• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ; ಮತ್ತೊಂದು ಉಪ ಚುನಾವಣೆ ಘೋಷಣೆ

|
Google Oneindia Kannada News

ಬೆಂಗಳೂರು, ನವೆಂಬರ್ 17 : ಕೇಂದ್ರ ಚುನಾವಣಾ ಆಯೋಗ ಕರ್ನಾಟಕದಲ್ಲಿ ಮತ್ತೊಂದು ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಡಿಸೆಂಬರ್ 12ರಂದು ಮತದಾನ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ಡಿಸೆಂಬರ್ 12ರಂದು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರ ಆಯ್ಕೆಗೆ ಉಪ ಚುನಾವಣೆ ನಡೆಯಲಿದೆ.

ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದ ಕೆ. ಸಿ. ರಾಮಮೂರ್ತಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದ ಕೆ. ಸಿ. ರಾಮಮೂರ್ತಿ

ಕಾಂಗ್ರೆಸ್ನಾಯಕ, ರಾಜ್ಯಸಭಾ ಸದಸ್ಯರ ಕೆ. ಸಿ. ರಾಮಮೂರ್ತಿ ಬಿಜೆಪಿ ಸೇರಿದರು. ಬಿಜೆಪಿ ಸೇರುವಾಗ ಅವರು ರಾಜ್ಯಸಭಾ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದರು. 2020ರ ಜೂನ್ 30ರ ತನಕ ಅವರ ಅವಧಿ ಇತ್ತು. ಈಗ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ರಾಮಮೂರ್ತಿ ಬಿಜೆಪಿಗೆ? ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ರಾಮಮೂರ್ತಿ ಬಿಜೆಪಿಗೆ?

ಕರ್ನಾಟಕದ 1 ಕ್ಷೇತ್ರದ ಜೊತೆಗೆ ಉತ್ತರ ಪ್ರದೇಶ ವಿಧಾನಸಭೆಯಿಂದ ಒಬ್ಬರು ಸದಸ್ಯರ ಆಯ್ಕೆಗೆ ಉಪ ಚುನಾವಣೆ ನಡೆಯಲಿದೆ. ಸಮಾಜವಾದಿ ಪಕ್ಷದ ಸದಸ್ಯ ತಾಜೀನ್ ಫಾತ್ಮಾ ವಿಧಾನಸಭೆ ಚುನಾವಣಾ ಕಣಕ್ಕಿಳಿಯಲು ರಾಜೀನಾಮೆ ನೀಡಿದ್ದರು.

ವ್ಯಕ್ತಿ ಚಿತ್ರ : ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ್ವ್ಯಕ್ತಿ ಚಿತ್ರ : ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ್

ತಾಜೀನ್ ಫಾತ್ಮಾ ರಾಜ್ಯಸಭಾ ಸದಸ್ಯತ್ವದ ಅವಧಿ 2020ರ ನವೆಂಬರ್ 25ರ ತನಕ ಇತ್ತು. ಈ ಸ್ಥಾನವನ್ನು ಭರ್ತಿ ಮಾಡಲು ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ರಾಜ್ಯ ವಿಧಾನಸಭೆ ಶಾಸಕರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುತ್ತಾರೆ.

ಉಪ ಚುನಾವಣೆ ವೇಳಾಪಟ್ಟಿ

* ಡಿಸೆಂಬರ್ 2 ನಾಮಪತ್ರ ಸಲ್ಲಿಕೆಗೆ ಕೊನೆ ದಿನ
* ಡಿಸೆಂಬರ್ 3 ನಾಮಪತ್ರ ಪರಿಶೀಲನೆ
* ಡಿಸೆಂಬರ್ 5 ನಾಮಪತ್ರ ವಾಪಸ್ ಪಡೆಯಲಯ ಕೊನೆ ದಿನ
* ಡಿಸೆಂಬರ್ 12 ಚುನಾವಣೆ
* ಡಿಸೆಂಬರ್ 12 ಮತ ಎಣಿಕೆ

English summary
Election commission of India announced schedule for Karnataka and Uttra Pradesh one seat rajya sabha by elections. Election will be held on December 12, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X