ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ತಾರಕಕ್ಕೇರಲಿದೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಆಗಸ್ಟ್ 29: ಕರ್ನಾಟಕದಲ್ಲಿ ಪ್ರತಿನಿತ್ಯ 8-9 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ.

ಸೆಪ್ಟೆಂಬರ್ ಅಂತ್ಯದ ಹೊತ್ತಿಗೆ ತಾರಕ್ಕೇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ 28 ರಂದು ಹೊಸದಾಗಿ 8960 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.

ಒಂದೇ ದಿನ 136 ಮಂದಿ ಸಾವನ್ನಪ್ಪಿದ್ದಾರೆ, 7464 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 86347 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 227018 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 5368 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 318752 ಮಂದಿ ಕೊರೊನಾ ಸೋಂಕಿತರಿದ್ದಾರೆ. 754 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ಮತ್ತೆ 8960 ಕೊರೊನಾ ಸೋಂಕಿತರು ಪತ್ತೆ ಕರ್ನಾಟಕದಲ್ಲಿ ಮತ್ತೆ 8960 ಕೊರೊನಾ ಸೋಂಕಿತರು ಪತ್ತೆ

ಬಾಗಲಕೋಟೆ 148, ಬಳ್ಳಾರಿ 484, ಬೆಳಗಾವಿ 290, ಬೆಂಗಳೂರು ಗ್ರಾಮಾಂತರ 214, ಬೆಂಗಳೂರು ನಗರ 2721, ಬೀದರ್ 60, ಚಾಮರಾಜನಗರ 37, ಚಿಕ್ಕಬಳ್ಳಾಪುರ 124, ಚಿಕ್ಕಮಗಳೂರು136, ಚಿತ್ರದುರ್ಗ 150, ದಕ್ಷಿಣ ಕನ್ನಡ 448, ದಾವಣಗೆರೆ 379, ಧಾರವಾಡ 299, ಗದಗ 169, ಹಾಸನ 357,ಹಾವೇರಿ 132, ಕಲಬುರಗಿ 222, ಕೊಡಗು 28,ಕೋಲಾರ 74, ಕೊಪ್ಪಳ 217, ಮಂಡ್ಯ 188, ಮೈಸೂರು 726, ರಾಯಚೂರು 178,ರಾಮನಗರ 87, ಶಿವಮೊಗ್ಗ 314, ತುಮಕೂರು 250, ಉಡುಪಿ 176, ಉತ್ತರ ಕನ್ನಡ 147, ವಿಜಯಪುರ 139, ಯಾದಗಿರಿ 66 ಪ್ರಕರಣಗಳು ಪತ್ತೆಯಾಗಿವೆ.

ಕರ್ನಾಟಕ ಇನ್ನೂ ಗರಿಷ್ಠ ಪ್ರಕರಣಗಳನ್ನು ಕಂಡಿಲ್ಲ

ಕರ್ನಾಟಕ ಇನ್ನೂ ಗರಿಷ್ಠ ಪ್ರಕರಣಗಳನ್ನು ಕಂಡಿಲ್ಲ

ಆದರೆ ರಾಜ್ಯ ಇನ್ನೂ ಅತ್ಯಂತ ಗರಿಷ್ಠ ಕೊವಿಡ್-19 ಪ್ರಕರಣಗಳನ್ನು ಕಂಡಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಸಾಂಕ್ರಾಮಿಕ ರೋಗಾಣು ಸೆಪ್ಟೆಂಬರ್ ಕೊನೆಯ ವೇಳೆಗೆ ಅಥವಾ ಅಕ್ಟೋಬರ್ ಆರಂಭದಲ್ಲಿ ಅತಿ ವೇಗದಲ್ಲಿ ಹರಡಲಿದೆ ಎಂದು ತಜ್ಞರು ಹೇಳುತ್ತಾರೆ.

 ಸೆಪ್ಟೆಂಬರ್ 30ರ ಹೊತ್ತಿಗೆ ಸೋಂಕು ಹೆಚ್ಚಳ

ಸೆಪ್ಟೆಂಬರ್ 30ರ ಹೊತ್ತಿಗೆ ಸೋಂಕು ಹೆಚ್ಚಳ

ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ತಂಡ ನಡೆಸಿರುವ ಅಧ್ಯಯನ ಪ್ರಕಾರ ಸೆಪ್ಟೆಂಬರ್ 30ರ ಹೊತ್ತಿಗೆ 26 ಲಕ್ಷ ಒಟ್ಟು ಸೋಂಕಿತ ಪ್ರಕರಣಗಳು ಆಗಬಹುದು ಎಂದು ಹೇಳಿದೆ. ಅಂಕಿ ವಿಜ್ಞಾನಗಳ ಅಧ್ಯಕ್ಷ ಪ್ರೊ. ಶಶಿಕುಮಾರ್ ಗಣೇಶನ್ ಅವರ ಪ್ರಕಾರ, ಆರು ಆಯಾಮಗಳಲ್ಲಿ ನಾವು ಅಧ್ಯಯನ ನಡೆಸಿದ್ದು, ದೇಶದಲ್ಲಿ ಕೋವಿಡ್- 19 ಸಾಂಕ್ರಾಮಿಕ ರೋಗಗಳಿಗೆ ಅಂಕಿಅಂಶ ಆಧಾರಿತ ಕಂಪ್ಯೂಟೇಶನಲ್ ಮಾದರಿ ಮೂಲಕ ಅಧ್ಯಯನ ನಡೆಸಿದ್ದೇವೆ ಎಂದಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕಡಿಮೆ

ಗ್ರಾಮೀಣ ಪ್ರದೇಶದಲ್ಲಿ ಕಡಿಮೆ

ಮೆಟ್ರೊ ಪಾಲಿಟನ್ , ಅರೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟೊಂದು ಕಂಡುಬರುತ್ತಿಲ್ಲ. ಅಕ್ಟೋಬರ್ ಅಂತ್ಯದ ವೇಳೆಗೆ ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ ಎನ್ನುತ್ತಾರೆ ರಾಜ್ಯ ಸಲಹಾ ಸಮಿತಿಯ ಸದಸ್ಯ ಮತ್ತು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಗಿರಿಧರ ಆರ್ ಬಾಬು.

ನಿಖರವಾಗಿ ಹೇಳುವುದು ಕಷ್ಟ

ನಿಖರವಾಗಿ ಹೇಳುವುದು ಕಷ್ಟ

ಸಾಂಕ್ರಾಮಿಕ ಮುಂದಿನ ದಿನಗಳಲ್ಲಿ ಯಾವ ಮಟ್ಟದಲ್ಲಿ ಇರಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಈಗಿರುವ ಟ್ರೆಂಡ್ ನೋಡಿ ಅಂದಾಜು ಹಾಕಬಹುದು. ಕೋವಿಡ್-19 ಸತತವಾಗಿ ಕಡಿಮೆಯಾಗುತ್ತಾ ಹೋದರೆ ಸಾಂಕ್ರಾಮಿಕದ ಮಟ್ಟ ಇಳಿಕೆಯಾಗುತ್ತಿದೆ ಎನ್ನಬಹುದು. ಒಂದೊಂದು ದಿನ ಒಂದೊಂದು ರೀತಿಯಿದ್ದರೆ ನಿಯಂತ್ರಣಕ್ಕೆ ಬಂದಿಲ್ಲವೆಂದೇ ಅರ್ಥ ಎನ್ನುತ್ತಾರೆ ಪ್ರೊ.ಗಣೇಶನ್.

ಆಗಸ್ಟ್ 6ರವರೆಗೆ ಸಂಗ್ರಹಿಸಿರುವ ದಾಖಲೆಗಳ ಪ್ರಕಾರ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಆರಂಭದ ವೇಳೆಗೆ ನಮ್ಮ ರಾಜ್ಯ ಸೇರಿದಂತೆ ದೇಶದಲ್ಲಿ ಕೊವಿಡ್-19 ಪ್ರಕರಣ ಹೆಚ್ಚಾಗಲಿದೆ.

English summary
On Thursday, Karnataka reported 9,386 Covid-19 positive cases, which was yet another single-day highest, taking the total to 3,09,792. But worryingly, the state has not yet hit the peak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X