Exit Poll Result 2024 Karnataka: ಏಷಿಯಾನೆಟ್‌ ಸಮೀಕ್ಷೆಯಲ್ಲಿ ಯಾರಿಗೆ ಕಿರಿಟ?

Exit Poll Prediction 2024 Karnataka: ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಇಂದು (ಜೂನ್‌ 01) ಎಲ್ಲಾ ಹಂತದ ಮತದಾನ ಮುಕ್ತಾಯವಾಗಿದೆ. ಈ ಪೈಕಿ ಕರ್ನಾಟಕದಲ್ಲಿ ಮೇ 7 ಮತ್ತು 26ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ಇನ್ನು ಇಂದಿ (ಜೂನ್‌ 01)ಗೆ ಎಲ್ಲಾ ಹಂತಗಳಲ್ಲಿಯೂ ಮತದಾನ ಮುಕ್ತಯವಾಗಿದ್ದು, ಈ ಬಗ್ಗೆ ಏ‍ಷಿಯನ್ ನೆಟ್‌ವರ್ಕ್‌ ನಡೆಸಿದ ಚುನಾಚಣೋತ್ತರ ಸಮೀಕ್ಷೆ ಫಲಿತಾಂಶ ಇಲ್ಲಿದೆ.

Exit Poll Predition 2024 Asianet Exit Poll Karnataka Result

ಜನ್‌ ಕಿ ಬಾತ್‌ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ ಬಿಜೆಪಿ 19ರಿಂದ 20 ಸ್ಥಾನ ಗೆಲ್ಲಿಲಿದೆ ಎಂದಿದೆ. ಕಳೆದ ಚುನಾವಣೆಯಲ್ಲಿ 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಗರಿಷ್ಠ 7 ಸ್ಥಾನ ಗೆಲ್ಲಲಿದೆ ಎಂದಿದೆ. ಇತ್ತ ಬಿಜೆಪಿ ಜೊತೆ ಮೈತ್ರಿ ಮಾಡಿರುವ ಜೆಡಿಎಸ್ 2ರಿಂದ 3 ಸ್ಥಾನ ಗೆಲ್ಲಲಿದೆ ಎಂದಿದೆ.

ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಎನ್‌ಡಿಎ ಮೈತ್ರಿ ಕೂಟಕ್ಕೆ 24 ಸ್ಥಾನಗಳು ಸಿಗಬಹುದು ಎಂದು ಟುಡೇಸ್ ಚಾಣಕ್ಯ ಸಮೀಕ್ಷೆ ಹೇಳಿದೆ. ಇದರಲ್ಲಿ 4 ಸ್ಥಾನಗಳು ಹೆಚ್ಚು-ಕಡಿಮೆ ಆಗಬಹುದಾಗಿದೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ 4 ಸ್ಥಾನಗಳು ಬರಲಿವೆ ಎಂದು ಅಂದಾಜಿಸಿದೆ. ಇಲ್ಲಿಯೂ 4 ಸ್ಥಾನಗಳು ಹೆಚ್ಚು ಕಡಿಮೆ ಆಗಬಹುದು ಅನ್ನೋದು ಟುಡೇಸ್ ಚಾಣಕ್ಯ ಅಂದಾಜು ಆಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 353 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಪಕ್ಷವೊಂದೇ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಯುಪಿಎ ಮೈತ್ರಿಕೂಟ 91 ಸ್ಥಾನಗಳಲ್ಲಿ ಗೆದ್ದಿತ್ತು. ಈ ಪೈಕಿ ಕಾಂಗ್ರೆಸ್ ಪಕ್ಷ ಕೇವಲ 52 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನುಳಿದ 99 ಸ್ಥಾನಗಳಲ್ಲಿ ಇತರ ಪಕ್ಷಗಳು ಹಾಗೂ ಪಕ್ಷೇತರರು ವಿಜಯ ಸಾಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+