Madhu Bangarappa: ಬಾಂಬ್ ಬೆದರಿಕೆ ಹೇಳಿಕೆಗೆ ಶಿಕ್ಷಣ ಸಚಿವರು ಭಾರೀ ಟ್ರೋಲ್... Bomb Threat
ಬೆಂಗಳೂರು, ಜುಲೈ 18: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಶಾಲೆಗಳಿಗೆ ಮಕ್ಕಳನ್ನು ಜೀವ ಕೈಲಿ ಹಿಡಿದು ವಿದ್ಯಾಭ್ಯಾಸಕ್ಕೆ ಕಳುಹಿಸುವ ಪರಿಸ್ಥಿತಿ ಪೋಷಕರಿಗೆ ಇದಿಯಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ ಬಾಂಬ್ ಬೆದರಿಕೆ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿಕೆಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಚಿವರನ್ನು ಟ್ರೋಲ್ ಮಾಡಲಾಗುತ್ತಿದೆ.
ಮಾಧ್ಯಮಗಳ ಮುಂದೆ ಬಾಂಬ್ ಬೆದರಿಕೆ ಬಗ್ಗೆ ಸಮರ್ಪಕವಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ''ಕಾನೂನು ಇದೆ ಆದ್ರೆ ಪೋಷಕರಿಗೆ /ಮಕ್ಕಳಿಗೆ ಒಂದು ಧೈರ್ಯದ ಮಾತು ಹೇಳೋದು ಇವರ ಕರ್ತವ್ಯ ಅಲ್ವಾ? ಅದು ಹುಸಿ ಬಾಂಬ ಬೆದರಿಕೆಯೇ ಇರಬಹುದು, ಆದ್ರೆ ಮಕ್ಕಳ ವಿಷಯ ಬಂದಾಗ ಈ ಹಾರಿಕೆಯ ಉತ್ತರ ಕೊಡೋನು ಅದು ಯಾವ ಸೀಮೆ ಶಿಕ್ಷಣ ಸಚಿವ...'' ಎಂದು ಶಿಕ್ಷಣ ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಕ್ಕಳ ರಕ್ಷಣೆ ವಿಚಾರದಲ್ಲೂ ಸಚಿವರು ಸಮಾಧಾನಕರ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ಆಗಿದ್ದೇನು? ಸಚಿವರ ಹೇಳಿದ್ದೇನು?
ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿವೆ. ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಪೋಷಕರು ಆತಂಕಕ್ಕೀಡಾಗಿದ್ದಾರೆ. ಇದೇ ವಿಚಾರವನ್ನು ಮಾಧ್ಯಮದವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಳಿಕ ಕೇಳಿದ್ದಕ್ಕೆ ಹಾರಿಕೆ ಉತ್ತರ ಕೊಡುವ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಬಾಂಬ್ ಬೆದರಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ ಅವರು ''ಇವೆಲ್ಲ ಹೋಕ್ಸ್, (ವಂಚನೆ, ಹುಸಿ) ನಾನು ಬಂದಾಗಲೂ ಇತ್ತು. ಇದೆಲ್ಲ ಮಾತನಾಡುವುದು ತಪ್ಪು, ನೀವು ಕೇಳುವುದು ತಪ್ಪು. 40 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಗ್ಗೆ ನನಗೆ ಗೊತ್ತಿಲ್ಲ, ಏನು ಇಲ್ಲ. ಕಾನೂನು ಇದೆ. ಕಾನೂನು ನೋಡಿಕೊಳ್ಳುತ್ತದೆ. ಅದೆಲ್ಲ ಬಿಡಿ. ಬೇರೆ ಪಾಠ-ಗಿಠದ್ದು ಇದ್ದರೆ ಹೇಳಿ'' ಎಂದು ಬಹಿರಂಗವಾಗಿ ಹೇಳಿ ಕಾರು ಹತ್ತಿದ್ದಾರೆ.
ಪೋಷಕರಿಗೆ, ಶಿಕ್ಷಕರಿಗೆ ಧೈರ್ಯ ಹೇಳಬೇಕಿತ್ತು..
ಇಂತಹ ಘಟನೆಗಳು ಆದಾಗ ಪೋಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ ಶಿಕ್ಷಣ ಸಚಿವರು ಧೈರ್ಯ ಹೇಳಬೇಕು. ಆತಂಕದಲ್ಲಿರುವ ಪೋಷಕರು, ಮಕ್ಕಳಿಗೆ ಸಮಾಧಾನಕರ ಮಾತನಾಡಬೇಕಾದ ಹುದ್ದೆಯಲ್ಲಿರುವವರೇ ಈ ರೀತಿ ಹಾರಿಕೆ ಉತ್ತರ ನೀಡಿ, ನನಗೇನು ಗೊತ್ತಿಲ್ಲ ಎಂದು ಹೇಳಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ, ಮುಂದೆ ಹೀಗಾಗದಂತೆ ನೋಡಿಕೊಳ್ಳವು ಭರವಸೆಯನ್ನು ಅವರು ನೀಡಬೇಕಿತ್ತು. ಆದರೆ ಅದಕ್ಕೆ ತದ್ವಿರುದ್ಧವಾಗಿ ಮಾತನಾಡಿದ್ದಾರೆ. ಒಂದು ವೇಳೆ ಕಹಿಘಟನೆಗಳು ಏನಾದರೂ ಸಂಭವಿಸಿದರೆ ಯಾರು ಹೊಣೆ ? ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೆ ಹೇಗೆ? ಎಂಬ ಪ್ರಶ್ನೆ ಉದ್ಭವವಾಗಿದೆ.
ಎಐ ಬಳಸಿ ಟ್ರೋಲ್
ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಡೈಲಾಗ್ ವೊಂದಕ್ಕೆ ಸಚಿವರನ್ನು ಎಐ ತಂತ್ರಜ್ಞಾನ ಮೂಲಕ ಹೋಲಿಕೆ ಮಾಡಿ ಕಾಲೆಳೆಯಲಾಗಿದೆ. ''ಆಕಸ್ಮಾತ್ ದೇವರಲ್ಲಿ ನನ್ನ ಮುಂದೆ ಪ್ರತ್ಯಕ್ಷನಾದರೆ...ನಾನು ದೇವರಲ್ಲಿ ಒಳ್ಳೆಯ ವಿದ್ಯೆ,ಬುದ್ಧಿ, ಜ್ಞಾನಾರ್ಜನೆ ಕೊಡಪ್ಪ ಎಂದು ಕೇಳಿ ಕೊಳ್ಳುತ್ತೇನೆ''ಎನ್ನುವ ಡೈಲಾಗ್ ಹೋಲಿಕೆ ಮಾಡಿ ಶಿಕ್ಷಣ ಸಚಿವರ ನಡೆಯಲ್ಲಿ ಸಾರ್ವಜನಿಕು ಖಂಡಿಸಿದ್ದಾರೆ.












Click it and Unblock the Notifications