂಗ್ರೆಸ್ ವಿರುದ್ಧ ಇಷ್ಟುದಿನ ಕರ್ನಾಟಕ ಬಿಜೆಪಿ ಸಪ್ಪೆಯಾಗಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣ ಬಿಟ್ಟು, ನಿವೃತ್ತಿ ಪಡೆದ ನಂತರ ಕಾಂಗ್ರೆಸ್ ನಾಯಕರು ಭರ್ಜರಿ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಇದೀಗ ಖುದ್ದು ಯಡಿಯೂರಪ್ಪ ಅವರ ಪುತ್ರನಿಗೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನ ನೀಡಲಾಗಿದೆ. ಹೀಗಾಗಿ ಅಸಲಿ ಆಟ ಈಗ ಶುರುವಾಗಿದೆ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+