ಜೆಡಿಎಸ್ ಪಕ್ಷ ತೊರೆದ ಎ.ಟಿ.ರಾಮಸ್ವಾಮಿ ಬಿಜೆಪಿ ಸೇರ್ಪಡೆ
ಬೆಂಗಳೂರು, ಏಪ್ರಿಲ್1: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ಇತ್ತ 2023 ರ ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯ ಕಣವನ್ನಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಇತ್ತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕವನ್ನು ಪ್ರಕಟಿಸಿದೆ. ಕರ್ನಾಟಕದಲ್ಲಿ ಮೇ 10, 2023 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಮತ್ತು ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಇನ್ನೂ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರಿತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಜೋರಾಗಿ ಸದ್ದು ಮಾಡುತ್ತಿದೆ. ಇತ್ತ ಹಳೇ ಮೈಸೂರು ಭಗದ ಮೇಲೆ ಕಣ್ಣೀಟ್ಟಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮಂಡ್ಯ ಹಾಗೂ ಹಾಸನ ಭಾಗದ ಜೆಡಿಎಸ್ ಅಸಮಾಧಾನಿತ ನಾಯಕರಿಗೆ ಗಾಳ ಹಾಕುತ್ತಿದ್ದಾರೆ.

ಈಗಾಗಲೇ ಜೆಡಿಎಸ್ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ದ ಅಸಮಾಧಾನಗೊಂಡಿರುವ ಅರಕಲಗೂಡು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವೂ ಎ.ಮಂಜು ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಹೀಗಾಗಿ ಎ.ಟಿ.ರಾಮಸ್ವಾಮಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಅವರು ತಮ್ಮ ರಾಜೀನಾಮೆ ಘೋಷಿಸಿದ್ದಾರೆ.
ಇನ್ನೂ ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ನೇತೃತ್ವದಲ್ಲಿ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಬಿಜೆಪಿ ಪಕ್ಷವನ್ನ ಸೇರ್ಪಡೆಯಾಗಿದ್ದಾರೆ. ಈ ವೇಳೆ ಅನುರಾಗ್ ಸಿಂಗ್ ಠಾಕೂರ್ ಅವರು ಸದಸ್ಯತ್ವ ರಸೀದಿ ನೀಡಿ, ಶಾಲು ಹೋದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ರಾಮಸ್ವಾಮಿ ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ, ದೇಶದ ಅತಿದೊಡ್ಡ ಪಕ್ಷವನ್ನು ಅವರು ಸೇರಿದ್ದಾರೆ, ಅವರ ಸೇರ್ಪಡೆಯಿಂದ ಬಿಜೆಪಿಗೂ ಶಕ್ತಿ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ಹೆಚ್ಚು ಕೆಲಸ ಮಾಡಿದೆ, ನಮ್ಮ ಪಕ್ಷ ಸೇರಿದ ಮೇಲೆಯೂ ಸಹ ಒಳ್ಳೆಯ ಕೆಲಸಗಳನ್ನ ಮುಂದುವರಿಸಲಿ ಎಂದು ಶುಭ ಕೋರಿದರು.
ಇನ್ನೂ ಬಿಜೆಪಿ ಪಕ್ಷ ಸೇರ್ಪಡೆಯ ಬಳಿಕ ಎ.ಟಿ ರಾಮಸ್ವಾಮಿ ಮಾತನಾಡಿ, ಬಿಜೆಪಿ ಗೆ ಸೇರ್ಪಡೆಯಾಗುತ್ತಿರುವುದು ಖುಷಿ ಸಂಗತಿ. ಮೋದಿ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸೇರಿ ಹಲವರು ಜೊತೆ ಕೆಲಸ ಮಾಡುವುದು ಖುಷಿ ಸಂಗತಿ, ಯಾವುದೇ ಷರತ್ತುಗಳು ಇಲ್ಲದೆ ನಾನು ಸೇರ್ಪಡೆ ಯಾಗಿದ್ದೇನೆ. ನಾನು ಎಂ ಎಲ್ ಎ ಆಕಾಂಕ್ಷಿ ಅಲ್ಲ. ನಾನು ಯಾವುದೇ ಕಂಡೀಶನ್ ಹಾಕಿ ಬಿಜೆಪಿಗೆ ಬಂದಿಲ್ಲ

ಇವತ್ತು ಸಂಜೆ ಮತ್ತೆ ನಾಳೆ ಬೆಳಿಗ್ಗೆ ಮೋದಿಜಿ ಹಾಗೂ ಗೃಹ ಮಂತ್ರಿಗಳನ್ನ ಮತ್ತು ರಾಷ್ಟ್ರೀಯ ಅಧ್ಯಕ್ಷರನ್ನ ಭೇಟಿ ಮಾಡಳಿದ್ದೇನೆ. ನನಗೆ ಬಹಳ ಸಂತೋಷ ಆಗ್ತಾ ಇದೆ, ಯಾಕಂದ್ರೆ ನಮ್ಮ ಭಾರತ ರಾಷ್ಟ್ರ ಇಡೀ ವಿಶ್ವದಲ್ಲಿ ದಾಪುಗಾಲು ಹಾಕ್ತಾ ಇದೆ. ಇದ್ಕೆ ಕಾರಣ ಮೋದಿ ಹಾಗೂ ಬಿಜೆಪಿ ಪಕ್ಷ. ನಾನು 2006-07 ರಲ್ಲಿ ಭೂ ಗಳ್ಳರ ವಿರುದ್ಧ ವರದಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.












Click it and Unblock the Notifications