5 ನಿಮಿಷದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಿ

ಬೆಂಗಳೂರು, ಜನವರಿ 07 : ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿಶೇಷ ಅಭಿಯಾನವನ್ನು ಆರಂಭಿಸಿದೆ. ಮಿಂಚಿನ ನೋಂದಣಿ ಮೂಲಕ 5 ನಿಮಿಷದಲ್ಲಿ ಹೆಸರನ್ನು ಸೇರಿಸಬಹುದಾಗಿದೆ.

ಶಾಪಿಂಗ್ ಮಾಡುವುದಕ್ಕೆ 30 ನಿಮಿಷವಾದರೂ ಬೇಕು. ಆದರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಲು 5 ನಿಮಿಷ ಸಾಕು ಎಂದು ಚುನಾವಣಾ ಆಯೋಗ ಹೇಳಿದೆ. ಜನವರಿ 8ರ ತನಕ ಹೆಸರನ್ನು ನೋಂದಾಯಿಸಬಹುದಾಗಿದೆ.

ಯುವ ಮತದಾರರು ಇದರ ಸದುಪಯೋಗ ಪಡಿಸಿಕೊಂಡು ಹೆಸರನ್ನು ನೋಂದಾಯಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಿಂಚಿನ ನೋಂದಣಿ ನಡೆಸಲಾಗುತ್ತಿದೆ. ಆನ್‌ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.

Enroll Name To Voter List Till January 8

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಲು ಆಯೋಗ 'ಮಿಂಚಿನ ನೋಂದಣಿ' ಅಭಿಯಾನವನ್ನು ಜನವರಿ 6ರಿಂದ ಆರಂಭಿಸಿದೆ. ಜನವರಿ 8ರ ಬುಧವಾರದ ತನಕ ಹೆಸರನ್ನು ನೋಂದಣಿ ಮಾಡಲು ಅವಕಾಶವನ್ನು ನೀಡಲಾಗಿದೆ.

ಯಾವ ದಾಖಲೆ ಬೇಕು?:
ಮಿಂಚಿನ ನೋಂದಣಿ ಮೂಲಕ ಹೆಸರು ಸೇರಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ ಇಲ್ಲಿದೆ.

* ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ
* ವಿಳಾಸದ ದೃಢೀಕರಣ
* ಪಾಸ್ ಪೋರ್ಟ್ ಅಳತೆಯ ಫೋಟೋ ಗಳು

ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಬಯಸುವ ಜನರು nvsp.in ಅಥವಾ Voter Helpline App ಮೂಲಕ ನೋಂದಣಿ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+