ತುರ್ತು ಕಾಮಗಾರಿ, ರಾಜ್ಯದಲ್ಲಿ ಹಲವು ರೈಲು ಸಂಚಾರ ರದ್ದು!

ಈ ವಾರ ನೀವೇನಾದ್ರೂ ರೈಲಿನಲ್ಲಿ ಪ್ರಯಾಣ ಮಾಡಲು ಯೋಚಿಸಿದ್ದರೆ ಸ್ವಲ್ಪ ತಡೆಯಿರಿ. ಯಾಕೆಂದರೆ ರಾಜ್ಯದಲ್ಲಿ ಹಲವೆಡೆ ತುರ್ತು ಕಾಮಗಾರಿ ಕಾರಣದಿಂದಾಗಿ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಹಲವೆಡೆ ರೈಲುಗಳ ಮಾರ್ಗಗಳನ್ನೂ ಬದಲಾಯಿಸಲಾಗಿದೆ.

ಈ ಬಗ್ಗೆ ನೈರುತ್ಯ ರೈಲ್ವೆ ಪ್ರಕಟಣೆಯನ್ನು ಹೊರಡಿಸಿದೆ. ವೈಟ್‌ಫೀಲ್ಡ್ ಪ್ಯಾನಲ್ ಕ್ಯಾಬಿನ್ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 831ರಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದಾಗಿ ಫೆಬ್ರವರಿ 8 ಮತ್ತು 15ರಂದು ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು ಕೆಲ ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಹಾಗಾದರೆ ಯಾವೆಲ್ಲಾ ರೈಲುಗಳ ಸಂಚಾರ ರದ್ದಾಗಿದೆ ಎಂದು ತಿಳಿಯಿರಿ.

 Emergency work, many train services canceled in Karnataka

* ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಬಂಗಾರಪೇಟೆ ರೈಲುಗಳ ಸಂಚಾರವನ್ನು ಫೆ.9 ಮತ್ತು 16ರಂದು ರದ್ದುಗೊಳಿಸಲಾಗಿದೆ. (ರೈಲು ಸಂಖ್ಯೆ 06528)

*ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮೆಮು ವಿಶೇಷ ರೈಲನ್ನು ಫೆಬ್ರವರಿ 8 ಮತ್ತು 15, 2024 ರಂದು ರದ್ದುಗೊಳಿಸಲಾಗುತ್ತಿದೆ. (ರೈಲು ಸಂಖ್ಯೆ 06527)

ಮಾರ್ಗ ಬದಲಾವಣೆ

ಫೆಬ್ರವರಿ 14 ಮತ್ತು 18 ರಂದು ಹೊಸಪೇಟೆ ನಿಲ್ದಾಣದಿಂದ ಹೊರಡುವ ಹೊಸಪೇಟೆ-ಹರಿಹರ ಪ್ಯಾಸೆಂಜರ್ ವಿಶೇಷ ರೈಲು ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಿಗೆ ತೆರಳದೇ ತೆಲಗಿ, ಅಮರಾವತಿ ಕಾಲೋನಿ, ಹರಿಹರ ಮಾರ್ಗದ ಮೂಲಕ ಸಂಚರಿಸಲಿದೆ.

ಬೆಳಗಾವಿ-ಮೈಸೂರು ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್‌ ರೈಲನ್ನು ಫೆಬ್ರವರಿ 11ರಂದು ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ. ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಫೆ. 14ರಂದು ಮಾರ್ಗ ಮಧ್ಯೆ 60 ನಿಮಿಷ ನಿಲ್ಲಿಸಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಮರಾವತಿ ಕಾಲೋನಿ ಮತ್ತು ತೋಳಹುಣಸೆ ಯಾರ್ಡ್‌ಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿಗಳು ಈ ಕೆಳಗಿನ ಬದಲಾವಣೆ ರೈಲುಗಳನ್ನು ರದ್ದುಗೊಳಿಸುತ್ತವೆ, ಮಾರ್ಗ ಮತ್ತು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ. ಅವುಗಳ ಈ ಕೆಳಗಿನಂತಿವೆ:

ರೈಲುಗಳು ರದ್ದು

*ರೈಲು ಸಂಖ್ಯೆ 17348 ಚಿತ್ರದುರ್ಗ - ಎಸ್ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಚಿತ್ರದುರ್ಗ ಮತ್ತು ಹರಿಹರ ನಿಲ್ದಾಣಗಳ ನಡುವೆ ಫೆಬ್ರವರಿ 11, 2024 ರಂದು ರದ್ದಾಗಿದೆ.

*ರೈಲು ಸಂಖ್ಯೆ 17347 ಹುಬ್ಬಳ್ಳಿ - ಚಿತ್ರದುರ್ಗ ಡೈಲಿ ಎಕ್ಸ್ ಪ್ರೆಸ್ ರೈಲು ಹರಿಹರ ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವೆ ಎಸ್ಎಸ್ಎಸ್ ಫೆಬ್ರವರಿ 11, 2024 ರಂದು ರದ್ದಾಗಿದೆ.

ರೈಲುಗಳ ನಿಯಂತ್ರಣ

* ಬೆಳಗಾವಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17325 ಬೆಳಗಾವಿ - ಮೈಸೂರು ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ಫೆಬ್ರವರಿ 11, 2024 ರಂದು ನಿಯಂತ್ರಿಸಲಾಗುತ್ತಿದೆ.

* ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17392 ಎಸ್‌ಎಸ್‌ಎಸ್ ಹುಬ್ಬಳ್ಳಿ - ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಕಾಲ ಫೆಬ್ರವರಿ 14, 2024 ರಂದು ನಿಯಂತ್ರಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+