SSLC ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆಯ ನೂತನ ಪ್ಲಾನ್ ಹೀಗಿದೆ
ಬೆಂಗಳೂರು, ಸೆಪ್ಟೆಂಬರ್, 05: ರಾಜ್ಯದ SSLC ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆಯ ನೂತನ ಪ್ಲಾನ್ ಮಾಡಿದೆ. ಹಾಗಾದರೆ ಆ ಪ್ಲಾನ್ ಏನು ಅಂತೀರಾ ಇಲ್ಲಿದೆ ನೋಡಿ ವಿವರ.
ಇತ್ತೀಚಿಗಷ್ಟೇ ಪಿಯುಸಿ ವಿದ್ಯಾರ್ಥಿಗಳಿಗೆ ಎರೆಡು ಪೂರಕ ಪರೀಕ್ಷೆ ಮಾಡಿ ಇಲಾಖೆ ಪ್ರಶಂಸೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಇದೀಗ SSLC ವಿದ್ಯಾರ್ಥಿಗಳಿಗೂ ಎರೆಡೆರಡು ಪೂರಕ ಪರೀಕ್ಷೆ ಮಾಡಲು ನಿರ್ಧಾರ ಮಾಡಿದ್ದು, ಈ ಸಂಬಂಧ ಯಾವ ರೀತಿ ಪರೀಕ್ಷೆ ಮಾಡಬಹುದು ಅನ್ನುವ ಬಗ್ಗೆ ಇಲಾಖೆ ಚರ್ಚೆಯ ಹಂತದಲ್ಲಿದೆ.
ಮೂಲಗಳ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷಕ್ಕೆ ಎರೆಡೆರಡು ಪೂರಕ ಪರೀಕ್ಷೆ ಪರಿಚಯಿಸುವ ಲೆಕ್ಕಾಚಾರ ಇದ್ದು, ಅದರ ಮಾಹಿತಿಯನ್ನು ಇಲ್ಲಿ ನೀಡಿದ್ದಾರೆ ಗಮನಿಸಿ.

ಪೂರಕ ಪರೀಕ್ಷೆ ಪ್ಲಾನ್ ಹೀಗಿದೆ
1. ಮುಂದಿನ ಶೈಕ್ಷಣಿಕ ಸಾಲಿನಿಂದ SSLC ಪರೀಕ್ಷೆಯಲ್ಲಿ ಎರಡೆರಡು ಪೂರಕ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಪ್ರಸ್ತಾವನೆ.
2. ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವ ವಿದ್ಯಾರ್ಥಿಗಳಿಗೋಸ್ಕರ ಹೆಚ್ಚೆಚ್ಚು ಪೂರಕ ಪರೀಕ್ಷೆ ಮಾಡಲು ಪ್ಲಾನ್.
3. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೂಡ ಈ ಪ್ಲಾನ್ ವರ್ಕ್ ಔಟ್ ಆಗೋ ಸಾಧ್ಯತೆಯಿದೆ.
4. ಪ್ರಸಕ್ತ ಸಾಲಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಎರೆಡೆರಡು ಪೂರಕ ಪರೀಕ್ಷೆ ಪರಿಚಯಿಸಿ ಯಶಸ್ಸು ಕಂಡಿರುವ ಶಾಲಾ ಶಿಕ್ಷಣ ಇಲಾಖೆ
ಇದೀಗ SSLCಯಲ್ಲೂ ಪೂರಕ ಪರೀಕ್ಷೆ ನಡೆಸಲು ಪ್ಲಾನ್ ಮಾಡಿಕೊಂಡಿದೆ.
5. ಶೇಕಡಾವಾರು ಪಾಸ್ ಆಗುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಒನ್ ಟು ಡಬಲ್ ಆಗುವ ಲೆಕ್ಕಾಚಾರ ಇದೆ.
ಶಾಲಾ ಶಿಕ್ಷಣ ಇಲಾಖೆ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪೂರಕ ಪರೀಕ್ಷೆಯ ಅವಕಾಶ ಘೋಷಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದರೆ ವಿದ್ಯಾರ್ಥಿಗಳ ಫಲಿತಾಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಸದ್ಯ ಪಿಯು ಪೂರಕ ಪರೀಕ್ಷೆ ಮುಕ್ತಾಯ ಹಂತಕ್ಕೆ ಬಂದಿದ್ದು, ಈ ಬೆನ್ನಲ್ಲೇ SSLC ವಿದ್ಯಾರ್ಥಿಗಳಿಗೆ ಏರಡೆರಡು ಪೂರಕ ಪರೀಕ್ಷೆ ಮಾಡಲು ಪ್ಲಾನ್ ಮಾಡಿಕೊಂಡಿದೆ.
ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪೂರಕ ಪರೀಕ್ಷೆ
1. 1,21,179 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, ಅದರಲ್ಲಿ 7253 ವಿದ್ಯಾರ್ಥಿಗಳು 2022ರ ಮೊದಲು ಅನುತ್ತೀರ್ಣರಾಗಿದ್ದರು.
2. 2022 ರ ಪಿಯು ಪರೀಕ್ಷೆಯಲ್ಲಿ17,966 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು.
3. 2023ರ ಪಿಯು ಪರೀಕ್ಷೆಯಲ್ಲಿ 95,960 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು.












Click it and Unblock the Notifications