Basavaraj Bommai: ಎಲ್ಲರೂ ಏನ್ ಇಷ್ಟು ಸಿಂಪಲ್ ಆಗಿದ್ದೀರಿ ಅಂತ ಕೇಳ್ತಾರೆ: ಬಸವರಾಜ ಬೊಮ್ಮಾಯಿ, ವಿಡಿಯೋ ವೈರಲ್
ಹಾವೇರಿ: ಎಲ್ಲರೂ ಏನ್ ಇಷ್ಟು ಸಿಂಪಲ್ ಆಗಿದ್ದೀರಿ ಅಂತ ಕೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಇದೀಗ ಬಸವರಾಜ ಬೊಮ್ಮಾಯಿ ಅವರು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಟಿವಿಯಲ್ಲಿ ಸಣ್ಣ ಮಗು ಒಂದು ಪ್ರಶ್ನೆ ಕೇಳಿತು, ನಾನು ಆ ಮಗುವಿನ ಮನಸ್ಸು ಅರ್ಥ ಮಾಡಿಕೊಂಡೆ ಅಲ್ಲದೇ ನನ್ನ ಮನಸಲ್ಲಿಯೂ ಅದೇ ಭಾವನೆ ಇತ್ತು. ಸಿಎಂ ಅಂದರೆ ಕಾಮನ್ ಮ್ಯಾನ್ ಅಂತ. ಕೆಲವು ಕಡೆ ನಮ್ಮ ಗನ್ ಮ್ಯಾನ್ ಇಲ್ಲದೇ ನಾನು ಓಡಾಡುತ್ತೆನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಎಲ್ಲರೂ ಏನ್ ಇಷ್ಟು ಸಿಂಪಲ್ ಆಗಿದ್ದೀರಿ ಅಂತ ಕೇಳುತ್ತಾರೆ. ಅಧಿಕಾರ ಬಂದಾಗ ಬಹಳ ಜನರು ಸಂಬಧಿಕರಾಗಿತ್ತಾರೆ, ಸ್ನೇಹಿತರಾಗುತ್ತಾರೆ. ಅಧಿಕಾರ ಮತ್ತು ಹಣ ಕಾಕ್ ಟೈಲ್ ಇದ್ದಹಾಗೆ ಅದರ ಹಿಂದೆ ಹೊರಟರೆ ಅದು ನಿಮಗೆ ನಿಶೆ ತರುತ್ತದೆ. ಇದೆಲ್ಲವನ್ನು ನಿಯಂತ್ರಣ ಮಾಡಿ ಸಮಾಜ ಸೇವೆ ಮಾಡಬೇಕು.

ನಾನು ಶಾಸಕನಾಗಿ ಬಂದ ಮೇಲೆ ಶಾಲೆಗಳಿಗೆ ಶಿಕ್ಷಕರು ಇರಲಿಲ್ಲ. ನಾನು ನಮ್ಮ ಟ್ರಸ್ಟ್ ನಿಂದ ಹಳ್ಳಿಯಲ್ಲಿ ಬಿಎಸ್ಸಿ ಎಂಎಸ್ಸಿ ಮಾಡಿದವರಿಗೆ ತರಬೇತಿ ನೀಡಿ ಅವರಿಂದ ಪಾಠ ಮಾಡಿಸಿ ಅವರಿಗೆ ಸಂಬಳ ಕೊಟ್ಟೆ. ಮಕ್ಕಳಿಗೆ ಸ್ಕಾಲರ್ ಶಿಪ್, ಎಸ್ಸಿ ಎಸ್ಟಿ ಮಕ್ಕಳಿಗೆ ಸ್ಕಾಲರ್ ಶಿಪ್ ಆಸ್ಪತ್ರೆಗಳಿಗೆ ಅಂಬುಲೆನ್ಸ್ ಕೊಡಿಸಿದ್ದೆ. ಹೆಲ್ತ್ ಕ್ಯಾಂಪ್ ಮಾಡಿದೆವು ಹೃದ್ರೋಗ ಖಾಯಿಲೆ ಇರುವ ಜನರಿಗೆ ಪ್ರತ್ಯೇಕ ತಪಾಸಣೆ, ಕ್ಯಾನ್ಸರ್ ರೋಗಿಗಳಿಗೆ ಪ್ರತ್ಯೇಕ ತಪಾಸಣೆ ಮಾಡಿಸಿದ್ದೇನೆ. ಈಗ ಮತ್ತೆ ಆರಂಭಿಸುತ್ತೇನೆ.
ಶಿಗ್ಗಾವಿ ತಾಲ್ಲೂಕಿನ ಜನರ ಋಣ ನಾನು ಸಾಯುವವರೆಗೂ ಮರೆಯುವುದಿಲ್ಲ ನನಗೆ ಎಲ್ಲಿಯವರೆಗೂ ಶಕ್ತಿ ಇರುತ್ತದೆ ಅಲ್ಲಿಯವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿಗೆ ಅಭಿನಂದನೆ ಸಲ್ಲಿಸುತ್ತೇನೆ
ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಶ್ವ ಅತ್ಯಂತ ಅಭದ್ರತೆಯ ಸನ್ನಿವೇಶದಲ್ಲಿ ಕೂಡಿರುವ ಸಂದರ್ಭದಲ್ಲಿ ಭಾರತವನ್ನು ಅತ್ಯಂತ ಸದೃಢವಾಗಿರುವ ಆರ್ಥಿಕ ಶಕ್ತಿಯಾಗಿ ಮಾಡುತ್ತಿರುವಂಥದ್ದು, ಶೇ 7.5% ರಷ್ಟು ಆರ್ಥಿಕ ಬೆಳವಣಿಗೆ ಕಂಡಿರುವುದು ಭಾರತ ವಿಶ್ವದಲ್ಲಿಯೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಇವತ್ತು ಯುರೋಪಿಯನ್ ಯುನಿಯನ್ ಜೊತೆ ಅಂದರೆ ಸುಮಾರು 27 ದೇಶಗಳ ಒಕ್ಕೂಟದ ಜೊತೆಗೆ ಫ್ರೀ ಟ್ರೇಡ್ ಅಗ್ರಿಮೆಂಟ್ (ಎಫ್ ಟಿಎ) ನ್ನು ಮಾಡಿರುವುದು ಐತಿಹಾಸಿಕವಾಗಿದೆ. ಒಂದು ದೊಡ್ಡ ಒಕ್ಕೂಟ ಮತ್ತು ಒಂದು ದೊಡ್ಡ ದೇಶದ ನಡುವೆ ಎಲ್ಲ ರಂಗದಲ್ಲಿ ಫ್ರೀ ಟ್ರೇಡ್ ಒಪ್ಪಂದ ಆಗಿದ್ದು ಇದರಿಂದ ನಮ್ಮ ಕೃಷಿಗೆ, ವ್ಯಾಪಾರಸ್ಥರಿಗೆ, ವಿಶೇಷವಾಗಿ ಸಣ್ಣ ವ್ಯಾಪಾರಸ್ಥರಿಗೆ ಯುರೋಪಿಯನ್ ಮಾತುಕಟ್ಟೆ ಸುಲಭವಾಗಿ ಸಿಗುವಂತಹ ವ್ಯವಸ್ಥೆ ಆಗಿದೆ.
ನಾನು ಸಿಎಂ ಆಗಿದ್ದಾಗ ಟಿವಿಯಲ್ಲಿ ಸಣ್ಣ ಮಗು ಒಂದು ಪ್ರಶ್ನೆ ಕೇಳಿತು, ನಾನು ಆ ಮಗುವಿನ ಮನಸ್ಸು ಅರ್ಥ ಮಾಡಿಕೊಂಡೆ ಅಲ್ಲದೇ ನನ್ನ ಮನಸಲ್ಲಿಯೂ ಅದೇ ಭಾವನೆ ಇತ್ತು. ಸಿಎಂ ಅಂದರೆ ಕಾಮನ್ ಮ್ಯಾನ್ ಅಂತ. ಕೆಲವು ಕಡೆ ನಮ್ಮ ಗನ್ ಮ್ಯಾನ್ ಇಲ್ಲದೇ ನಾನು ಓಡಾಡುತ್ತೆನೆ.
— Basavaraj S Bommai (@BSBommai) January 27, 2026
ಎಲ್ಲರೂ ಏನ್ ಇಷ್ಟು ಸಿಂಪಲ್ ಆಗಿದ್ದೀರಿ ಅಂತ ಕೇಳುತ್ತಾರೆ. ಅಧಿಕಾರ ಬಂದಾಗ… pic.twitter.com/oX78T7cdhO
ಇದರಿಂದ ಭಾರತದ ನೂರಾ ನಲವತ್ತು ಕೋಟಿ ಜನರಿಗೆ ಯುರೋಪಿನ ಎಲ್ಲ ದೇಶಗಳ ಜನರ ಜೊತೆ ಬಾಂಧ್ಯವ ಬೆಳೆಯುವುದು ಮತ್ತು ಅಧಿಕ ವ್ಯವಹಾರ ನಡೆಸಲು ಅನುಕೂಲ ಆಗಲಿದೆ. ಇದು ಬೇರೆ ದೇಶಗಳಿಂದ ಅಭದ್ರತೆ, ಟ್ಯಾರಿಫ್ ಹೇರುವುದಕ್ಕೆ ಸರಿಯಾದ ಉತ್ತರ ಮತ್ತು ಮಾರ್ಗವಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅತ್ಯಂತ ಸಮರ್ಥವಾಗಿರುವ ನಿರ್ಣಯ ಕೈಗೊಳ್ಳುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಅವರ ಕನಸು ವಿಕಸಿತ ಭಾರತ ಕಡೆಗೆ ತೆಗೆದುಕೊಂಡು ಹೋಗುವುದಕ್ಕೆ ದೊಡ್ಡ ಹೆಜ್ಜೆ ಇಟ್ಟಂತಾಗಿದೆ ಎಂದಿದ್ದಾರೆ.












Click it and Unblock the Notifications