Eedina pre-poll Survey: ಉತ್ತರ, ದಕ್ಷಿಣ ಎರಡರಲ್ಲೂ ಕಾಂಗ್ರೆಸ್ ಕೈ ಹಿಡಿಯುತ್ತಾರಾ ಮತದಾರ?
ಬೆಂಗಳೂರು, ಏಪ್ರಿಲ್. 27: ರಾಜ್ಯದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮುನ್ನ ಹಲವು ಸುದ್ದಿ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ರಾಜ್ಯಾದ್ಯಂತ ಸಮೀಕ್ಷೆ ನಡೆಸಿರುವ ಈದಿನ.ಕಾಮ್ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಪ್ರದೇಶವಾರು ಅಂಕಿ ಅಂಶಗಳನ್ನು ಬಹಿರಂಗಪಡಿಸಿರುವ ಈ ದಿನ ವೆಬ್ ತಾಣ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎರಡು ಕಡೆಗಳಲ್ಲಿ ಕಾಂಗ್ರೆಸ್‌ಗೆ ಮತದಾರ ಒಲವು ತೋರಿದ್ದಾನೆ ಎಂದು ತಿಳಿಸಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 132 ರಿಂದ 140 ಸ್ಥಾನಗಳನ್ನು ಸಲೀಸಾಗಿ ದಾಟಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

*ಈದಿನ.ಕಾಮ್ ಸಮೀಕ್ಷೆ ಪ್ರಕಾರ ವಲಯವರು ಸ್ಥಾನ ಹಂಚಿಕೆ ಹೀಗಿದೆ*
ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ದಲ್ಲಿ ಒಟ್ಟು 40 ಸ್ಥಾನಗಳಿದ್ದು ಈ ಸ್ಥಾನಗಳಲ್ಲಿ ಕಾಂಗ್ರೆಸ್ 31 ರಿಂದ 37 ಸ್ಥಾನ ಗಳಿಸಲಿದೆ. ಬಿಜೆಪಿ 2 ರಿಂದ 4 ಮತ್ತು ಜೆಡಿಎಸ್ ಕೂಡ 2 ರಿಂದ 4 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
*ಮುಂಬಯಿ ಕರ್ನಾಟಕ* (ಕಿತ್ತೂರು ಕರ್ನಾಟಕ) ದಲ್ಲಿ ಒಟ್ಟು 50 ಸ್ಥಾನಗಳಿದ್ದು ಈ ಸ್ಥಾನಗಳಲ್ಲಿ ಕಾಂಗ್ರೆಸ್ 40 ರಿಂದ 46 ಸ್ಥಾನ ಗಳಿಸಲಿದೆ. ಬಿಜೆಪಿ 3 ರಿಂದ 7 ಮತ್ತು ಜೆಡಿಎಸ್ 0 ರಿಂದ 2 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ಕರಾವಳಿ ಕರ್ನಾಟಕ ದಲ್ಲಿ ಒಟ್ಟು 19 ಸ್ಥಾನಗಳಿದ್ದು ಈ ಸ್ಥಾನಗಳಲ್ಲಿ ಕಾಂಗ್ರೆಸ್ 5 ರಿಂದ 9 ಸ್ಥಾನ ಗಳಿಸಲಿದೆ. ಬಿಜೆಪಿ 10 ರಿಂದ 14 ಸ್ಥಾನ ಗಳಿಸಲಿದೆ. ಆದರೆ, ಜೆಡಿಎಸ್ ಯಾವುದೇ ಸ್ಥಾನ ಗಳಿಸುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಮಧ್ಯ ಕರ್ನಾಟಕ (ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ) ಈ ಭಾಗದಲ್ಲಿ ಒಟ್ಟು 26 ಸ್ಥಾನಗಳಿದ್ದು ಇದರಲ್ಲಿ ಕಾಂಗ್ರೆಸ್ 3 ರಿಂದ 7 ಸ್ಥಾನ ಗಳಿಸಲಿದೆ. ಬಿಜೆಪಿ ಭರ್ಜರಿಯಾಗಿ 19 ರಿಂದ 23 ಸ್ಥಾನ ಗಳಿಸಲಿದೆ. ಆದರೆ, ಜೆಡಿಎಸ್ ಯಾವುದೇ ಸ್ಥಾನ ಗಳಿಸುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ದಕ್ಷಿಣ ಕರ್ನಾಟಕ ದಲ್ಲಿ ಒಟ್ಟು 61 ಸ್ಥಾನಗಳಿದ್ದು , ಈ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 26 ರಿಂದ 32 ಸ್ಥಾನ ಗಳಿಸಲಿದೆ. ಬಿಜೆಪಿ 10 ರಿಂದ 14 ಮತ್ತು ಜೆಡಿಎಸ್ 15 ರಿಂದ 19 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಬೆಂಗಳೂರು ನಗರ ದಲ್ಲಿ ಒಟ್ಟು 28 ಸ್ಥಾನಗಳಿದ್ದು, ಇದರಲ್ಲಿ ಕಾಂಗ್ರೆಸ್ 16 ರಿಂದ 20 ಸ್ಥಾನ ಗಳಿಸಲಿದೆ. ಬಿಜೆಪಿ 6 ರಿಂದ 10 ಮತ್ತು ಜೆಡಿಎಸ್ 1 ರಿಂದ 3 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆಯ ಅಂಕಿ ಅಂಶಗಳು ತಿಳಿಸಿವೆ.

ಇನ್ನು, ಮತವಿಂಗಡನೆ ನೋಡಿದರೆ ಜೆಡಿಎಸ್ ಮತ್ತು ಬಿಜೆಪಿ ಎರಡೂ ತಮ್ಮ ಮತಗಳನ್ನು ಕಳೆದುಕೊಳ್ಳಲಿವೆ ಎಂದು ವರದಿ ಮಾಡಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 38.1% ಮತಗಳನ್ನು ಪಡೆದಿತ್ತು. ಈ ಬಾರಿ ಅದು 43%ಗೆ ಏರಿಕೆಯಾಗಲಿದೆ. ಬಿಜೆಪಿ ಕಳೆದ ಬಾರಿ 36.3% ಮತಗಳನ್ನು ಪಡೆದಿತ್ತು ಅದು ಈ ಬಾರಿ 33%ಗೆ ಇಳಿಕೆಯಾಗಲಿದೆ.
ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ ಕಳೆದ ಬಾರಿ 18.3% ಮತಗಳ ಪ್ರಮಾಣವನ್ನು ತಮ್ಮ ಬುಟ್ಟಿಗೆ ಜಾಕಿಕೊಂಡಿತ್ತು ಆದರೆ, ಈ ಬಾರಿ ಅದು 16%ಗೆ ಇಳಿಕೆಯಾಗಲಿದೆ. ಇದರ ಜೊತೆಗೆ ಇತರರು ಕಳೆದ ಚುನಾವಣೆಯಲ್ಲಿ 7.4% ಮತ ಪಡೆದಿದ್ದರು, ಈ ಬಾರಿ ಅವರ ಮತಗಳ ಪ್ರಮಾಣ 8%ಗೆ ಏರಿಕೆಯಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಇನ್ನು, ಕಳೆದ ಚುನಾವಣೆಯಲ್ಲಿ 104 ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಈ ಬಾರಿ 57 ರಿಂದ 65 ಸ್ಥಾನಗಳಿಗೆ ಕುಸಿಯಲಿದೆ. ಹಿಂದಿನ ಚುನಾವಣೆಯಲ್ಲಿ 80 ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದ ಕಾಂಗ್ರೆಸ್ ಈ ಬಾರಿ 132 ರಿಂದ 140 ಸ್ಥಾನಗಳಲ್ಲಿ ಜಯ ಗಳಿಸಸಲಿದೆ. ಇನ್ನು, ಜೆಡಿಎಸ್ ಕಳೆದ ಬಾರಿ 37ಗಳಲ್ಲಿ ಗೆಲುವು ದಾಖಲಿಸಿತ್ತು. ಈ ಬಾರಿ 19 ರಿಂದ 25 ಸ್ಥಾನಗಳಿಗೆ ತೃಪ್ತಿ ಪಡಬೇಕಾಗುತ್ತದೆ. 3 ಸ್ಥಾನಗಳನ್ನು ಗಳಿಸಿದ್ದ ಇತರರು ಈ ಬಾರಿ 1 ರಿಂದ 5 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಫಲಿತಾಂಶ ನೀಡಿದೆ.
-
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications