ಚುಟುಕು : ರಾಜ್ಯದಲ್ಲಿ ಇಂದು 3ಕಡೆ ರಾಹುಲ್ ಸಮಾವೇಶ
ಬೆಂಗಳೂರು, ಏ. 7 : ಕರ್ನಾಟಕದ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ರಾಜಕೀಯ ಚಿತ್ರಣವನ್ನು ಸಂಕ್ಷಿಪ್ತವಾಗಿ ನಿಮಗೆ ನೀಡುವ ಪ್ರಯತ್ನವಿದು.
ಸಮಯ 10.15 : ರಾಹುಲ್ ಗಾಂಧಿ ಸಮಾವೇಶ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ರಾಜ್ಯದಲ್ಲಿ 3 ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಶಿರಸಿ, ಮಧ್ಯಾಹ್ನ 1 ಗಂಟೆಗೆ ರಾಯಚೂರು ಮತ್ತು ಸಂಜೆ 5 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಹುಲ್ ಗಾಂಧಿ ಮತ ಯಾಚಿಸಿಲಿದ್ದಾರೆ.

10 ಗಂಟೆ : ಬುಧವಾರ ಸೋನಿಯಾ ಸಮಾವೇಶ : ಏ.9ರ ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದು, ಕೋಲಾರ, ಮೈಸೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]












Click it and Unblock the Notifications