ಅಭಿವೃದ್ಧಿ, ಪರಿಸರ ಪತ್ರಿಕೋದ್ಯಮ ಪಶಸ್ತಿ ಪ್ರಕಟ

ಬೆಂಗಳೂರು, ಅ.28 : ಕರ್ನಾಟಕ ವಾರ್ತಾ ಇಲಾಖೆಯು ನೀಡುವ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪರ್ತಕರ್ತರನ್ನು ಪ್ರತಿ ವರ್ಷ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

2012 ಮತ್ತು 2013ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಲಾಗಿದೆ. ವಾರ್ತಾ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿನ ತ್ರಿಸದಸ್ಯ ಸಮಿತಿಯು ಅರ್ಹರನ್ನು ಆಯ್ಕೆ ಮಾಡಿದೆ.

Journalism Awards

2012ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಮೈಸೂರಿನ ಕನ್ನಡಪ್ರಭ ಪತ್ರಿಕೆಯ ಹಿರಿಯ ವಿಶೇಷ ವರದಿಗಾರ ಅಂಶಿ ಪ್ರಸನ್ನಕುಮಾರ್ ಹಾಗೂ 2013 ನೇ ಸಾಲಿಗೆ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲಾ ಅವರನ್ನು ಆಯ್ಕೆ ಮಾಡಲಾಗಿದೆ.

2012ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪುತ್ತೂರಿನ ಹವ್ಯಾಸಿ ಪತ್ರಕರ್ತ ಡಾ.ನರೇಂದ್ರ ರೈ ದೇರ್ಲ ಹಾಗೂ 2013 ನೇ ಸಾಲಿನ ಪ್ರಶಸ್ತಿಯನ್ನು ಸಾಗರದ ವಿಜಯವಾಣಿ ವರದಿಗಾರ ದೀಪಕ್ ಸಾಗರ್ ಅವರಿಗೆ ನೀಡಲಾಗುತ್ತದೆ.

ತಾತ್ಕಾಲಿಕ ವೇಳಾಪಟ್ಟಿ ಪ್ರಕಟ : ಕರ್ನಾಟಕ ಲೋಕ ಸೇವಾ ಆಯೋಗದ 9-01-2013 ರ ಅಧಿಸೂಚನೆಯಲ್ಲಿ ಅಧಿಸೂಚಿಸಲಾದ ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿನ ಸಹಾಯಕ ನಿರ್ದೇಶಕರು (ಜೀವಶಾಸ್ತ್ರ ವಿಭಾಗ/ವಿಷವಿಜ್ಞಾನ ವಿಭಾಗ) ಮತ್ತು ವೈಜ್ಞಾನಿಕ ಅಧಿಕಾರಿ (ಜೀವಶಾಸ್ತ್ರ ವಿಭಾಗ/ದಸ್ತಾವೇಜು ವಿಭಾಗ) ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಆಯೋಗದ http://kpsc.kar.nic.in/ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಆಕ್ಷೇಪಣೆಗಳನ್ನು ಸಲ್ಲಿಸಲು ಆಪೇಕ್ಷಿಸುವ ಅಭ್ಯರ್ಥಿಗಳು ಈ ಆಯ್ಕೆಪಟ್ಟಿಗಳನ್ನು ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು - 560 001 ಇವರಿಗೆ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+