KSTDC: ಕರ್ನಾಟಕದಾದ್ಯಂತ ಮೇ 10ಕ್ಕೆ ಈ ಹೋಟೆಲ್‌ಗಳಲ್ಲಿ ಶೇ.50 ರಿಯಾಯಿತಿ ಸೌಲಭ್ಯ ಲಭ್ಯ
ಬೆಂಗಳೂರು, ಮೇ 06: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಮೇ 10ರಂದು, ಮತ ಎಣಿಕೆ ಪ್ರಕ್ರಿಯೆ ಮೇ 13ರಂದು ನಡೆಯಲಿದೆ. ಈ ಸಂಬಂಧ ಈಗಾಗಲೇ ಬೆಂಗಳೂರಿನ ಕೆಲವು ಹೋಟೆಲ್ ಉಚಿತ ಆಹಾರ ನೀಡುವುದಾಗಿ ಹೇಳಿವೆ. ಇದೀಗ ರಾಜ್ಯಾದ್ಯಂತ ಸರ್ಕಾರಿ ವ್ಯಾಪ್ತಿಯ ಹೋಟೆಲ್‌ಗಳಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆ ಆಗಿದೆ. ಇದು ಮೇ 10ರಂದು ಅನ್ವಯಿಸಲಿದೆ.
ರಾಜ್ಯದಲ್ಲಿನ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತ ಚಲಾಯಿಸುವವರಿಗೆ ಕರ್ನಾಟಕದಲ್ಲಿರುವ ಸರ್ಕಾರಿ ಹೋಟೆಲ್‌ಗಳು ಶೇಕಡಾ 50 ರಷ್ಟು ರಿಯಾಯಿತಿಯನ್ನು ಘೋಷಿಸಿವೆ. ಈ ಕೊಡುಗೆಯನ್ನು ಮತದಾರರು ಬುಧವಾರ (ಮೇ 10) ರಾಜ್ಯದಲ್ಲಿ ಮಯೂರ ಹೋಟೆಲ್‌ಗಳಲ್ಲಿ ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತಿಳಿಸಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಕಾರ, ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಬೇಕು. ಈ ಸಂಬಂಧ ನಿಗಮದ ಒಡೆತನದ 'ಮಯೂರ' ಹೋಟೆಲ್‌ಗಳಲ್ಲಿ ತಂಗಲು 50ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
ರಾಜ್ಯದಾದ್ಯಂತ ಮತದಾನ ಮಾಡುವ ಸಾರ್ವಜನಿಕರಿಗೆ/ಪ್ರವಾಸಿಗರಿಗೆ. ವಿಶೇಷ ರಿಯಾಯಿತಿಯನ್ನು ಪಡೆಯಲು ಬಯಸುವ ಸಾರ್ವಜನಿಕರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಅಗತ್ಯವುಳ್ಳವರು ರಾಜ್ಯದ ವಿವಿಧೆಡೆ ಪ್ರವಾಸಿ ಸ್ಥಳಗಳಲ್ಲಿರುವ ಎಲ್ಲ ಮಯೂರ ಹೋಟೆಲ್‌ಗಳಲ್ಲಿ ಈ ರಿಯಾಯಿತಿ ಸೌಲಭ್ಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದೆ.

ನಿಸರ್ಗಾ ಗ್ರ್ಯಾಂಡ್‌ನಿಂದ ಉಚಿತ ಊಟ
ಶನಿವಾರವಷ್ಟೇ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗಾ ಗ್ರ್ಯಾಂಡ್ ಹೋಟೆಲ್‌ನಲ್ಲಿ ಮೇ 10ರಂದು ಮತದಾನ ಮಾಡಿ ಬಂದು ಶಾಹಿ ಗುರುತು ತೋರಿಸಿದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರುಪಾಕ್, ತಂಪು ಪಾನೀಯ ನೀಡುವುದಾಗಿ ಘೊಷಿಸಿದೆ. ಅಲ್ಲದೇ 100 ಯುವ ಮತದಾರಿಗೆ ಉಚಿತ ಸಿನಿಮಾ ಟಿಕೆಟ್ ಕೊಡುವ ಮೂಲಕ ಮತದಾನಕ್ಕೆ ಉತ್ತೇಜಿಸಲಾಗುತ್ತಿದೆ ಎಂದು ಹೋಟೆಲ್ ಮುಂಭಾಗದ ಬ್ಯಾನರ್ ಅಳವಡಿಸಿದೆ.
ಕರ್ನಾಟಕದ ಎಲ್ಲಾ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಬುಧವಾರ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಜ್ಜಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಜನಾದೇಶವನ್ನು ಗೆಲ್ಲುವ ವಿಶ್ವಾಸವನ್ನು ತೋರಿಸಿವೆ. ಜೆಡಿಎಸ್ ಪಕ್ಷವು ಮತ್ತೊಮ್ಮೆ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.












Click it and Unblock the Notifications