ಮಳೆ.. ಮಳೆ.. ಮಳೆ ಕಂಡು ಕುಣಿದಾಡಿದ ಆನೆ, ವಿಡಿಯೋ ವೈರಲ್!

ಮಳೆ.. ಮಳೆ.. ಮಳೆ.. ಹೀಗೆ ಎಲ್ಲೆಲ್ಲೂ ಭರ್ಜರಿ ಮಳೆಯ ಅಬ್ಬರ ಶುರುವಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ತೀವ್ರ ಸೆಕೆ ಹಾಗೂ ಬಿಸಿಗಾಳಿ ಪರಿಣಾಮ ಜನ ತತ್ತರಿಸಿದ್ದರು. ಆದರೆ ಇದೀಗ ಭರ್ಜರಿ ಮಳೆ ಸುರಿದ ಕಾರಣಕ್ಕೆ, ಜನ ನಿಟ್ಟುಸಿರು ಬಿಟ್ಟಿದ್ದಾರೆ. ರೈತರು ಖುಷಿಯಾಗಿ ಕುಣಿದಾಡಿದ್ದಾರೆ, ಮನುಷ್ಯರು ಮಾತ್ರ ಅಲ್ಲ ಆನೆ ಕೂಡ ಕಾಡಲ್ಲಿ ಮಳೆ ನೋಡಿ ಖುಷಿಯಲ್ಲಿ ಕುಣಿದಾಡಿದೆ! ಆ ವಿಡಿಯೋ ನೋಡಲು ಮುಂದೆ ಓದಿ.

ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೆಕ ಜಿಲ್ಲೆಗಳಿಗೆ ಕಳೆದ 4 ತಿಂಗಳಿಂದಲು ಕುಡಿಯುವ ನೀರಿಗೂ ಕಷ್ಟವಾಗಿದೆ. ಯಾಕಂದ್ರೆ ಕರ್ನಾಟಕದಲ್ಲಿ ನೀರು ಪೂರೈಸುವ ಜಲಾಶಯ ಒಣಗುತ್ತಾ ಬರುತ್ತಿವೆ. ಹಾಗೇ ಅಂತರ್ಜಲ ಕೂಡ ಕುಸಿದು ಹೋಗಿದೆ ಹೀಗಾಗಿ ಬೇಸಿಗೆ ಆರಂಭ ಆಗುತ್ತಿದ್ದಂತೆ ಜನರಿಗೆ ನೀರು ಸಿಗದೆ ಸಾವಿರಾರು ರೂಪಾಯಿ ಹಣ ಕೊಟ್ಟು ಟ್ಯಾಂಕರ್ ನೀರನ್ನೂ ತರಿಸಿದ್ದರು. ಹೀಗಿದ್ದಾಗ ಮಳೆಗಾಗಿ ಪ್ರಾರ್ಥನೆ ಕೂಡ ಮಾಡುತ್ತಿದ್ದರು. ಈಗ ಭರ್ಜರಿ ಮಳೆ ಆರಂಭವಾಗಿದ್ದು ಜನರಿಗೆ ಮಾತ್ರವಲ್ಲ ಕಾಡಿನಲ್ಲಿ ಇರುವ ಪ್ರಾಣಿಗಳಿಗೂ ಖುಷಿ ಆಗಿದೆ. ಹೀಗಾಗಿ ಆನೆಯೊಂದು ಖುಷಿಯಲ್ಲಿ ಕುಣಿದಾಡಿದ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋ ನೋಡಲು ಮುಂದೆ ಓದಿ.

Elephant Is Danced Happily After Seeing The Rain In Summer Of May 2024

ಮಳೆ ಬಂದ ಖುಷಿಯಲ್ಲಿ ಆನೆ ಡಾನ್ಸ್!

ಅಂದಹಾಗೆ ಆನೆಯೊಂದು ಕಾಡಿನಲ್ಲಿ ಮಳೆಯನ್ನ ಕಂಡು ಖುಷಿಯಾಗಿ ಕುಣಿದಾಡಿದ ಘಟನೆ ನಡೆದಿರುವುದು ನಮ್ಮ ಬಂಡೀಪುರದಲ್ಲಿ. ಕರ್ನಾಟಕದ ಹೆಮ್ಮೆ ಬಂಡೀಪುರದಲ್ಲಿ ಸಾವಿರಾರು ಪ್ರಾಣಿಗಳು ಆಶ್ರಯ ಪಡೆದಿವೆ. ಅದರಲ್ಲೂ ಆನೆಗಳ ಸಂಖ್ಯೆ ಕೂಡ ಹೇರಳವಾಗಿದ್ದು, ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಬಿಸಿಲು ಇದ್ದ ಕಾರಣಕ್ಕೆ ಪ್ರಾಣಿಗಳು ಪರದಾಡಿದ್ದವು. ಈ ಹಿನ್ನೆಲೆಯಲ್ಲಿ ಮಳೆ ಬರಲಿ ಅಂತಾ ಪ್ರಾಣಿಗಳು ಕೂಡ ಕಾಯುತ್ತಿದ್ದವು. ಇದೀಗ ಮಳೆ ತನ್ನ ಆರ್ಭಟವನ್ನ ಶುರು ಮಾಡಿದ್ದು, ಜನ ಮತ್ತು ಅನ್ನದಾತ ರೈತರ ಜೊತೆಗೆ ಪ್ರಾಣಿಗಳು ಕೂಡ ಖುಷಿಯಾಗಿವೆ. ಅದರಲ್ಲೂ ಬಂಡೀಪುರ ಅರಣ್ಯದಲ್ಲಿ ಆನೆಯೊಂದು ಭರ್ಜರಿಯಾಗಿ ಸಂತಸ ಹಂಚಿಕೊಂಡಿದೆ.

ಮಳೆ ಯಾವ ಯಾವ ಜಿಲ್ಲೆಗಳಿಗೆ ಬರಲಿದೆ?

ಮೇ ತಿಂಗಳ 15ನೇ ತಾರೀಖಿನ ತನಕ ಅಂದ್ರೆ ಈ ತಿಂಗಳಲ್ಲಿ ಮುಂದಿನ 2 ವಾರ ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ರಾಮನಗರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಜಿಲ್ಲೆಗಳಿಗೆ ಗುಡುಗು ಸಹಿತ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು. ಇದರ ಜೊತೆಗೆ ಕೊಡಗು ಮತ್ತು ಮೈಸೂರು, ಚಾಮರಾಜನಗರ, ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ ಎರಡು ವಾರಗಳ ಕಾಲ ಗುಡುಗು ಸಹಿತ ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ.

ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...

ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ.

ತಂಪು.. ತಂಪು.. ಕೂಲ್.. ಕೂಲ್..!

ಮಳೆ.. ಮಳೆ.. ಭರ್ಜರಿ ಮಳೆ ಬಂದಿದ್ದು, ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನರು ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು, ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹಾಗಾದರೆ ಇನ್ನೂ ಎಷ್ಟು ದಿನಗಳ ಕಾಲ ವಾತಾವರಣ ಹೀಗೆ ಇರಲಿದೆ ಗೊತ್ತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+